ವಿಪಿನ್ ಕುಮಾರ್ ಸ್ಮರಣಾರ್ಥ ಮಿತ್ರ ಬಳಗದಿಂದ ರಾಮಕೃಷ್ಣ ಆಶ್ರಮದ ಮಕ್ಕಳಿಗೆ ಅನ್ನದಾನ, ಸಾಮೆತ್ತಡ್ಕ ಬಡ ಕುಟುಂಬಗಳಿಗೆ ಸಹಾಯಹಸ್ತ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಇತ್ತೀಚೆಗೆ ನಿಧನರಾದ ವಿಪಿನ್ ಕುಮಾರ್‌ ರವರ ಓಡನಾಡಿಗಳಾಗಿದ್ದವರ ವಿಪಿನ್ ಮಿತ್ರ ಬಳಗದ ವತಿಯಿಂದ ಅವರ ಸ್ಮರಣಾರ್ಥ ಮೂರು ಬಡ ಕುಟುಂಬಗಳಿಗೆ ಸಹಾಯ ಹಸ್ತ ಹಾಗೂ ನೆಲ್ಲಿಕಟ್ಟೆ ರಾಮಕೃಷ್ಣ ಆಶ್ರಮದ ಮಕ್ಕಳಿಗೆ ಅನ್ನದಾನ ಆ.10ರಂದು ನಡೆಯಿತು.

ಕಾರ್ಯಕ್ರಮದಲ್ಲಿ ವಿಪಿನ್ ಕುಮಾರ್ ರವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ನುಡಿ‌ ನಮನ ಸಲ್ಲಿಸಿದರು. ನಗರ ಸಭಾ ಸದಸ್ಯ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ವಿಪಿನ್ ರವರು ಆತ್ಮೀಯ ಮಿತ್ರನಾಗಿ ನಮ್ಮೆಲ್ಲರಿಗೂ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿದ್ದವರು. ಬಾಲ್ಯವಸ್ಥೆಯಿಂದಲೇ‌ ಹೋರಾಟ ವ್ಯಕ್ತಿತ್ವದಿಂದ ಬೆಳೆದು ಬಂದಿರುವ ಅವರು ಉದ್ಯಮಿಯಾಗಿ ಹಾಗೂ ಸಂಘಟನಾತ್ಮಕವಾಗಿ ಬೆಳೆದವರು. ಆತ್ಮೀಯ ಮಿತ್ರನ ನೆನಪಿಗಾಗಿ ರಾಮಕೃಷ್ಣ ಅಶ್ರಮದ‌ ಮಕ್ಕಳಿಗೆ ಅನ್ನದಾನ ಹಾಗೂ ಸಾಮೆತ್ತಡ್ಕದ ಮೂರು ಬಡ ಕುಟುಂಬಗಳಿಗೆ ನಮ್ಮ ಮಿತ್ರ ಬಳಗದಿಂದ ಸಹಾಯ ಹಸ್ತ ನೀಡಲಾಗುವುದು ಎಂದರು.

ಸಾಮೆತ್ತಡ್ಕ ನಿವಾಸಿಗಳಾದ ಅವ್ವಮ್ಮರವರಿಗೆ ವ್ಹೀಲ್ ಚೆಯರ್, ಗಿರಿಜಾರವರಿಗೆ 94 ಸಿಸಿ ಹಕ್ಕು ಪಾತ್ರಕ್ಕಾಗಿ ಆರ್ಥಿಕ ನೆರವು ಹಾಗೂ ಶಶಿಕಲಾರವರ ಮನೆ ದುರಸ್ತಿಗೆ ಆರ್ಥಿಕ ನೆರವು ನೀಡಲಾಯಿತು.

ಮಿತ್ರ ಬಳಗದ ಸದಸ್ಯರಾದ ವಿನ್ನರ್ ಸಾಫ್ಟ್ ಡ್ರಿಂಕ್ಸ್ ನ ಮ್ಹಾಲಜ ರಮೇಶ್ ಪ್ರಭು, ಮಂಗಳಾ ಡೆಕೊರೇಟರ್ಸ್ ನ ಮೋಹನ್‌ ಪಿಲಿಂಜ, ಮಂಗಳಾಮೃತ ಡ್ರೈವಿಂಗ್ ಸ್ಕೂಲ್ ನ ಶೋಭಾ ರೈ, ಅರವಿಂದ, ಆಶಾ ಕಾರ್ಯಕರ್ತೆ ಸುಜಾತ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.