Breaking News

ಅರಣ್ಯ ಸಂಚಾರಿ ದಳದ ಹೆಡ್‌ಕಾನ್‌ಸ್ಟೇಬಲ್ ಉದಯ ಅವರಿಗೆ ಪಿತೃ ವಿಯೋಗ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಉದಯ ಅವರ ತಂದೆ ನಿವೃತ್ತ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಶಾಂತಪ್ಪ ಗೌಡ (75ವ) ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಆ.೮ರಂದು ನಿಧನರಾದರು.
ಆಲೆಟ್ಟಿ ಗ್ರಾಮದ ಕುದ್ಕುಳಿ ನಿವಾಸಿಯಾಗಿರುವ ಶಾಂತಪ್ಪ ಅವರು ಬಂಟ್ವಾಳ, ಕೋಟಾ, ಬ್ರಹ್ಮಾವರ, ಕುಂದಾಪುರ, ಮಂಗಳೂರು, ಕೋಣಾಜೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿ ತನ್ನ ಪೊಲೀಸ್ ಸೇವೆಯ ನಿವೃತ್ತಿಯ ಬಳಿಕ ಪುತ್ರ ಉದಯ ಅವರೊಂದಿಗೆ ಪುತ್ತೂರು ಪೊಲೀಸ್ ವಸತಿ ಗೃಹದಲ್ಲಿ ವಾಸ್ತವ್ಯ ಹೊಂದಿದ್ದರು. ಇತ್ತೀಚೆಗೆ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಅ.8ರಂದು ಅವರು ಮೃತಪಟ್ಟಿದ್ದಾರೆ. ಮೃತರು ಮೃತರು ಪುತ್ರರಾದ ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಉದಯ ಕುದ್ಕುಳಿ, ಉಲ್ಲಾಸ್ ಕುದ್ಕುಳಿ, ಪುತ್ರಿಯರಾದ ಶ್ರೀಮತಿ ಶೋಭಾ ಅಡ್ಪಂಗಾಯ, ಶ್ರೀಮತಿ ಸುರೇಖಾ ಕಾಳಮನೆ ಸೊಸೆಯಂದಿರಾದ ಪವಿತ್ರಾ ಉದಯ, ಶಯಾನ ಉಲ್ಲಾಸ್, ಅಳಿಯಂದಿರಾದ ಚಂದ್ರೇಶೇಖರ್ ಕಾಳಮನೆ, ಯೋಗೀಶ್‌ರಾಮ ಅಡ್ಪಂಗಾಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.