ನ್ಯೂಸ್ 3 ಕನ್ನಡ ಚಾನೆಲ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
  • ಮಾದ್ಯಮ ಕ್ಷೇತ್ರದಲ್ಲಿ ವಿಜೃಂಭಿಸಲಿ – ಅರುಣ್ ಕುಮಾರ್ ಪುತ್ತಿಲ
  • ರಾಷ್ಟ್ರಕ್ಕೆ ವ್ಯಾಪಿಸುವ ಚಾನೆಲ್ ಆಗಲಿ – ಐ.ಸಿ.ಕೈಲಾಸ್

ಪುತ್ತೂರು: ಮಾದ್ಯಮ ಲೋಕಕ್ಕೆ ಹೊಸ ಚಾನೆಲ್ ನ್ಯೂಸ್೩ ಕನ್ನಡ ಚಾನೆಲ್ ಆ.10ರಂದು ಬನ್ನೂರಿನ ಜೈನರಗುರಿ ಎಂಬಲ್ಲಿ ಉದ್ಘಾಟನೆಗೊಂಡಿತು. ಸಂಸ್ಥೆಯ ಆಡಳಿತ ನಿರ್ದೇಶಕ ರಾಘವೇಂದ್ರ ಪಾಟೇಲ್ ಅವರು ದೀಪ ಪ್ರಜ್ವಲನೆ ಮೂಲಕ ಚಾನೆಲ್ ಉದ್ಘಾಟಿಸಿದರು.


ಮಾದ್ಯಮ ಕ್ಷೇತ್ರದಲ್ಲಿ ವಿಜೃಂಭಿಸಲಿ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಕೋವಿಡ್ -19 ಸಂದರ್ಭದಲ್ಲೂ ಪಾರದರ್ಶಕವಾಗಿ ಸಾಮಾಜಿಕ ನ್ಯಾಯ ಕೊಡಲು ಮುಂದೆ ಬಂದಿರುವುದು ಶ್ಲಾಘನೀಯ. ಸಮಾಜದ ತಪ್ಪುಗಳನ್ನು ತಿದ್ದುವುದಲ್ಲದೆ ಸಾಮಾಜಿಕ ನ್ಯಾಯಕ್ಕೆ ತೊಂದರೆ ಆದ ಸಂದರ್ಭದಲ್ಲಿ ವಸ್ತು ನಿಷ್ಠವಾದ ವರದಿ ನೀಡುವ ಮೂಲಕ ಮಾದ್ಯಮ ಕ್ಷೇತ್ರದಲ್ಲಿ ವಿಜ್ರಂಭಿಸಲಿ ಎಂದು ಹಾರೈಸಿದರು.

ರಾಷ್ಟ್ರಕ್ಕೆ ವ್ಯಾಪಿಸುವ ಚಾನೆಲ್ ಆಗಲಿ:
ಜೆಡಿಎಸ್ ಮುಖಂಡ ಐ.ಸಿ.ಕೈಲಾಸ್ ಅವರು ಮಾತನಾಡಿ ಸ್ವಾಭಿಮಾನದ ಜೊತೆಗೆ ಸ್ವಾವಲಂಬಿಯಾಗಿ ಬದುಕುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಸಣ್ಣ ಮಗು ಹುಟ್ಟಿದೆ. ಬೆಳವಣಿಗೆ ಆಗಬೇಕು. ಈ ಮಗು ಪುತ್ತೂರಿನಲ್ಲಿ ಹುಟ್ಟಿರುವುದು ಸಂತೋಷ. ಸಮಾಜವನ್ನು ಮುಖ್ಯವಾಹಿನಿ ತರುವಲ್ಲಿ ಮಾದ್ಯಮ ಬದುಕು ಪರಿವರ್ತನೆ ಮಾಡಲಿದೆ. ತಪ್ಪುಗಳನ್ನು ಕಂಡು ಹಿಡಿಯವ ಜೊತೆಗೆ ಒಳ್ಳೆಯ ವಿಷಯವನ್ನು ತೋರಿಸುವ ಕೆಲಸ ಆಗಬೇಕು. ಟೇಕೆಗೆ ಹೆದರದೆ ಸ್ವಾಭಿಮಾನದ ಸ್ವಾತಂತ್ರಕ್ಕೆ ಧಕ್ಕೆ ಭಾರದ ರೀತಿಯಲ್ಲಿ ಹೊಸದಾಗಿ ಲೋಕಾರ್ಪಣೆಗೊಂಡ ಚಾನೆಲ್ ಸಮಾಜದ ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ರಾಷ್ಟ್ರಕ್ಕೆ ವ್ಯಾಪಿಸುವ ಚಾನೆಲ್ ಆಗಲಿ ಎಂದರು. ಚಿರಾಗ್ ಮ್ಯೂಸಿಕ್‌ನ ಗಾಯಕ ಪದ್ಮಶ್ರೀ ಚಾರ್ವಾಕ ಅವರು ಮಾತನಾಡಿ ಭವಿಷ್ಯದ ನಿರ್ಧಾರದ ಮೂಲಕ ಜ್ಯೂನಿಯರ್ ಮಹಾರಾಜ ಎಂಬ ವ್ಯವಸ್ಥೆಯನ್ನು ತೋರಿಸಿಕೊಟ್ಟು ಉತ್ತಮ ಅಡಿಪಾಯ ಹಾಕಿದ್ದೀರಿ. ಸಂಸ್ಥೆ ಅತ್ಯಂತ ಉತ್ತುಂಗಕ್ಕೆ ಬೆಳೆಯಲಿ ಎಂದು ಹಾರೈಸಿದರು. 

ಲೋಗೋ ಅನಾವರಣ:
ಸಂಸ್ಥೆಯ ಪುತ್ತೂರು ಕಚೇರಿಯ ಆಡಳಿತ ನಿರ್ದೆಶಕಿ ವೇದಾವತಿ ಅವರು ನ್ಯೂಸ್೩ ಕನ್ನಡ ಚಾನೆಲ್‌ನ ಲೋಗೋ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಮೇಘ ಕಲಾ ಆರ್ಟ್ಸ್ ಮತ್ತು ಸ್ಟುಡಿಯೋದ ಮಾಲಕಿ ಶಾರದಾ ದಾಮೋದರ್, ಪಟ್ಲ ಇಂಡಸ್ಟ್ರೀಸ್‌ನ ಮಾಲಕ ಧನಂಜಯ ಪಟ್ಲ, ಉದ್ಯಮಿ ಮನೋಹರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯೂಸ್3 ಕನ್ನಡ ಚಾನೆಲ್‌ನ ಸಹನಾ, ನ್ಯೂಸ್೩ ಚಾನೆಲ್‌ನ ಪುತ್ತೂರು ವಿಭಾಗದ ಮನೇಜರ್ ಹೊನ್ನಪ್ಪ ಗೌಡ, ಆಶೀಕ್ ಪುತ್ತೂರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಲಿಖಿತಾ ಪ್ರಾರ್ಥಿಸಿದರು. ಹರ್ಷಿತ್ ಪಡ್ರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ತಿಂಗಳೊಳಗೆ ಕೇಬಲ್‌ನಲ್ಲಿ ನ್ಯೂಸ್ 3 ಚಾನೆಲ್
ಚುನಾವಣೆ ಸಂದರ್ಭದಲ್ಲಿ ಚಾನೆಲ್ ಓಪನ್ ಆಗುವುದು, ಚುನಾವಣೆ ಬಳಿಕ ಸ್ಥಗಿತಗೊಳ್ಳುವುದು ಕಂಡು ಬಂದಿದೆ. ಆದರೆ ಕೊರೋನಾ ಮಹಾಮಾರಿಯ ಸಂದರ್ಭದಲ್ಲೂ ನೂತನ ಚಾನೆಲ್ ದಿಟ್ಟ ಹೆಜ್ಜೆ ಇಟ್ಟಿದೆ. ಈಗಾಗಲೇ ಮೊಬೈಲ್ ಎಪ್ಲಿಕೇಶನ್, ವೆಬ್‌ಸೈಟ್, ಸೋಷಿಯಲ್ ಮೀಡಿಯಾದಲ್ಲಿ ಸುಮಾರು ೩೦ ಸಾವಿರಕ್ಕೂ ಮೇಲ್ಪಟ್ಟು ಓದುಗರಿದ್ದಾರೆ. ಮುಂದೆ ತಿಂಗಳಳೊಗೆ ಕೇಬಲ್ ಮೂಲಕ ಮನೆ ಮನೆಯಲ್ಲೂ ಟಿವಿಯಲ್ಲಿ ಚಾನೆಲ್೩ ಕನ್ನಡ ಮೂಡಿ ಬರಲಿದೆ. ಮೈಸೂರು, ಬೆಂಗಳೂರು, ಬಿಜಾಪುರದಲ್ಲಿ ಪ್ರಧಾನ ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಚಾನೆಲ್ ಕರ್ನಾಟಕದ ಮೂಲೆ ಮೂಲೆಯಲ್ಲೂ ಜಿಲ್ಲಾ ಮತ್ತು ತಾಲೂಕು ಮಟ್ಟದ ವರದಿಗಾರರು ಕಾರ್ಯನಿರ್ವಸುತ್ತಿದ್ದಾರೆ.
ಸತೀಶ್ ಪಟೇಲ್, ಸಿಇಒ ನ್ಯೂಸ್೩ ಕನ್ನಡ ಚಾನೆಲ್

ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲಿ ಅತೀ ಹೆಚ್ಚು ಜನರ ಮೆಚ್ಚುಗೆ ಪಾತ್ರವಾದ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಬೆಳಿಗ್ಗೆ ಎದ್ದು ನೋಡಬೇಕೆಂಬ ಹಂಬಲದಂತೆ ನ್ಯೂಸ್೩ ಚಾನೆಲ್ ಕೂಡಾ ವಸ್ತು ನಿಷ್ಠವರದಿಯೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿ. ಐ.ಸಿ.ಕೈಲಾಸ್, ಜೆಡಿಎಸ್ ಮುಖಂಡ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.