ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ‌ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಶ್ರೀ ಕೃಷ್ಣ ಯುವಕ ಮಂಡಲ ಕಂಬಳತಡ್ಡ ಇದರಿಂದ ಆಚರಿಸಲ್ಪಡುವ 26 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ‌ ಕಾರ್ಯಕ್ರಮವು ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನ ಬೂಡಿಯಾರು ಹೊಸಮನೆ ಇಲ್ಲಿ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಶ್ರೀ ಅಮ್ಮನವರ ಸೇವಾ ಸಮಿತಿಯ ಗೌರವಾಧ್ಯಕ್ಷ ,ಉದ್ಯಮಿ ಆದ ಶ್ರೀ ಸತೀಶ್ ರೈ ಮಿಷನ್ ಮೂಲೆ ಇವರು ಶ್ರೀದೇವರಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೂ ಮೊದಲು ಶ್ರೀ ಅಮ್ಮನವರ ದೇವಸ್ಥಾನ ನೇರಳಕಟ್ಟೆ ಹಾಗೂ ಶ್ರೀ ಕೊರಗಜ್ಜನ ಕ್ಷೇತ್ರ ಆರ್ಯಾಪು ಇಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಕಾರ್ಯಕ್ರಮದ ನಂತರ ಶ್ರೀ ಚಕ್ರ ರಾಜರಾಜೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ತಂತ್ರಿಗಳಾದ ಶ್ರೀ ಪ್ರೀತಂ ಪುತ್ತೂರಾಯರು ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ  ಗಂಗಾಧರ ಅಮೀನ್ ಹೊಸಮನೆ , ಯುವಕಮಂಡಲದ ಸ್ಥಾಪಕಾಧ್ಯಕ್ಷ ರವಿಚಂದ್ರ ಆಚಾರ್ಯ ಆರ್ಯಾಪು, ಶ್ರೀ ಅಮ್ಮನವರ ಸೇವಾಸಮಿತಿಯ ಕಾರ್ಯದರ್ಶಿ ಸುರೇಶ್ ಪಿ ಹಾಗೂ ಯುವಕಮಂಡಲದ ಪದಾಧಿಕಾರಿಗಳು, ಸದಸ್ಯರು ಭಾಗಿಯಾಗಿದ್ದರು. ಯುವಕ ಮಂಡಲದ ಅಧ್ಯಕ್ಷರಾದ  ಸಂತೋಷ್ ಸುವರ್ಣ ಮೇರ್ಲ ಸ್ವಾಗತಿಸಿದರು ,  ಜಯಂತ ಶೆಟ್ಟಿ ಕಂಬಳತಡ್ಡ ಪ್ರಾರ್ಥಿಸಿ ,  ನೇಮಾಕ್ಷ ಸುವರ್ಣ ಇವರು ಧನ್ಯವಾದ ಸಮರ್ಪಿಸಿದರು. ಕೊರೋನಾ ಸಾಂಕ್ರಾಮಿಕ ವೈರಸ್ ಹರಡುವುದನ್ನು ನಿಯಂತ್ರಿಸಲು ಸಾಮಾಜಿಕ ಅಂತರ ಕಾಪಾಡಬೇಕಾಗಿರುವುದರಿಂದ ಇದೇ ಮೊದಲ ಸಲ ಸಾರ್ವಜನಿಕ ಸಮಾರಂಭವನ್ನು ರದ್ದು ಪಡಿಸಿ ,ಸರಳವಾಗಿ ಆಚರಿಸಲಾಯಿತು.

ಕೋವಿಡ್‌ -19ರ ಮಾರ್ಗಸೂಚಿ ಅನ್ವಯ ಕಾರ್ಯಕ್ರಮ ಆಯೋಜಿಸಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.