Breaking News

ಬೆಟ್ಟಂಪಾಡಿ: ಮರದಿಂದ ಬಿದ್ದು ಕಾರ್ಮಿಕ ಮೃತ್ಯು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾರ್ಮಿಕನೋರ್ವ ಕಾಲು ಜಾರಿ ಮರದಿಂದ ಬಿದ್ದು ಮೃತಪಟ್ಟಿರುವ ಘಟನೆ ಆ.8ರಂದು ಸಂಜೆ ಬೆಟ್ಟಂಪಾಡಿಯ ಕೊಮ್ಮಂಡ ಎಂಬಲ್ಲಿ ನಡೆದಿದೆ. ಮೃತಪಟ್ಟ ಕಾರ್ಮಿಕನನ್ನು ಮುಂಡೂರು ಗ್ರಾಮದ ಪಂಜಳ ನಿವಾಸಿ ಜನಾರ್ದನ ಪೂಜಾರಿ(45 ವ.) ಎಂದು ಗುರುತಿಸಲಾಗಿದೆ. ಬೆಟ್ಟಂಪಾಡಿ ದೇವಸ್ಥಾನ ಬಳಿಯಿರುವ ಕೊಮ್ಮಂಡ ಎಂಬಲ್ಲಿ ಕೂಲಿ ಕಾರ್ಮಿಕನಾಗಿರುವ ಅವರು ಸಂಜೆ ವೇಳೆ ತೋಟದಲ್ಲಿರುವ ಮರದಿಂದ ಹಲಸಿನ ಕಾಯಿ ಕೊಯ್ಯಲೆಂದು ಮರಕ್ಕೆ ಹತ್ತಿರುವ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದ ಸ್ಥಳದಲ್ಲಿಯೆ ವಿದ್ಯುತ್ ಎಚ್.ಟಿ ಲೈನ್ ಹಾದು ಹೋಗುತ್ತಿದ್ದು ವಿದ್ಯುತ್ ಶಾಕ್‌ನಿಂದ ಮೃತಪಟಟಿರಬಹುದು ಎಂಬ ಶಂಕೆಗಳು ವ್ಯಕ್ತವಾಗಿದೆ. ಸ್ಥಳಕ್ಕೆ ಸಂಪ್ಯ ಠಾಣಾ ಎಸ್‌ಐ ಉದಯ ಕುಮಾರ್ ಹಾಗೂ ಸಿಬಂದಿಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.