ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ಪ್ರಯತ್ನದ ಫಲ : ಮುಗೇರಡ್ಕ ಸೇತುವೆಗೆ ರೂ. 1.50 ಕೋಟಿ ಪ್ರಸ್ತಾವನೆ ಅಸ್ತು ನೀಡಿದ ಸಚಿವರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಬೆಳ್ತಂಗಡಿ ಮಧ್ಯೆ ಮುಗೇರಡ್ಕ ಸೇತುವೆ ಪುನರ್ ನಿರ್ಮಾಣವನ್ನು ರೂ. 1.50 ಕೋಟಿ ವೆಚ್ಚ ಆಗಲಿದೆ ಎಂದು ಶಾಸಕ ಸಂಜೀವ ಮಠಂದೂರು ಅವರು ನೀಡಿದ ಪ್ರಸ್ತಾವನೆಗೆ ರಾಜ್ಯ ಕಂದಾಯ ಸಚಿವ ಆರ್ ಅಶೋಕ್ ಅವರು ಅಸ್ತು ನೀಡಿದ್ದಾರೆ.

ಮಂಗಳೂರು ಜಿ.ಪಂ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲೆಯ ಮಳೆ ಹಾನಿ ಪರಿಹಾರ ಕಾರ್ಯ ಕುರಿತು ಸಚಿವ ಆರ್ ಅಶೋಕ್ ಅವರು ನಡೆಸಿದ ಪರಿಶೀಲನಾ ಸಭೆಯಲ್ಲಿ ಮುಗೇರಡ್ಕ ಸೇತುವೆ ಕುರಿತು ಶಾಸಕ ಸಂಜೀವ ಮಠಂದೂರು ಪ್ರಸ್ತಾಪಿಸಿದರು. ಕಳೆದ ಮಳೆಯ ಸಂದರ್ಭ ಸೇತುವೆ ಪೂರ್ಣ ಹಾನಿಯಾಗಿದೆ. ಅದನ್ನು ಪುನರ್ ನಿರ್ಮಾಣಕ್ಕೆ ರೂ. 1.50 ಕೋಟಿ ಅನುದಾನ ಬೇಕು. ಈ ಕುರಿತು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ಸಚಿವ ಆರ್ ಅಶೋಕ್ ಅವರು ಪ್ರಸ್ತಾವನೆಯ ಅಂದಾಜು ಪಟ್ಟಿ ಮತ್ತು ವಿವರಣೆ ಪಡೆದು ಶೀಘ್ರ ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಕುರಿತು ಭರವಸೆ ವ್ಯಕ್ತಪಡಿಸಿದರು.

ಜಿಲ್ಲೆಗೆ ರೂ. 50 ಕೋಟಿ ಬೇಕು:
ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಬಹಳಷ್ಟು ರಸ್ತೆಗಳು ಹಾನಿಯಾಗಿದೆ. ಕಳೆದ ಸಲ ಎನ್.ಡಿ.ಆರ್.ಎಫ್‌ನಲ್ಲಿ ರೂ. 7 ಮತ್ತು 3 ಕೋಟಿ ಅನುದಾನ ಲಭಿಸಿತ್ತು. ಈ ಭಾರಿ ಕನಿಷ್ಠ 50 ಕೋಟಿಯಾದರೂ ಜಿಲ್ಲೆಗ ಕೊಡಬೇಕು. ಆಗ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಸೇರಿದಂತೆ ಮನೆ ಕಳೆದು ಕೊಂಡವರಿಗೆ ಮೂಲಭೂತ ಸೌಕರ್ಯ ಒದಗಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಸಂಜೀವ ಮಠಂದೂರು ಸಭೆಯಲ್ಲಿ ಬೇಡಿಕೆ ಇಟ್ಟಿದ್ದಾರೆ. ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಜಿಲ್ಲೆಯ ಶಾಸಕರುಗಳು, ಉಪವಿಭಾಗದ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಶಾಸಕರು ಸೇತುವೆ ಚಿತ್ರಣ ತೋರಿಸಿ ವಿವರಿಸುವುದು
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.