ಕಾವು ತುಡರ್ ಯುವಕ ಮಂಡಲದ ದಶಸಂಭ್ರಮದ ಪ್ರಯುಕ್ತ ಸಾರ್ವಜನಿಕವಾಗಿ 300 ತೆಂಗಿನ ಸಸಿ ವಿತರಣೆ

Puttur_Advt_NewsUnder_1
Puttur_Advt_NewsUnder_1
ಕಾವು: ದಶಮಾನೋತ್ಸವದ ಸಂಭ್ರಮದಲ್ಲಿರುವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಾವು ನನ್ಯ ತುಡರ್ ಯುವಕ ಮಂಡಲದ ದಶಸಂಭ್ರಮದ ಸವಿನೆನಪಿಗಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ದಿನದಂದು  ಸಾರ್ವಜನಿಕವಾಗಿ 300 ತೆಂಗಿನ ಸಸಿ ಉಚಿತವಾಗಿ ವಿತರಿಸಲಾಯಿತು.
ಮದ್ಲ ವೆಂಕಟ್ರಮಣ ಗೌಡರವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಶರತ್ ಕುಮಾರ್ ರೈಯವರು ತೆಂಗಿನ ಸಸಿ ವಿತರಿಸಿ ಮಾತನಾಡಿ ಸದಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ತುಡರ್ ಯುವಕ ಮಂಡಲದ ನನಗೆ ತುಂಬಾ ಹೆಮ್ಮೆ ಇದೆ. ದಶಸಂಭ್ರಮದ ವರ್ಷದಲ್ಲಿ ಯುವಕ ಮಂಡಲಕ್ಕೆ ಏನಾದರೂ ಸಹಾಯ ಮಾಡಬೇಕು ಎಂಬ ಇಚ್ಛೆಯಿಂದ ಸುಮಾರು 300ತೆಂಗಿನ ಸಸಿಯನ್ನು ಉಚಿತವಾಗಿ ನೀಡಿ ಸಾರ್ವಜನಿಕ ವಿತರಣೆಗೆ ಸಹಕರಿಸಿದ್ದೇನೆ. ಮುಂದೆಯೂ ಕೂಡ ಯುವಕ ಮಂಡಲದ ಸಮಾಜ ಸೇವೆಗೆ ನನ್ನ ಸಹಕಾರ ಇದೆ ಎಂದು ಹೇಳಿದರು.
ತೆಂಗಿನ ಸಸಿ ನೆಡುವುದು ಪುಣ್ಯದ ಕೆಲಸ- ಲೋಕೇಶ್ ಚಾಕೋಟೆ
ಅರಿಯಡ್ಕ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಲೋಕೇಶ್ ಚಾಕೋಟೆಯವರು ಮಾತನಾಡಿ ನಮ್ಮ ಸಂಸ್ಕೃತಿಯಲ್ಲಿ ಕಲ್ಪವೃಕ್ಷಕ್ಕೆ ಮಹತ್ವದ ಸ್ಥಾನವಿದೆ, ತೆಂಗಿನ ಸಸಿ ನೆಟ್ಟು ಬೆಳೆಸುವುದು ಪುಣ್ಯದ ಕೆಲಸ, ಇದಕ್ಕೆ ಪೂರಕವಾಗಿ ತುಡರ್ ಯುವಕ ಮಂಡಲವು ಸಾರ್ವಜನಿಕವಾಗಿ ತೆಂಗಿನ ಸಸಿ ವಿತರಣೆ ಮಾಡಿರುವುದು ದೇವರು ಮೆಚ್ಚುವ ಕೆಲಸವಾಗುದ ಉಪಸ್ಥಿತರಿದ್ದರು. 
ಯುವಕ ಮಂಡಲದ ಅಧ್ಯಕ್ಷ ಸುನೀಲ್ ನಿಧಿಮುಂಡ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಯುವಕ ಮಂಡಲದ ಉಪಾಧ್ಯಕ್ಷ ಶ್ರೀಕುಮಾರ್ ಬಲ್ಯಾಯ, ಜತೆ ಕಾರ್ಯದರ್ಶಿ ಮೋಹನಚಂದ್ರ, ಭಜನಾ ಸಂಘದ ಗೌರವಾಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಅಧ್ಯಕ್ಷ ಸಂಕಪ್ಪ ಪೂಜಾರಿ ಚಾಕೋಟೆ, ಕಾರ್ಯದರ್ಶಿ ಧನಂಜಯ ನಾಯ್ಕ ಕುಂಞಿಕುಮೇರು, ಸದಸ್ಯರಾದ ಭವಿತ್ ರೈ, ಪುರುಷೋತ್ತಮ ಆಚಾರ್ಯ ನನ್ಯ, ಹರೀಶ್ ಕೆರೆಮೂಲೆ, ತಿರುಮಲೇಶ ಮಿನೋಜಿಕಲ್ಲು, ಹರ್ಷ ಎ.ಆರ್, ರಾಘವ ಬಿ, ನಿರಂಜನ ರಾವ್, ಶಶಿಕುಮಾರ್ ಪಿ, ರಾಘವ ಪಿ.ಎಸ್, ರಾಜೇಶ್ ಬಿ, ಬಾಲಕೃಷ್ಣ ಪಾಟಾಳಿ, ಯಜಿತ್ ಆಚಾರಿಮೂಲೆ, ಸಂದೇಶ್ ಚಾಕೋಟೆಯವರು ಪಾಲ್ಗೊಂಡಿದ್ದರು.
ಕಾವು ಧನುಜ ನಿವಾಸದ ಶರತ್ ಕುಮಾರ್ ರೈಯವರು ತುಡರ್ ಯುವಕ ಮಂಡಲದ ದಶಸಂಭ್ರಮದ ಸವಿನೆನಪಿನ ಕಾರ್ಯಕ್ರಮಕ್ಕಾಗಿ 300ತೆಂಗಿನ ಸಸಿಯನ್ನು ಉಚಿತವಾಗಿ ನೀಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.