Breaking News

ತೀವ್ರಗೊಂಡ ಮಳೆಗೆ 3 ತಿಂಗಳಲ್ಲಿ 248 ವಿವಿಧ ರೀತಿಯ ಹಾನಿ ಪ್ರಕರಣಗಳು

Puttur_Advt_NewsUnder_1
Puttur_Advt_NewsUnder_1
  • ಮನೆ, ಕೃಷಿ, ದನದ ಹಟ್ಟಿ, ಜಾನುವಾರು, ಜೀವ ಹಾನಿ ಸೇರಿ ಒಟ್ಟು ರೂ. 20.5 ಲಕ್ಷ ಪರಿಹಾರ ವಿತರಣೆ

ಪುತ್ತೂರು: ಕರಾವಳಿಯಲ್ಲಿ ಮುಂಗಾರು ಮಳೆ ಆರಂಭಗೊಂಡ ಬಳಿಕ ತಾಲೂಕಿನಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ತಾಲೂಕಿನಲ್ಲಿ ಜೂನ್, ಜುಲೈ ಮತ್ತು ಆಗಸ್ಟ್ ಪ್ರಥಮ ವಾರದ ಅಂಕಿ ಸಂಖ್ಯೆ ಪ್ರಕಾರ 221 ಮನೆಗಳಿಗೆ, ಮಾನವ ಜೀವ, ಜಾನುವಾರು ಜೀವ ಹಾನಿ, 14 ತೋಟಗಾರಿಕಾ ಬೆಳೆಗಳು, 8 ದನದ ಹಟ್ಟಿ ಹಾನಿಯಾಗಿದೆ. ಹಾನಿಗೊಳಗಾದ ಎಲ್ಲಾ ಕುಟುಂಬಗಳಿಗೂ ಪರಿಹಾರವನ್ನು ಹಸ್ತಾಂತರಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಹಶೀಲ್ದಾರ್ ರಮೇಶ್ ಬಾಬು ಟಿ ತಿಳಿಸಿದ್ದಾರೆ.

ಕರಾವಳಿಯಲ್ಲಿ ಮುಂಗಾರು ಮಳೆ ಅತ್ಯಂತ ಕ್ಷೀಣವಾಗಿ ಆರಂಭಗೊಂಡಿದ್ದರೂ, ಬಳಿಕದ ದಿನಗಳಲ್ಲಿ ಮಳೆ ಬಿರುಸನ್ನು ಪಡೆದುಕೊಂಡಿದೆ. ಆಗಸ್ಟ್ ತಿಂಗಳ ಮೊದಲ ವಾರದಿಂದಲೇ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮಳೆಯ ಹಾನಿಯ ಪ್ರಮಾಣವೂ ಹೆಚ್ಚಾಗುತ್ತಿದೆ. ತಾಲೂಕಿನಲ್ಲಿ ಈಗಾಗಲೇ ಸುಮಾರು 248 ವಿವಿಧ ರೀತಿಯ ಹಾನಿ ಪ್ರಕರಣಗಳು ಬೆಳಕಿಗೆ ಬಂದಿದ್ದು, ಬಹುತೇಕ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರವನ್ನೂ ವಿತರಿಸಲಾಗಿದೆ. ಮುಖ್ಯವಾಗಿ ಮಳೆಯಿಂದ ಮನೆಗಳಿಗೆ ಹಾನಿಯುಂಟಾದ ಪ್ರಕರಣಗಳು ಹೆಚ್ಚಾಗಿದ್ದು, ಪುತ್ತೂರಿನಲ್ಲಿ ಈಗಾಗಲೇ 1 ಸಾವು ಸಂಭವಿಸಿದ್ದು ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ನೀಡಲಾಗಿದೆ. 1 ಜಾನುವಾರು ಸಾವಿಗೀಡಾಗಿದ್ದು, 10 ಸಾವಿರ ಪರಿಹಾರವನ್ನು ಸಂಬಂಧಪಟ್ಟ ಕುಟುಂಬಗಳಿಗೆ ನೀಡಲಾಗಿದೆ. ಪುತ್ತೂರಿನಲ್ಲಿ ಒಟ್ಟು 20.5 ಲಕ್ಷ ಪರಿಹಾರವನ್ನು ನೀಡಲಾಗಿದೆ. ಇನ್ನೂ ಹಾನಿಗೀಡದ ಕುಟುಂಬದ ಅರ್ಜಿ ತಡವಾದ್ದ 8 ಪ್ರಕರಣಗಳಿಗೆ ಪರಿಹಾರ ಮೊತ್ತ ನೀಡಲು ಬಾಕಿ ಇದೆ. ಇನ್ನೆರಡು ದಿನಗಳಲ್ಲಿ ಆ ಪರಿಹಾರವನ್ನು ವಿತರಣೆ ಮಾಡಲಾಗುವುದು ಎಂದು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಮಾಹಿತಿ ನೀಡಿದ್ದಾರೆ.

ಉಪ್ಪಿನಂಗಡಿಯಲ್ಲಿ 12 ಮಂದಿಗೆ ಕಾಳಜಿ ಕೇಂದ್ರ ಸಿದ್ಧತೆ:
ಪುತ್ತೂರಿನ ಉಪ್ಪಿನಂಗಡಿಯಲ್ಲಿ ಮಳೆಯಿಂದಾಗಿ ಮೂರು ಮನೆಗಳು ಕುಸಿಯುವ ಭೀತಿಯಲ್ಲಿದೆ. ಉಪ್ಪಿನಂಗಡಿಯ ಪಾಲೆತ್ತಡಿ ಎಂಬಲ್ಲಿ ಈ ಮೂರೂ ಮನೆಗಳು ಅಪಾಯದ ಹಂತದಲ್ಲಿದೆ. ಆದರೆ ಈ ಮನೆಗಳಲ್ಲಿ ವಾಸಿಸುವ ಮಂದಿ ಮಾತ್ರ ಬೇರೆಡೆಗೆ ಸ್ಥಳಾಂತರಿಸಲು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಸಂಬಂಧ ಅಧಿಕಾರಿಗಳು ಮನೆ ಮಂದಿಗೆ ನೋಟೀಸ್ ಜಾರಿ ಮಾಡಿ ತೆರವುಗೊಳಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಪೋಲೀಸ್ ಕೇಸು ದಾಖಲಿಸಿ ನೆರೆ ಪರಿಹಾರ ಕೇಂದ್ರಕ್ಕೆ ಸ್ಥಳಾತರಿಸಲೂ ಅಧಿಕಾರಿಗಳು ಸೂಚಿಸಿದ್ದಾರೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕೊಂಚ ಕ್ಷೀಣಗೊಂಡಿದ್ದು, ಮುಂಜಾಗೃತಾ ಕ್ರಮವಾಗಿ 120 ಮಂದಿಗೆ ನೆರೆ ಪರಿಹಾರ ಕೇಂದ್ರ(ಕಾಳಜಿ) ಯನ್ನು ಉಪ್ಪಿನಂಗಡಿ ಪ್ರೌಢ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸದ್ಯದ ಮಟ್ಟಿಗೆ ಯಾರನ್ನೂ ಸ್ಥಳಾಂತರಗೊಳಿಸಲ್ಲ. ಇನ್ನೂ ಅಪಾಯ ಬಂದಾಗಾ ತುರ್ತಾಗಾಗಿ ಅವರನ್ನು ಸ್ಥಳಾಂತರಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.