Breaking News

ರಾಜ್ಯ ಮಟ್ಟದ ಫೋಟೋ ವಿದ್ ಗೋಮಾತೆ ಭಾವಚಿತ್ರ ಸ್ಪರ್ಧೆಯಲ್ಲಿ ರಾಮಕುಂಜದ ಪ್ರಣಮ್ ರೈಗೆ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಚಿಕ್ಕಮಗಳೂರು ಶೃಂಗೇರಿ ವಿದ್ಯಾರಣ್ಯ ಶ್ರೀ ಶಂಕರ ಗೋ ಸೇವಾ ಟ್ರಸ್ಟ್‌ನವರು ಆಯೋಜಿಸಿದ ರಾಜ್ಯ ಮಟ್ಟದ ಫೋಟೋ ವಿದ್ ಗೋಮಾತೆ ಭಾವಚಿತ್ರ ಸ್ಪರ್ಧೆಯ ಮಕ್ಕಳ ವಿಭಾಗದಲ್ಲಿ ನೆಲ್ಯಾಡಿಯ ನಟವರ್ಯ ಡ್ಯಾನ್ಸ್ ಸ್ಟುಡಿಯೋ ಇದರ ನಾಟ್ಯರತ್ನ ಕೆ.ಎಲ್.ಪ್ರಣಮ್ ರೈ ಕೇಳ್ಕ ರಾಮಕುಂಜ ಇವರ ಗೋವಿನೊಂದಿಗಿನ ಭಾವಚಿತ್ರಕ್ಕೆ ಅತ್ಯುತ್ತಮ ಫೋಟೋ ಹಾಗೂ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿ ಲಭಿಸಿದೆ.

ಸಂಸ್ಕೃತ ಸಿರಿ ಇವರು ಆಯೋಜಿಸಿದ ಮಕ್ಕಳ ಫೋಟೋ ಸ್ಪರ್ಧೆಯ ಮೂರು ವರ್ಷದ ಮಕ್ಕಳ ವಿಭಾಗದಲ್ಲಿ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ಫೋಟೋ ವಿದ್ ಗೋ ಮಾತೆ ಸ್ಪರ್ಧೆಯಲ್ಲಿ ಪ್ರಣಮ್ಯ ರೈಗೆ ಇದು ಎರಡನೇ ಪ್ರಶಸ್ತಿಯಾಗಿದೆ. ಪ್ರಣಮ್ ರೈಯವರು ಆಲಂಕಾರು ಸಿ.ಎ.ಬ್ಯಾಂಕ್ ಉದ್ಯೋಗಿ ಕೆ.ಲೋಕನಾಥ್ ರೈ ಹಾಗೂ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಫುಲ್ಲ ರೈ ರಾಮಕುಂಜ ಇವರ ಸುಪುತ್ರ. ನೆಲ್ಯಾಡಿ ನಟವರ್ಯ ಡ್ಯಾನ್ಸ್ ಸ್ಟುಡಿಯೋದ ನಾಟ್ಯರತ್ನಗಳಾದ ಪ್ರಣಮ್ಯಾ ಡಿ ಪಡ್ಡಾಯಿಬೆಟ್ಟು ಅರಸಿನಮಕ್ಕಿ, ಸಾನ್ವಿ ಹೊಸಮಜಲು ನೆಲ್ಯಾಡಿ, ಶಾಶ್ವತ್ ಕೊಣಾಲು, ಖುಷಿ ರಾಮನಗರ ಬಲ್ಯ, ರಜಿತಾ ಎನ್ ಎಂ ಬಂದಾರು ಬೆಳ್ತಂಗಡಿ ಇವರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.