Breaking News

ಸೋಜಾ ಮೆಟಲ್ಸ್ ಮಾಲಕ ಜೋನ್ ಕುಟಿನ್ಹಾರವರಿಗೆ ಪತ್ನಿವಿಯೋಗ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿ ಹಲವು ವರ್ಷಗಳಿಂದ ವ್ಯವಹರಿಸುತ್ತಿರುವ ಸೋಜಾ ಮೆಟಲ್ಸ್ ಸಂಸ್ಥೆಯ ಮಾಲಕರಾದ ಹಾರಾಡಿ ನಿವಾಸಿ ಜೋನ್ ಕುಟಿನ್ಹಾರವರ ಪತ್ನಿ ಜೆಸಿಂತಾ ಮಾಡ್ತಾ(70ವ.)ರವರು ಅನಾರೋಗ್ಯದ ನಿಮಿತ್ತ ಆ.8 ರಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.

ಮೃತ ಜೆಸಿಂತಾ ಮಾಡ್ತಾರವರು ಓರ್ವ ಶಿಕ್ಷಕಿಯಾಗಿದ್ದು, ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ವೃತ್ತಿಯನ್ನು ನಿರ್ವಹಿಸಿ 2008 ರಲ್ಲಿ ನಿವೃತ್ತಿ ಹೊಂದಿದ್ದರು. ಲಿಟ್ಲ್ ಫ್ಲವರ್ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ ಜೆಸಿಂತಾ ಮಾಡ್ತಾರವರು ಸ್ಕೌಟ್ಸ್ ಗೈಡ್ಸ್ ನ ಜವಾಬ್ದಾರಿಯನ್ನು ಅಂದು ಯಶಸ್ವಿಯಾಗಿ ನಿರ್ವಹಿಸಿದ್ದರು. ಮೃತರು ಪತಿ ಜೋನ್ ಕುಟಿನ್ಹಾ ಸಹಿತ ಪುತ್ರರಾದ ಜೋಯೆಲ್, ಜೀವನ್, ಜೋಸ್ಲಿ, ಸೊಸೆಯಂದಿರಾದ ಶಾಂತಿ, ಶರ್ಮಿಳಾ, ಡಾ/ಡಿಂಪಲ್ ಜೆನಿಫರ್ ಫೆರ್ನಾಂಡೀಸ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು  ಸಂಜೆ ಪುತ್ತೂರು ಏಳ್ಮುಡಿ ಸಿಮೆತರಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.