ಕಜೆ – ಬೇರಿಕೆ ಅಂಗನವಾಡಿ ಕೇಂದ್ರದಲ್ಲಿ ಕೊರೋನಾ ನಿಯಂತ್ರಣ ಜನಜಾಗೃತಿ ಅಭಿಯಾನಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1
  • ಸರಕಾರದ ನಿಯಮಗಳನ್ನು ಪಾಲಿಸಿ ಕೊರೋನ ನಿಯಂತ್ರಿಸಿ: ರಾಧಕೃಷ್ಣ ಬೊರ್ಕರ್

ಪುತ್ತೂರು: ಕೊರೊನಾಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ. ಮುಂಜಾಗ್ರತೆಯನ್ನು ವಹಿಸಿಕೊಂಡು ಅದು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಭಾರೀ ಅಗತ್ಯವಾಗಿದೆ‌. ಸರಕಾರದ ತಿಳಿಸಿರುವ ನಿಯಮಗಳನ್ನು ನಾವು ಪಾಲನೆ ಮಾಡಿಕೊಂಡು ಸೋಂಕು ಹರಡವುದನ್ನು ತಡೆಗಟ್ಟ ಬೇಕು ಎಂದು ತಾಲೂಕು ಪಂಚಾಯತ್ ಅದ್ಯಕ್ಷರಾದ ರಾಧಕೃಷ್ಣ ಬೊರ್ಕರ್ ರವರು ಹೇಳಿದರು.

ಅವರು ಆ.೧೦ರಂದು  ಬನ್ನೂರು ಗ್ರಾಮದ ಕಜೆ ಬೇರಿಕೆ ಅಂಗನವಾಡಿ ಕೇಂದ್ರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶ್ರಿ ದುರ್ಗಾ ಒಕ್ಕೂಟ ಕುಂಟ್ಯಾಣ ಮತ್ತು ರೋಟರಿ ಕ್ಲಬ್ ಇದರ ಆಶ್ರಯದಲ್ಲಿ ಇತರ ಸಹಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ಕೊರೋನಾ ನಿಯಂತ್ರಣ ಜನಜಾಗೃತಿ ಅಭಿಯಾನ ಹಾಗೂ ಡೆಂಗ್ಯೂ ತಡೆ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೋಬ್ಬರು ಜೀವ ಮತ್ತು ಆರೋಗ್ಯ ರಕ್ಷಣೆ ನಮ್ಮೇಲ್ಲರ ಜವಾಬ್ದಾರಿ ಎಂಬ ದೈಯವನ್ನಿಟ್ಟುಕೊಂಡು ಇಂತಹ ಸಾಮಾಜಮುಖಿ ಜನಜಾಗೃತಿ ಕಾರ್ಯಕ್ರಮವನ್ನಿಟ್ಟುಕೊಂಡ ಸಂಘ ಸಂಸ್ಥೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಹಾಗೆಯೇ ಕೊರೋನಾ ನಿಯಂತ್ರಣ ದಲ್ಲಿಡಲು ಹಗಲಿರುಳು ಸೇನಾನಿಗಳಂತೆ ದುಡಿದ ಆರೋಗ್ಯ ಸಹಾಯಕಿಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ಅಭಿನಂದನೆಗಳು ಸಲ್ಲಿಸಿದರು. ಕೊರೋನಾದ ವಿರುದ್ದ ಹೋರಾಡುತ್ತಿರುವ ಆಯುರ್ವೇದ ಮದ್ದಿನ ಮಹತ್ವವನ್ನು ತಿಳಿಸಿದರು.

 ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಲತಾರವರು ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಜಗತ್ತನ್ನೆ ಕಾಡುತ್ತಿರುವ ಕೊರೋನಾ ಮಹಾಮಾರಿಯನ್ನು ಧೈರ್ಯದಿಂದ ಎದುರಿಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ವೈಯುಕ್ತಿಕ ಭೇಟಿ, ಒಟ್ಟು ಸೇರುವುದು ಸಾದ್ಯ ವಾಗದೆ ಇರುವ ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಾಮಾಜಿಕ ಭಾಂದವ್ಯ ಶಿಧಿಲಗೊಳ್ಳದಂತೆ ಎಚ್ಚರ ವಹಿಸಬೇಕಾಗಿದೆ. ನಿಯಮ ಪಾಲನೆಯ ಮೂಲಕ ವೈಯುಕ್ತಿಕ ಸಾಮಾಜಿಕ ಸುರಕ್ಷತೆಗೆ ಒತ್ತು ನೀಡಿ ತಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮಾಡಬೇಕಾಗಿದೆ. ಸಮಾಜದ ಸ್ವಸ್ಥ ಸಾಮಾಜಿಕ ಸುರಕ್ಷತೆಗೆ ಒತ್ತು ನೀಡಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಗ್ರಾಮೀಣ ಭಾಗದಲ್ಲಿನ ಜನ ಕೈ ಜೋಡಿಸಿ ಕೋರೋನ ವಿರುದ್ದ ಹೊರಾಟದಲ್ಲಿ ಒಗ್ಗಟ್ಟಾಗಬೇಕಾಗಿದೆ‌.

ಬನ್ನೂರು ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಶಾಂತಾರಾಮ ನಾಯಕ್ ರವರು ಮಾತನಾಡಿ ಕೊರೋನಾ ಸೊಂಕಿತರನ್ನು ದೂರವಿಡುವುದಾಗಲಿ ಅವರನ್ನು ರೋಗಿಯಂತೆ ಕಾಣುವುದಾಗಲಿ ಮಾಡಬೇಡಿ. ಇದರಿಂದ ಸೊಂಕಿತರು ಶೋಷಣೆಗೆ ಒಳಪಡುತ್ತಾರೆ. ಸರಕಾರದ ಸೂಚನೆಗಳನ್ನು ಪಾಲಿಸಿದರೆ ಕೊರೋನ ತನ್ನಿಂತಾನೆ ಕಡಿಮೆಗೊಳ್ಳುತ್ತದೆ ಎಂದರು.

ರೋಟರಿ ಡಿಸ್ಟ್ರಿಕ್ಟ್ ಸೆಕ್ರೇಟರಿ ಪ್ರಾಜೆಕ್ಟ್ ರೋಟರಿ ಡಿಸ್ಟ್ರಿಕ್ಟ್ 3138 ಅಸ್ಕರ್ ಅನಂದ ರವರು ಮಾತನಾಡಿ ಗ್ರಾಮೀಣ ಭಾಗದ ಅಭಿವೃದ್ಧಿ ಮತ್ತು ಆರೋಗ್ಯ ವನ್ನು ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಸಮಾಜ ಮುಖಿ ಕಾರ್ಯಗಳ ಮೂಲಕ ನಾವು ನಮ್ಮ ಸಂಸ್ಥೆ ಯ ವತಿಯಿಂದ ಕೈ ಜೋಡಿಸುತ್ತೆವೆ. ನಿರಂತರ ಜನರ ಸೇವೆಯೊಂದಿಗೆ ಸಮಾಜದ ಸ್ವಸ್ಥ ನಾಳೆಗಳಿಗಾಗಿ ಸಕ್ರಿಯವಾಗಿ ಜನರೊಂದಿಗೆ ಇರುತ್ತೆವೆ ಎಂದರು.
ಬನ್ನೂರು ಗ್ರಾಮದ ಗ್ರಾಮೀಣ ಆರೋಗ್ಯ ಸಹಾಯಕಿ  ಜಯಂತಿರವರು ಡೆಂಗ್ಯೂ ಹಾಗೂ ಸ್ತನ್ಯಪಾನ ಸಪ್ತಾಹ ಮತ್ತು ಸರಕಾರದಿಂದ ನೀಡಬೇಕಾದಂತಹ ಲಸಿಕೆಗಳ ಬಗ್ಗೆ ವಿವರ ನೀಡಿದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧ್ಯಕ್ಷರಾದ ರತ್ನಾಕರ ಪ್ರಭು ಕಂಜೂರು ಉಪಾಧ್ಯಕ್ಷರಾದ ಅಣ್ಣು ಅಡೇಂಚ್ಚಿಲಡ್ಕ, ಕಾರ್ಯದರ್ಶಿ ಗಂಗಾಧರ ಮೂಲ್ಯ,  ಸದಾಶಿವ ಕಾಲೋನಿ ಅಡೇಂಚ್ಚಿಲಡ್ಕ, ಸುಬ್ರಮಣ್ಯ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯ ಯೋಜನೆಯ ಪುತ್ತೂರು ವಲಯ ಮೇಲ್ವಿಚಾರಕಿ ಪಾವನ ಪುತ್ತೂರು, ಜನಜಾಗೃತಿ ವೇದಿಕೆ ಪುತ್ತೂರು ವಲಯದ ಅದ್ಯಕ್ಷರಾದ ಶಿನಪ್ಪ ಕುಲಾಲ್, ಸ್ಥಳಿಯ ಉದ್ಯಮಿ ಡೆನ್ನಿಸ್ ಮಸ್ಕರೇನಸ್, ಕಸಬಾ ವಲಯ ಅಂಗನವಾಡಿ ಮೇಲ್ವಿಚಾರಕಿ ಜಲಜಾಕ್ಷಿ, ಬಾಲವಿಕಾಸ ಸಮಿತಿಯ ಅದ್ಯಕ್ಷರಾದ ಮಮತ ಎಸ್ 
ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರೋಟರಿ ಪುತ್ತೂರು ಇಲೈಟ್ ಇದರ ವತಿಯಿಂದ ಆರೋಗ್ಯ ಸಹಾಯಕಿಯರಿಗೆ ಆಶಾಕಾರ್ಯಕರ್ತೆಯರಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್, ಫೆಸ್ ಶಿಲ್ಡ್ ಹಾಗೂ ಗ್ರಾಮಸ್ಥರಿಗೆ ಮಾಸ್ಕ್ ವಿತರಿಸಲಾಯಿತು. ಜನಜಾಗೃತಿ ವೇದಿಕೆ ಪುತ್ತೂರುವಲಯದ ಸಮಿತಿ ವತಿಯಿಂದ  ಶಿನಪ್ಪ ಕುಲಾಲ್ ರವರು ಮಾಸ್ಕ್ ವಿತರಿಸಿದರು.  ಸಮರ್ಥ ಭಾರತ  ಜಾಗೃತಿ ಕರಪತ್ರವನ್ನು ಮನೆ ಗಳಿಗೆ ತೆರಳಿ ಕೊಡುವುದರ ಮುಖಾಂತರ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಶಿನಪ್ಪ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ರತ್ನಾಕರ ಪ್ರಭು ವಂದಿಸಿ, ಅಂಗನವಾಡಿ ಕಾರ್ಯಕರ್ತೆ ರೇಖಾ ಡಿ ಎಸ್ ಸ್ವಾಗತಿಸಿ. ಅಂಗನವಾಡಿ ಸಹಾಯಕಿ ಮಾಲತಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.