ಕುದ್ಮಾರು – ಪೊಲೀಸ್ ಹುದ್ದೆ ನೇಮಕಾತಿ ಕುರಿತು ಮಾಹಿತಿ ಕಾರ್ಯಗಾರ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

  • ಸಾಧನೆಯನ್ನು ಹುಡಿಕಿಕೊಂಡಾಗ ಜೀವನ ಸಾರ್ಥಕ- ಆಂಜನೇಯ ರೆಡ್ಡಿ

ಕಾಣಿಯೂರು: ಪೊಲೀಸ್ ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಕರಾವಳಿಯಿಂದ ಯುವಕರು ಪೊಲೀಸ್ ಹುದ್ದೆಗೆ ಸೇರ್ಪಡೆಗೊಳ್ಳಬೇಕು. ಸಾಧನೆಯನ್ನು ಹುಡಿಕಿಕೊಂಡಾಗ ಜೀವನ ಸಾರ್ಥಕವಾಗುತ್ತದೆ. ಉತ್ತಮ ಚಿಂತನೆಯೊಂದಿಗೆ ಸಾಧನೆ ಮಾಡಿದಾಗ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿ ಆಂಜನೇಯ ರೆಡ್ಡಿ ಹೇಳಿದರು. ಅವರು ಆ.8ರಂದು ಕುದ್ಮಾರು ಶಾಲಾ ವಠಾರದಲ್ಲಿ ನಡೆದ ಪೊಲೀಸ್ ಹುದ್ದೆಗಳ ನೇಮಕಾತಿ ಕುರಿತು ತರಬೇತಿ ಕಾರ್ಯಗಾರ ನಡೆಸಿ ಮಾತನಾಡಿದರು. ನಯ, ವಿನಯತೆಯನ್ನು ಮೈಗೂಡಿಸಿಕೊಂಡ ವ್ಯಕ್ತಿಗಳೇ ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ.

ತಮಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಜೀವನದಲ್ಲಿ ಸಾಧನೆಯ ಎತ್ತರಕ್ಕೇರಬೇಕು. ಶ್ರಮ, ತಾಳ್ಮೆ, ದುಡಿಮೆಗೆ ಫಲ ಸಿಗುತ್ತದೆ. ಭವಿಷ್ಯದ ಬೆಳಕಾಗಿರುವ ಯುವಕರು ಸುಂದರ ಜೀವನ ನಿರ್ಮಾಣದಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಸಂಯೋಜಕರು, ಕಾಣಿಯೂರು ವಿನಾಯಕ ಮೆಡಿಕಲ್ ಮಾಲಕರಾದ ಶುಭಾ ಆರ್. ನೋಂಡ ಉಪಸ್ಥಿತರಿದ್ದರು. ಕುದ್ಮಾರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಪ್ರವೀಣ್ ಕುಮಾರ್ ಕಡೆಂಜಿಗುತ್ತು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.