ವಿಟ್ಲ ಪಡ್ನೂರು: ತೋಟಕ್ಕೆ ನುಗ್ಗಿದ ನೀರು – ಕೃಷಿಗೆ ಹಾನಿ

Puttur_Advt_NewsUnder_1
Puttur_Advt_NewsUnder_1

ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಣೆಕಟ್ಟೆನಲ್ಲಿ ಕಸಕಡ್ಡಿಗಳು ತುಂಬಿದ ಪರಿಣಾಮ ಸುತ್ತಮುತ್ತಲಿನ ತೋಟಗಳಿಗೆ ನೀರು ನುಗ್ಗಿ ನಷ್ಟ ಸಂಭವಿಸಿದ ಘಟನೆ ವಿಟ್ಲ ಪಡ್ನೂರು ಗ್ರಾಮದಲ್ಲಿ ನಡೆದಿದಿರುವ ಬಗ್ಗೆ ವರದಿಯಾಗಿದೆ.

ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಳೆಗೆ ಬೇಸಿಗೆಗಾಲದಲ್ಲಿ ಸ್ಥಳೀಯ ಕೃಷಿಕರು ಹಾಗೂ ಸ್ಥಳೀಯ ಫ್ಯಾಕ್ಟರಿಯವರು ಸೇರಿಕೊಂಡು ಕಿಂಡಿಅಣೆಕಟ್ಟು ನಿರ್ಮಾಣ ಮಾಡಿದ್ದರು. ಇದೀಗ ಮಳೆಗಾಲದಲ್ಲಿ ಹೊಳೆ ನೀರಿನಲ್ಲಿ ಕೊಚ್ಚಿಕೊಂಡು ಬರುತ್ತಿರುವ ಕಸ,ಕಡ್ಡಿ, ಮರದ ದಿಮ್ಮಿಗಳು ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿರುವುದರಿಂದ ನೀರು ಹರಿಯಲು ಜಾಗವಿಲ್ಲದೇ ಪರಿಸರದ ಕೊಡಂಗಾಯಿ ಹಮೀದ್ ಹಾಗೂ ಕಾದರ್ ರವರ ತೋಟಗಳಿಗೆ ನೀರು ನುಗ್ಗಿದೆ.

ಇದರಿಂದ ಕೃಷಿ ತೋಟಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.