Breaking News

ಕುಂಬ್ರ ಮರ್ಕಝುಲ್ ಹುದಾ ವಿಮೆನ್ಸ್ ಕಾಲೇಜು ವತಿಯಿಂದ ವಿದ್ಯಾರ್ಥಿನಿಯರು, ಮಹಿಳೆಯರಿಗಾಗಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪ್ರಬಂಧ ಸ್ಪರ್ಧೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ವಿಮೆನ್ಸ್ ಕಾಲೇಜು ವತಿಯಿಂದ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗಾಗಿ ೭೪ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ `ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಿಳೆಯರ ಪಾತ್ರ’ ಎನ್ನುವ ವಿಷಯದಲ್ಲಿ ಆನ್‌ಲೈನ್ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವವರು ಆಗಸ್ಟ್ ೧೫ರ ಮುಂಚಿತವಾಗಿ ಪ್ರಬಂಧ ಬರೆದು ಕಳುಹಿಸಿರಬೇಕು, ಅಪ್ರಕಟಿತ ಸ್ವರಚಿರ ಬರಹವಾಗಿರಬೇಕು, 180ರಿಂದ 200 ಪದಗಳಿಗೆ ಮೀರಬಾರದು, ಸರ್ವ ಧರ್ಮಿಯರಿಗೂ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದ್ದು ಆಗಸ್ಟ್ ೨೫ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರು ಬಹುಮಾನ ಪಡೆದುಕೊಳ್ಳಲಿದ್ದಾರೆ.

 

ಪ್ರಬಂಧವನ್ನು ಕನ್ನಡದಲ್ಲಿ ಟೈಪ್ ಮಾಡಿ [email protected] ಗೆ ಕಳುಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9901322759(ಪ್ರಾಂಶುಪಾಲರು), ಅಥವಾ 7204473074 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.