Breaking News

ಮೈದುಂಬಿ ಹರಿಯುತ್ತಿರುವ ಜೀವನದಿಗಳು: ನೆರೆ ಭೀತಿ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ದ.ಕ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ, ಕುಮಾರಧಾರ ನದಿಗಳು ಅಪಾಯದ ಮಟ್ಟದ ಮಟ್ಟ ಮೀರಿ ಹರಿಯುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡು ನೆರೆಭೀತಿ ಸೃಷ್ಟಿಸಿವೆ. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಬಳಿ ದೇವಾಲಯದ ಆವರಣಕ್ಕೆ ಸಮಾನಾಂತರವಾಗಿ ನದಿ ನೀರು ಇದ್ದು, ಉಭಯ ನದಿಗಳು ಪವಿತ್ರ ಸಂಗಮವಾಗುವ ನಿರೀಕ್ಷೆ ಮೂಡಿಸಿವೆ.

ಉಪ್ಪಿನಂಗಡಿಯಲ್ಲಿ ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನವರೆಗೆ ೧೧೭.೬ ಮೀ.ಮೀ. ಮಳೆಯಾಗಿದ್ದು, ಬಸ್‌ನಿಲ್ದಾಣದ ಬಳಿಯ ನದಿ ದಡದಲ್ಲಿರುವ ಕಂದಾಯ ಇಲಾಖೆಯ ಮಾಪಕದಲ್ಲಿ ನದಿ ನೀರಿನ ಮಟ್ಟ ೨೯ ಮೀ. ದಾಖಲಾಗಿದೆ. ಇಲ್ಲಿ ನದಿ ನೀರಿನ ಅಪಾಯದ ಮಟ್ಟ ೨೬.೫ ಮೀ. ಆಗಿದ್ದು ೩೦ ಮೀ. ನೀರಿನ ಮಟ್ಟ ದಾಖಲಾದಾಗ ನೆರೆ ಬರುತ್ತದೆ. ಈಗಾಗಲೇ ನದಿ ನೀರಿನ ತೀರದ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ.

ನೆರೆ ಬಂದರೆ ಪಂಜಾಳ, ಬೆದ್ರೋಡಿ ಮತ್ತು ನೀರಕಟ್ಟೆ, ಹಳೆಗೇಟು ದಡ್ಡು ಪ್ರದೇಶದಲ್ಲಿ ನೆರೆ ನೀರು ರಾಷ್ಟ್ರೀಯ ಹೆದ್ದಾರಿಯನ್ನು ಆವರಿಸಿಕೊಳ್ಳುತ್ತದೆ. ಕುಮಾರಧಾರ ನೇತ್ರಾವತಿ ನದಿ ಪಾತ್ರದ ನಟ್ಟಿಬೈಲು, ಕಜೆಕ್ಕಾರ್, ರಂಗಾಜೆ, ಹರಪ್ಪ ವಿದ್ಯಾಲಯ, ಉಪ್ಪಿನಂಗಡಿಯ ಕೋಟೆ, ಸೂರಪ್ಪ ಕಾಂಪೌಂಡ್ ಮತ್ತಿತರ ಪ್ರದೇಶಗಳು ಜಲಾವೃತಗೊಳ್ಳುತ್ತವೆ. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಬಳಿ ಸಂಗಮವಾಗುವುದು ಮಾಮೂಲಿಯಾದರೆ, ಮಳೆಗಾಲದಲ್ಲಿ ದೇವಾಲಯದ ಎಡಭಾಗದಿಂದ ನೇತ್ರಾವತಿ ನದಿ, ಬಲಭಾಗದಿಂದ ಕುಮಾರಧಾರ ನದಿಯು ಉಕ್ಕೇರಿ ಬಂದು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಪ್ರವೇಶದ್ವಾರದ ಬಳಿಕ ಎರಡೂ ನದಿಗಳ ನೀರು ಪರಸ್ವರ ಸಂಗಮಗೊಂಡು ದೇವಾಲಯದ ಒಳಗೆ ನೀರು ಹೋದರೆ ಪವಿತ್ರ ಸಂಗಮವಾಯಿತೆಂದು ಲೆಕ್ಕ. ಬಳಿಕ ದೇವಾಲಯದ ವತಿಯಿಂದ ಗಂಗಾಪೂಜೆ ನಡೆಸಲಾಗುತ್ತದೆ. ಕಳೆದ ವರ್ಷ ಆಗಸ್ಟ್ ೯ರಂದು ರಾತ್ರಿ ೭ರ ಸುಮಾರಿಗೆ ಇಲ್ಲಿ ಪವಿತ್ರ ಸಂಗಮವಾಗಿತ್ತು. ಕುಮಾರಧಾರ ನದಿಯಲ್ಲಿ ನೀರಿನ ಹರಿವು ರಭಸದಿಂದ ಕೂಡಿದ್ದರೆ, ನೇತ್ರಾವತಿ ನದಿಯ ಸರಾಗ ಹರಿಯುವಿಕೆಗೆ ತಡೆಯುಂಟಾಗಿ ಸಂಗಮವಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಆದರೆ ಈ ಬಾರಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ರಭಸವಿಲ್ಲದ ಕಾರಣದಿಂದ ನೇತ್ರಾವತಿಯು ಸರಾಗವಾಗಿ ಅರಬ್ಬೀ ಸಮುದ್ರದತ್ತ ಹರಿಯುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.