Breaking News

ಸಿಟಿಗುಡ್ಡೆಯಲ್ಲಿ ಕುಸಿಯುತ್ತಿರುವ ಮಣ್ಣು – ಅಪಾಯದ ಅಂಚಿನಲ್ಲಿ ಕಾಂಕ್ರೀಟ್ ರಸ್ತೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಹುರನಗರ ಸಿಟಿಗುಡ್ಡೆಯಲ್ಲಿ ಮಳೆಯಿಂದಾಗಿ ರಸ್ತೆ ಬದಿಯ ಮಣ್ಣು ಕುಸಿಯುತ್ತಿದ್ದು ಕಾಂಕ್ರೀಟ್ ರಸ್ತೆಯೊಂದು ಅಪಾಯದ ಅಂಚಿನಲ್ಲಿದೆ. ಸಿಟಿಗುಡ್ಡೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು ಅವರಿಗೆ ಈ ರಸ್ತೆ ಸಂಪರ್ಕ ರಸ್ತೆಯಾಗಿದೆ.

ಆದರೆ ನಿರಂತರ ಮಳೆಯಿಂದಾಗಿ ರಸ್ತೆ ಬದಿಯ ಮಣ್ಣು ಕುಸಿಯುತ್ತಿದ್ದು, ಕಾಂಕ್ರೀಟಿಕರಣ ಗೊಂಡ ರಸ್ತೆ ಅಪಾಯದ ಅಂಚಿನಲ್ಲಿದೆ. ಇತ್ತೀಚೆಗೆ ಇದೇ ರಸ್ತೆಯಲ್ಲಿ ಟಿಪ್ಪರ್‌ವೊಂದು ರಸ್ತೆ ಅಂಚಿನಲ್ಲಿ ಚಲಿಸಿ ಕೆಳಗಡೆ ಬಿದ್ದ ಘಟನೆ ನಡೆದಿತ್ತು. ಈ ನಿಟ್ಟಿನಲ್ಲಿ ರಸ್ತೆ ಬದಿಗೆ ತಡೆಗೋಡೆ ನಿರ್ಮಾಣ ಮಾಡಿಸುವ ಕುರಿತು ನಗರಸಭೆಗೆ ಸ್ಥಳೀಯ 36 ಮಂದಿ ಸಹಿ ಹಾಕಿ ಮನವಿ ಮಾಡಲಾಗಿದೆ. ಆದರೆ ಈ ತನಕ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರಿಂದ ಆರೋಪ ವ್ಯಕ್ತವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.