ಜೀವನದಲ್ಲಿ ಜಿಗುಪ್ಸೆಕೊಂಡು ಉಪ್ಪಿನಂಗಡಿ ನಟ್ಟಿಬೈಲಿನ ಯುವತಿ ಆತ್ಮಹತ್ಯೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜೀವನದಲ್ಲಿ ಜಿಗುಪ್ಸೆಗೊಂಡು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.8ರಂದು ನಟ್ಟಿಬೈಲಿನಲ್ಲಿ ನಡೆದಿದೆ.  ಉಪ್ಪಿನಂಗಡಿಯ ನಟ್ಟಿಬೈಲು ನಿವಾಸಿ ಹುಕ್ರಾರವರ ಪುತ್ರಿ ದಿವ್ಯಾ(20 ವ)ರವರು  ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯುವತಿಯ ತಂದೆ ಹುಕ್ರಾರವರು ತೋಟಕ್ಕೆಂದು ಹೋಗಿದ್ದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ದಿವ್ಯಾರವರು ಮನೆಯ ಫ್ಯಾನ್‌ ಗೆ ಶಾಲ್‌ ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಕ್ರಾರವರು ಮನೆಗೆ ಬಂದು ಮಗಳನ್ನು ಕರೆದರೂ ಹೊರಗೆ ಬಾರದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.  ಉಪ್ಪಿನಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.