ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ ನಾರಾಯಣ ನಾಯ್ಕ ಅಮ್ಮುಂಜೆ ಅವರ ಅಂತ್ಯಕ್ರಿಯೆ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಅ.8ರಂದು ರಾತ್ರಿ ಹೃದಯಾಘಾತಕ್ಕೊಳಗಾಗಿ ನಿಧನರಾದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ, ಕುರಿಯ ಗ್ರಾಮದ ಅಮ್ಮುಂಜೆ ನಿವಾಸಿ ನಾರಾಯಣ ನಾಯ್ಕ ಅವರ ಅಂತ್ಯ ಸಂಸ್ಕಾರ ಪುತ್ತೂರು ಚಿಕ್ಕಪುತ್ತೂರು ರುದ್ರಭೂಮಿಯಲ್ಲಿ ನಡೆಯಿತು.

ಅಮ್ಮುಂಜೆ ಮನೆಯಲ್ಲಿ ಮೃತರ ಅಂತ್ಯಕ್ರಿಯೆಗೆ ಮುಂಚಿತವಾಗಿ ನಡೆಯಬೇಕಾಗಿರುವ ವಿಧಿ ವಿಧಾನಗಳ ಬಳಿಕ ಚಿಕ್ಕಪುತ್ತೂರು ಹಿಂದೂ ರುದ್ರಭೂಮಿಗೆ ತಂದು ಹರಿಶ್ಚಂದ್ರ ಕಟ್ಟೆಯಲ್ಲಿ ಸ್ಮಶಾನ ನಿರ್ವಾಹಕ ಸತೀಶ್ ಅವರಿಂದ ಪ್ರಾರ್ಥನಾ ಕಾರ್ಯಕ್ರಮಗಳು ನಡೆಯಿತು. ಬಳಿಕ ಮೃತ ದೇಹಕ್ಕೆ ನಾರಾಯಣ ನಾಯ್ಕ ಅವರ ಪುತ್ರ ಪ್ರಜ್ವಲ್ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮೃತರ ಸಂಬಂಧಿಕರು, ಸುದ್ದಿಬಿಡುಗಡೆ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಪಿ.ಶಿವಾನಂದ, ಸಿಇಒ ಸೃಜನ್ ಊರುಬೈಲು, ಪತ್ರಿಕೆಯ ಪ್ರಧಾನ ವರದಿಗಾರ ಕರುಣಾಕರ್ ರೈ ಸಿ.ಹೆಚ್ ಮತ್ತು ಸಿಬ್ಬಂದಿಗಳು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಕೆದಂಬಾಡಿ ಗ್ರಾ.ಪಂ  ಮಾಜಿ ಅಧ್ಯಕ್ಷ ಚಂದ್ರಹಾಸ ರೈ ಬೊಳೋಡಿ, ಆರ್ಯಾಪು ಗ್ರಾ.ಪಂ ಮಾಜಿ ಅಧ್ಯಕ್ಷ ವಿಜಯ ಬಿ.ಎಸ್.‌, ನಗರಸಭೆ ಮಾಜಿ ಸದಸ್ಯ ರಾಜೇಶ್ ಬನ್ನೂರು, ಹೆಚ್ ಉದಯ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ತಾ.ಪಂ ಸದಸ್ಯೆ ಮೀನಾಕ್ಷಿ ಮಂಜುನಾಥ್, ಎಪಿಎಂಸಿ ಉಪಾಧ್ಯಕ್ಷ ಎನ್.ಎಸ್ ಮಂಜುನಾಥ್, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್. ರವೀಂದ್ರ ಶೆಟ್ಟಿ ನುಳಿಯಾಲು, ಕ.ರ.ವೇ ದ.ಕ ಜಿಲ್ಲಾಧ್ಯಕ್ಷ ಮುಹಮ್ಮದ್‌ ಕುಕ್ಕುವಳ್ಳಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್ ಸಂಪ್ಯ ಸೇರಿದಂತೆ ಪತ್ರಕರ್ತ ಸಂಘದ ಬಳಗ ಮತ್ತಿತರರು ಮೃತರ ಮನೆಗೆ ಆಗಮಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.