ಒಳಮೊಗ್ರು: ನೇಣು ಬಿಗಿದು ಆತ್ಮಹತ್ಯೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವ್ಯಕ್ತಿಯೊಬ್ಬರು ಮನೆಯ ಹಿಂಬದಿಯ ಗೇರುಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆ.೯ರಂದು ಒಳಮೊಗ್ರು ಗ್ರಾಮದ ನೀರ್ಪಾಡಿ ಎಂಬಲ್ಲಿ ನಡೆದಿದೆ.  ಒಳಮೊಗ್ರು ಗ್ರಾಮದ ನೀರ್ಪಾಡಿ ನಿವಾಸಿ ಕುಶಾಲಪ್ಪ(೫೦ವ)ರವರು ಆತ್ಮಹತ್ಯೆ ಮಾಡಿಕೊಂಡವರು.

ಇತ್ತೀಚಿಗಿನ ವಾರದಲ್ಲಿ ವಿಪರೀತ ಅಮಲು ಪದಾರ್ಥ ಸೇವಿಸಿ ಆಹಾರವನ್ನು ಸೇವಿಸದೆ ಮನೆಯಲ್ಲೇ ಇದ್ದರು. ಆ.೯ರಂದು ಅವರ ಪತ್ನಿ ಸುಶೀಲ ಅವರು ಬೀಡಿ ಬ್ರಾಂಚ್‌ಗೆ ಹೋಗಿ ಹಿಂದಕ್ಕೆ ಬರುವ ವೇಳೆ ಪತಿ ಕುಶಾಲಪ್ಪ ಅವರು ಮನೆಯಲ್ಲಿ ಇಲ್ಲದಿದ್ದ ವೇಳೆ ಅವರನ್ನು ಮನೆಯ ಸುತ್ತಮುತ್ತ ಹುಡುಕಾಡಿದಾ ಮನೆಯ ಹಿಂಬದಿಯ ಗೇರುಮರವೊಂದಕ್ಕೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದು ತಕ್ಷಣ ಅವರನ್ನು ಕೆಳಗಿಳಿಸಿ ಉಪಚರಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದರೂ ಆಗಲೇ ಅವರು ಮೃತಪಟ್ಟಿದ್ದರು. ಮೃತರು ಪತ್ನಿ ಸುಶೀಲ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸುಶೀಲ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.