ಬೊಬ್ಬೆಕೇರಿ: ರಸ್ತೆ ಬದಿಯ ಧರೆ ಕುಸಿತ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು : ಕಾಣಿಯೂರು -ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯ ಪುಣ್ಚತ್ತಾರು ಬೊಬ್ಬೆಕೇರಿ ಸಮೀಪದಲ್ಲಿ ಸತತ ಮಳೆಯಿಂದಾಗಿ ರಸ್ತೆ ಬದಿಯ ಧರೆಯೊಂದು ಕುಸಿತಗೊಂಡಿದ್ದು ಅಪಾಯಕಾರಿ ಸ್ತಿತಿಯಲ್ಲಿದೆ.

ಘಟನೆಯಿಂದ ದಾರಿ ಬದಿಯಿಂದ ನಡೆದುಕೊಂಡು ಹೋಗಲಾರದ ಸ್ಥಿತಿ ಉಂಟಾಗಿದೆ. ಯಾವುದೇ ಅಪಾಯ ಸಂಭವಿಸುವ ಮೊದಲು ಸಂಬಂಧ ಪಟ್ಟ ಇಲಾಖೆಗಳು ಗಮನ ಹರಿಸಿ ದೊಡ್ಡ ಮಟ್ಟದ ಅಪಾಯವನ್ನು ತಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕ ಳೆದ ವರ್ಷವೂ ಇದೇ ಭಾಗದಲ್ಲಿ ಮಣ್ಣುಕುಸಿತವುಂಟಾಗಿ ಪಕ್ಕದ ಕೃಷಿ ಭೂಮಿಗೆ ಹಾನಿಯಾಗಿತ್ತು.. ಅಧಿಕ ಮಳೆಯಿಂದ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಳ್ಳುತ್ತದೆ..ಇದೀಗ ಮತ್ತೆ ಈ ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ..ಒಂದು ಬದಿಯ ಗುಡ್ಡ ಈಗಾಗಲೇ ಜರಿದಿದ್ದು ಮಣ್ಣು ಬೀಳಲು ಪ್ರಾರಂಭಿಸಿದೆ. ಸಂಬಂಧಪಟ್ಟ ಇಲಾಖೆ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ, ದೊಡ್ಡ ಪ್ರಮಾಣದಲ್ಲಿ ಮಣ್ಣು ಜರಿದು ಮುಖ್ಯ ರಸ್ತೆ ಕುಸಿಯುವ ಸಾಧ್ಯತೆ ಇದೆ..ಕೃಷಿ ಯನ್ನು ಅವಲಂಭಿಸಿದ ಈ ಪ್ರದೇಶದಲ್ಲಿ ನದಿ ಇದ್ದು ಗುಡ್ಡ ಕುಸಿದರೆ ಸಂಪೂರ್ಣ ನೀರು ಕೃಷಿ ಭೂಮಿ ಮುಖಾಂತರ ಹಾದುಹೋಗುವ ಸಂಭವ ಇದೆ. – ದಿನೇಶ್ ಪೈಕ ಪುಣ್ಚತ್ತಾರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.