Breaking News

ರಾಮಕುಂಜ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕೌಶಿಕ್ ರಾವ್‌ಗೆ ರಾಜ್ಯದಲ್ಲಿ 3ನೇ ಸ್ಥಾನ

Puttur_Advt_NewsUnder_1
Puttur_Advt_NewsUnder_1

 

ರಾಮಕುಂಜ: 2019-20ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಬ ತಾಲೂಕು ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಕೌಶಿಕ್ ರಾವ್‌ರವರು 625ರಲ್ಲಿ 623 ಅಂಕ ಪಡೆದುಕೊಂಡು ರಾಜ್ಯದಲ್ಲಿ 3ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ.

ಕೌಶಿಕ್ ರಾವ್‌ರವರು ಇಂಗ್ಲಿಷ್-99, ವಿಜ್ಞಾನ-99, ಕನ್ನಡ-125, ಗಣಿತ-100, ಸಮಾಜ-100 ಹಾಗೂ ಸಂಸ್ಕೃತ-100 ಮಾರ್ಕ್ಸ್ ಪಡೆದುಕೊಂಡಿದ್ದಾರೆ. ಇವರು ರಾಮಕುಂಜ ಗ್ರಾಮದ ಬದೆಂಜ ನಿವಾಸಿ ಚಿತ್ತರಂಜನ್ ರಾವ್ ಹಾಗೂ ಸಂಧ್ಯಾ ದಂಪತಿ ಪುತ್ರ. ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲಾ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ, ಶೈಕ್ಷಣಿಕ ಸಲಹೆಗಾರ ರವೀಂದ್ರ ದರ್ಬೆ, ಮುಖ್ಯಶಿಕ್ಷಕಿ ಗಾಯತ್ರಿಯವರು 3ನೇ ರ್‍ಯಾಂಕ್ ಪಡೆದುಕೊಂಡ ಕೌಶಿಕ್ ರಾವ್‌ರನ್ನು ಅಭಿನಂದಿಸಿದ್ದಾರೆ.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.