ಕಾಂಚನದಲ್ಲಿ ಹೊಳೆಗೆ ಬಿದ್ದ ಪಿಕಪ್ – ಅಪಾಯದಿಂದ ಪಾರಾದ ಚಾಲಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಲ್ಯಾಡಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನೀರಕಟ್ಟೆ ಸಮೀಪ ಪಿಕಪ್ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ಆ.8ರಂದು ಬೆಳಿಗ್ಗೆ 11 ಗಂಟೆ ವೇಳೆ ನಡೆದಿದೆ. ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಪಿಕಪ್‌ ನೀರಕಟ್ಟೆ ಸಮೀಪದ ಕಾಂಚನ ಕ್ರಾಸ್‌ ಸಮೀಪ ಚಾಲಕ ಆರೀಫ್‌ ಕೋಲ್ಪೆ ರವರ ನಿಯಂತ್ರಣ ತಪ್ಪಿ ಪಕ್ಕದ ಹೊಳೆಗೆ ಬಿದ್ದಿದೆ. 

ಆರೀಫ್‌ ರವರು ಪಿಕಾಪ್‌ ವಾಹನದಿಂದ ಹೊರಗೆ ಹಾರಿ ಅಪಾಯದಿಂದ ಪಾರಾಗಿದ್ದಾರೆ. ತೌಫೀಕ್ ಎಂಬವರು ಜೀವದ ಹಂಗು ತೊರೆದು ಹೊಳೆಯ ನೀರಿಗೆ ಇಳಿದು ಕೊಚ್ಚಿ ಹೋಗುತ್ತಿದ್ದ ಪಿಕಪ್ ಗೆ ಹಗ್ಗ ಕಟ್ಟಿ ಮೇಲಕ್ಕೆತ್ತಲು ಸಹಕರಿಸಿದರು. ಬಳಿಕ ಲಾರಿಯೊಂದಕ್ಕೆ ಕಟ್ಟಿ ಮೇಲಕ್ಕೆ ತರಲಾಯಿತು.


About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.