ವಿಪಿನ್ ಕುಮಾರ್‌ರವರಿಗೆ ಸಂತ ಫಿಲೋಮಿನಾ ಇನ್ಸ್‌ಟ್ಯೂಷನ್ಸ್ ಓಲ್ಡ್ ಸ್ಟೂಡೆಂಟ್ಸ್ ಗಣೇಶೋತ್ಸವ ಸೇವಾ ಟ್ರಸ್ಟ್‌ನಿಂದ ಶ್ರದ್ದಾಂಜಲಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಇತ್ತೀಚೆಗೆ ನಿಧನರಾದ ವಿಪಿನ್ ಕುಮಾರ್‌ರವರಿಗೆ ಸಂತ ಫಿಲೋಮಿನಾ ಇನ್ಸ್‌ಟ್ಯೂಷನ್ಸ್ ಓಲ್ಡ್ ಸ್ಟೂಡೆಂಟ್ಸ್ ಗಣೇಶೋತ್ಸವ ಸೇವ ಟ್ರಸ್ಟ್‌ನಿಂದ ಶ್ರದ್ದಾಂಜಲಿ ಸಭೆಯು ಆ.೮ರಂದು ದರ್ಬೆ ವಿನಾಯಕ ನಗರದಲ್ಲಿ ನಡೆಯಿತು.

ವಿಪಿನ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಿದ ತಂತ್ರಿ ಪ್ರೀತಂ ಪುತ್ತೂರಾಯ ಮಾತನಾಡಿ, ವಿದ್ಯಾ ಸಂಸ್ಥೆಗಳೊಂದಿಗೆ ಒಡನಾಡಿಯಾಗಿ ಸಾಮಾಜಿಕ ಜೀವನದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ವಿಪಿನ್‌ರವರನು ನೆನಪಿಸಿಕೊಳ್ಳಲೇಬೇಕು. ದರ್ಬೆ ವಿನಾಯಕ ನಗರದಲ್ಲಿ ಗಣೇಶೋತ್ಸವದ ರುವಾರಿಯಗಿ ಯಶಸ್ವಿಯಾಗಿ ಮುನ್ನಡೆಸುವಲ್ಲಿ ಅವರ ಶ್ರಮ ಬಹಳಷ್ಟಿದೆ. ಅವರಲ್ಲಿದ್ದ ಉತ್ತಮ ಗುಣ, ನಡತೆಗಳು ಅಚ್ಚಲಿಯದೇ ನಮ್ಮಲ್ಲಿ ಉಳಿದಿದ್ದು ಇಂದು ಎಲ್ಲರನ್ನು ಒಟ್ಟುಗೂಡುವಂತೆ ಪ್ರೇರಿಪಿಸುತ್ತದೆ ಎಂದರು.

ಗಣೇಶೋತ್ಸವ ಸಮಿತಿ ಟ್ರಸ್ಟೀ ದಿನೇಶ್ ಪ್ರಸನ್ನ ಮಾತನಾಡಿ, ಸಂಘಟನೆಗೆ ಇನ್ನೊಂದು ಹೆಸರೇ ವಿಪಿನ್ ಕುಮರ್. ನ್ಯಾಯಕ್ಕಾಗಿ ಹೋರಾಡಲು ಯಾವ ಸಂದರ್ಭದಲ್ಲಿ ಹಿಂಜರಿದವರಲ್ಲ. ಸಂಘಟನೆ ಮಾಡುವುದರಲ್ಲಿ ಅವರು ಎಲ್ಲರಿಗೂ ಮಾದರಿಯಗಿದ್ದು ದರ್ಬೆಯಲ್ಲಿ ಕ್ರಾಂತಿಕಾರಿ ರೀತಿಯಲ್ಲಿ ಗಣೇಶೋತ್ಸವವನ್ನು ಸಂಘಟಿಸಿದ್ದಾರೆ ಎಂದರು. ಟ್ರಸ್ಟೀಗಳಾದ ಮಂಜುನಾಥ, ನರೇಂದ್ರ ನಾಕ್ ಮಾತನಾಡಿ ನುಡಿನಮನ ಸಲ್ಲಿಸಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್, ಟ್ರಸ್ಟಿಗಳಾದ ವೆಂಕಟೇಶ್‌ಕೃಷ್ಣ, ಜನಾರ್ದನ ಎಸ್ ಭಟ್, ರಮೇಶ್ ಪ್ರಭು, ಶಿವಪ್ರಸಾದ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಟ್ರಸ್ಟಿ ಅನಂತಪದ್ಮನಾಭ ಸ್ವಾಗತಿಸಿ, ವಂದಿಸಿದರು.

ಝೂಮ್ ಆಪ್‌ನಲ್ಲಿ ನುಡಿ ನಮನ:
ವಿಪಿನ್ ಕುಮಾರ್‌ರವರ ಶ್ರದ್ದಾಂಜಲಿ ಸಭೆಯನ್ನು ಝೂಮ್ ಆಪ್ ಮುಖಾಂತರ ಅವರ ಒಡನಡಿ, ಸಹಪಾಠಿಗಳಿಒಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು ಅವರ ಒಡನಾಡಿ, ಸಹಪಾಠಿಗಳಾಗಿದ್ದ ಮುಂಬಯಿಯಿಂದ ಶಂಕರ್ ವೈಲಾಯ, ಯುಎಸ್‌ಎಯಿಂದ ರಾಮಚಂದ್ರ ಶೆಣೈ, ಕಾಸರಗೋಡುನಿಂದ ಸದಾನಂದ ಶೆಟ್ಟಿ, ಮಂಡ್ಯದಿಂದ ರಘುನಾಥ ರೈಯವರು ಕಾರ್ಯಕ್ರಮದಲ್ಲಿ ಝೂಮ್ ಆಪ್ ಮುಖಾಂತರ ಮಾತನಾಡಿ ನುಡಿನಮನ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.