Breaking News

ಮಹಾಲಿಗೇಶ್ವರ ಐ.ಟಿ.ಐ. ಪ್ರವೇಶಾತಿಗೆ ಅರ್ಜಿ ಆಹ್ವಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಕೊಂಬೆಟ್ಟುನಲ್ಲಿರುವ ಶ್ರೀ ಮಹಾಲಿಂಗೇಶ್ವರ ಐ.ಟಿ.ಐ.ಯಲ್ಲಿ 2020-21ನೇ ಸಾಲಿಗೆ ಪ್ರವೇಶ ಬಯಸುವ ೧೪ ರಿಂದ ೪೦ ವರ್ಷದೊಳಗಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಭಾರತ ಸರಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ನವದೆಹಲಿ ಇದರಿಂದ ಶಾಶ್ವತ ಸಂಯೋಜನೆ ಪಡೆದು ದ.ಕ.ಗೌಡ ವಿದ್ಯಾ ಸಂಘ ಸುಳ್ಯ ಇದರ ಆಶ್ರಯದಲ್ಲಿ ೧೯೮೬ರಿಂದ ನಡೆಸಲ್ಪಡುತ್ತಿರುವ ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಡ್ರಾಫ್ಟ್ಸ್‌ಮನ್(ಸಿವಿಲ್), ಇಲೆಕ್ಟ್ರೀಷಿಯನ್ ಮತ್ತು ಎಲೆಕ್ಟ್ರೋನಿಕ್ಸ್ ಮೆಕಾನಿಕ್ ವೃತ್ತಿಯ ೨ ವರ್ಷಗಳ ಅವಧಿಯ ತರಬೇತಿಗೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಪ್ರವೇಶವು ಮುಕ್ತವಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಮಾಜಿ ಸೈನಿಕರ ಮಕ್ಕಳಿಗೆ, ಗ್ರಾಮೀಣ ಅಭ್ಯರ್ಥಿಗಳಿಗೆ, ಅಂಗವಿಕಲರಿಗೆ, ಮಹಿಳೆಯರಿಗೆ, ಮತ್ತು ಹಿಂದುಳಿದ ವರ್ಗದವರಿಗೆ ಮೀಸಲಾತಿಯನ್ನು ಪರಿಗಣಿಸಲಾಗುವುದು ಮತ್ತು ಪ್ರವೇಶ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಸಂಸ್ಥೆಯ ಕಛೇರಿಗೆ ಬೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥೆಯ ಸಂಚಾಲಕರಾದ ಯು.ಪಿ. ರಾಮಕೃಷ್ಣ ಮತ್ತು ಪ್ರಾಚಾರ್ಯ ಪ್ರಕಾಶ್ ಪೈ. ಬಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಅಗತ್ಯ ಬಿದ್ದಲ್ಲಿ ದೂವಾವಣಿ ಸಂಖ್ಯೆ  08251-230003 ಅಬ್ಬಯ ಸಂಪರ್ಕಿಸಲು ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.