Breaking News

ಮಾಯಿದೆ ದೇವುಸ್ ಚರ್ಚ್ ನೂತನ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ರವರಿಗೆ ಚರ್ಚ್ ಪಾಲನಾ ಮಂಡಳಿಯಿಂದ ಸ್ವಾಗತ-ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರದ ಹೃದಯಭಾಗದಲ್ಲಿರುವ ೧೯೦ ವರ್ಷ ಇತಿಹಾಸವುಳ್ಳ ಮಾಯಿದೆ ದೇವುಸ್ ಚರ್ಚ್ ನಲ್ಲಿ 27ನೇ ಪ್ರಧಾನ ಧರ್ಮಗುರುಗಳಾಗಿ ಆಗಮಿಸಿ, ಅಧಿಕಾರ ಸ್ವೀಕರಿಸಿದ ವಂ/ಲಾರೆನ್ಸ್ ಮಸ್ಕರೇನ್ಹಸ್ ರವರಿಗೆ ಚರ್ಚ್ ನ ಆರ್ಥಿಕ ಸಮಿತಿ ಹಾಗೂ ಪಾಲನಾ ಮಂಡಳಿ ವತಿಯಿಂದ ಸ್ವಾಗತ ಕಾರ್ಯಕ್ರಮವು ಆ.೮ ರಂದು ಚರ್ಚ್ ನ ಸಭಾಂಗಣದಲ್ಲಿ ನಡೆಯಿತು.

ನೂತನ ಸದಸ್ಯರಿಗೆ ಸ್ವಾಗತ: ಚರ್ಚ್ ಪಾಲನಾ ಮಂಡಳಿಗೆ ನೂತನ ಸದಸ್ಯರಾಗಿರುವ ಬೆಥನಿ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಆ?ಯಗ್ನೇಸ್ ಫ್ರ್ಯಾಂಕ್, ಬ್ರಿಜಿಟಾಯ್ನ್ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಜಾನೆಟ್ ಪಿಂಟೋ, ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಣಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಮಹಿಳಾ ವಸತಿ ಗೃಹದ ವಾರ್ಡನ್ ಸಿಸ್ಟರ್ ಜಾನೆಟ್ ಕುಟಿನ್ಹಾ, ಸಂತ ಫಿಲೋಮಿನಾ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾಗಿರುವ ವಂ/ಅಶೋಕ್ ರಾಯನ್ ಕ್ರಾಸ್ತಾರವರನ್ನು ಪಾಲನಾ ಮಂಡಳಿಯ ಸದಸ್ಯರಾದ ಗ್ರೇಸಿ, ಎವ್ಲಿನ್, ನಿಶಾ ಮಸ್ಕರೇನ್ಹಸ್, ಪಾವ್ಲ್ ಡಿ’ಸೋಜ, ಎಲ್ಯಾಸ್ ಪಿಂಟೋರವರು ಹೂ ನೀಡಿ ಸ್ವಾಗತಿಸಿದರು.
ಬೆಥನಿ ಕಾನ್ವೆಂಟಿನ ಧರ್ಮಭಗಿನಿಯರು ಪ್ರಾರ್ಥಿಸಿದರು. ಸಹಾಯಕ ಧರ್ಮಗುರು ವಂ/ಲ್ಯಾರಿ ಪಿಂಟೋರವರು ನೂತನ ಪ್ರಧಾನ ಧರ್ಮಗುರು ವಂ/ಲಾರೆನ್ಸ್ ಮಸ್ಕರೇನ್ಹಸ್ ರವರ ಪರಿಚಯ ಮಾಡಿದರು. ಚರ್ಚ್ ಆರ್ಥಿಕ ಸಮಿತಿಯ ಸದಸ್ಯ ವಿ.ಜೆ ಫೆರ್ನಾಂಡೀಸ್ ರವರ ನೇತೃತ್ವದಲ್ಲಿ ಗಾಯನ ಮಂಡಳಿ ನೂತನ ಪ್ರಧಾನ ಧರ್ಮಗುರುಗಳಿಗೆ ಸ್ವಾಗತದ ಅಭಿನಂದನಾ ಗೀತೆ ಹಾಡಲಾಯಿತು. ಪಾಲನಾ ಮಂಡಳಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಸ್ವಾಗತಿಸಿ, ಕಾರ್ಯದರ್ಶಿ ಫೆಬಿಯನ್ ಗೋವಿಯಸ್ ವಂದಿಸಿದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ/ವಿಜಯ್ ಲೋಬೋ, ಫಿಲೋಮಿನಾ ಪದವಿ ಕಾಲೇಜಿನ ಬೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ/ಆ?ಯಂಟನಿ ಪ್ರಕಾಶ್ ಮೊಂತೇರೋ, ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ವಂ/ಸುನಿಲ್ ಜಾರ್ಜ್ ಡಿ’ಸೋಜ, ಚರ್ಚ್ ನ ಆರ್ಥಿಕ ಸಮಿತಿಯ ಸದಸ್ಯರಾದ ವಿನ್ಸೆಂಟ್ ತಾವ್ರೋ, ವಿ.ಜೆ ಫೆರ್ನಾಂಡೀಸ್, ಓಸ್ವಾಲ್ಡ್ ಲೋಬೋ, ಪ್ರೊ/ಝೇವಿಯರ್ ಡಿ’ಸೋಜ, ಜೆರೋಮಿಯಸ್ ಪಾಯಿಸ್, ವಿವಿಧ ಕಾನ್ವೆಂಟಿನ ಧರ್ಮಭಗಿನಿಯರು, ೧೯ ವಾಳೆಗಳ ಗುರಿಕಾರರು, ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.