ಸೋರುತ್ತಿರುವ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲಾ ಕಟ್ಟಡ- ಬಿರುಕು ಬಿಟ್ಟ ಗೋಡೆ 

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ಕಟ್ಟಡ ಸೋರುತ್ತಿದ್ದು ಗೋಡೆ ಬಿರುಕು ಬಿಟ್ಟಿದೆ.ಶಾಲೆಯ ಎರಡು ತರಗತಿ ಕೋಣೆಗಳ ಒಳಗೆ ಮಳೆ ನೀರು ಬೀಳುತ್ತಿರುವುದರಿಂದ ನೀರು ತುಂಬಿ ಕುಳಿತು ಕೊಳ್ಳಲು ಸಮಸ್ಯೆಯಾಗಿದೆ.

ಕೊವಿಡ್-19 ಪರಿಣಾಮದಿಂದಾಗಿ ಈ ಬಾರಿ ಶಾಲೆ ಆರಂಭವಾಗದಿರುವುದರಿಂದ ಮಕ್ಕಳಿಗೆ ಆತಂಕ ಇಲ್ಲ. ಶಾಲೆ ಆರಂಭವಾದರೆ ಮಕ್ಕಳು ನೀರಲ್ಲಿ ಒದ್ದೆಯಾಗಿಕೊಂಡು ಕುಳಿತುಕೊಳ್ಳ ಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.ಶಾಲಾ ಕಟ್ಟಡಕ್ಕೆ ಕೇವಲ 24 ವರ್ಷ ತುಂಬುತ್ತಿದ್ದು ಕಟ್ಟಡದ ಪರಿಸ್ಥಿತಿ ಈ ರೀತಿಯಾಗಲು ಕಳಪೆ ಮಟ್ಟದ ಕಾಮಗಾರಿ ನಡೆದಿರ ಬಹುದೇ ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ಶಾಲಾಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ನಾಯಕ್ ಬಾಳೆಗುಳಿ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.ಇದಕ್ಕೆ ಸೂಕ್ತ ಪರಿಹಾರ ದೊರಕಿಸಿ ಕೊಡ ಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.