ಬಜರಂಗದಳದ ಭರ್ಜರಿ ಕಾರ್ಯಾಚರಣೆ: ಬಿರುಮಲೆ ಬೆಟ್ಟದಲ್ಲಿ ಗಾಂಜಾ ಸೇವಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಪೊಲೀಸರಿಗೆ ಒಪ್ಪಿಸಿದ ಕಾರ್ಯಕರ್ತರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗಾಂಜಾ ಸೇವಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ಓರ್ವ ಹುಡುಗಿ ಹಾಗೂ ನಾಲ್ವರು ಹುಡುಗರನ್ನು ಪತ್ತೆಮಾಡಿದ ಹಿಂದು ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆ ಆ.8ರಂದು ಬಿರುಮಲೆ ಬೆಟ್ಟದಲ್ಲಿ ನಡೆದಿದೆ.

ಬಿರುಮಲೆ ಬೆಟ್ಟದಲ್ಲಿ ಗಾಂಜಾ ಸೇವಿಸಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಮಾಹಿತಿ ಪಡೆದ ಹಿಂದು ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೇರಳ ರಾಜ್ಯ ನೋಂದಾವಣೆಯಾಗಿರುವ ಕಾರು (ಕೆ.ಎಲ್5ಪಿ4414) ಬಂದಿರುವ ತಂಡವು ಓರ್ವ ಯುವತಿ ನಾಲ್ವರ ಯುವಕರೊಂದಿಗೆ ಗಾಂಜಾ ಸೇವಿಸಿ ಅನೈತಿಕ ಚಟುವಟಿಯಲ್ಲಿ ತೊಡಗಿರುವುದನ್ನು ಅವರು ಪತ್ತೆ ಮಾಡಿ ಕೂಡಲೇ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿ ಅವರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಯುವತಿ ಹಾಗೂ ನಾಲ್ವರು ಯುವಕರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಪ್ರೀತಿಯ ಹೆಸರಿನಲ್ಲಿ ಪುಸಲಾಯಿಸಿ ಕಾರಿನಲ್ಲಿ ಕರೆತಂದು ಮಾಧಕ ದ್ರವ್ಯ ತಿನ್ನಿಸಿ ಹಿಂದು ಯುವತಿಯನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಬೃಹತ್ ಜಾಲವಾಗಿರಬಹದು ಎಂಬ ಶಂಕೆಗಳು ವ್ಯಕ್ತವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.