ಕೊಳ್ನಾಡು: ಮನೆಯ ಸ್ನಾನದ ಕೊಠಡಿಗುರುಳಿದ ಬೃಹತ್ ಕಲ್ಲು – ಸ್ಥಳೀಯರಿಂದ ತೆರವು ಕಾರ್ಯಾಚರಣೆ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ  ಮನೆಯೊಂದರ ಸ್ನಾನ ಕೊಠಡಿಗೆ ಬೃಹತ್ ಗಾತ್ರದ ಬಂಡೆಕಲ್ಲು ಉರುಳಿ ಬಿದ್ದ ಪರಿಣಾಮ ಸ್ನಾನದ ಕೊಠಡಿ ಸಂಪೂರ್ಣವಾಗಿ ಹಾನಿಗೊಂಡಿರುವ ಘಟನೆ ಕೊಳ್ನಾಡು ಗ್ರಾಮದ ಸೆರ್ಕಳ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ಇಬ್ರಾಹಿಂರವರ ಮನೆಯ ಹಿಂಬದಿಯಲ್ಲಿರುವ ಗುಡ್ಡೆಯಿಂದ ಬೃಹತ್ ಗಾತ್ರದ ಬಂಡೆಕಲ್ಲೊಂದು  ಮನೆಯ ಸ್ನಾನದ ಕೊಠಡಿಗೆ ಉರುಳಿ ಬಿದ್ದಿದೆ. ಇದರಿಂದ ಸ್ನಾನಗೃಹ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಈ ಬಗ್ಗೆ ಮಾಹಿತಿ ತಿಳಿದ ಕೊಳ್ನಾಡು ಗ್ರಾಮದ ಎಸ್ ಡಿ ಪಿ ಐ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸ್ಥಳೀಯರೊಂದಿಗೆ ಸೇರಿಕೊಂಡು ಕೈಯಿಂದ ಹಾಗೂ ಯಂತ್ರದ ಮೂಲಕ ಕಲ್ಲನ್ನು ಒಡೆದು ತೆಗೆಯುವಲ್ಲಿ ಸಫಲರಾದರು.


ಸಾಯಂಕಾಲ ಆರುಗಂಟೆಗೆ ಆರಂಭಗೊಂಡ ತೆರವು ಕಾರ್ಯಾಚರಣೆ ತಡರಾತ್ರಿ ವರೆಗೂ ಮುಂದುವರಿದಿತ್ತು. ಎಸ್ ಡಿ ಪಿ ಐ ವಿಪತ್ತು ನಿರ್ವಹಣಾ ತಂಡದ ಜವಾಬ್ದಾರಿ ಯನ್ನು ಪಾಪ್ಯುಲರ್ ಪ್ರಂಟ್ ಪರ್ತಿಪ್ಪಾಡಿ ಯುನಿಟ್ ಅಧ್ಯಕ್ಷ  ಅನೀಸ್ ಕುಡುತ್ತಮೊಗೆರು ಹಾಗೂ ಎಸ್ ಡಿ ಪಿ ಐ ಕೊಳ್ನಾಡು ಸಾಲೆತ್ತೂರು ವಲಯ ಅಧ್ಯಕ್ಷ ಲತೀಪ್ ಸಾಲೆತ್ತೂರು ವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.