ಮಂಗಳೂರಿನ ರೀತಿಯಲ್ಲೇ ಬೆಂಗಳೂರಿನಲ್ಲಿ ಘಟನೆ: ಎಸ್‌ಡಿಪಿಐ, ಪಿಎಫ್‌ಐಯ ಕೃತ್ಯ- ಬಜರಂಗದಳ ಆರೋಪ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಬಾರಿ ಮಂಗಳೂರುನಲ್ಲಿ ನಡೆದ ರೀತಿಯಲ್ಲಿಯೆ ಬೆಂಗಳೂರಿನ ಡಿ.ಜೆ ಹಳ್ಳಿಯಲ್ಲಿ ನಡೆದ ಎಸ್‌ಡಿಪಿಐ ಮತ್ತು ಪಿಎಫ್‌ಐ ಪ್ರೇರಿತ ಗಲಭೆ ಆಗಿದೆ. ಇದನ್ನು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ತೀವ್ರವಾಗಿ ಖಂಡಿಸುತ್ತದೆ ಎಂದು ಬಜರಂಗದಳ ಪ್ರಾಂತ ಸಹ ಸಂಚಾಲಕ್ ಮುಳಿಕೃಷ್ಣ ಹಸಂತಡ್ಕ ಅವರು ತಿಳಿಸಿದ್ದಾರೆ. 

ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಸರಕಾರವು ಈ ಘಟನೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ ಒಪ್ಪಿಸುವ ಮೂಲಕ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು ಹಾಗೂ ರಾಜ್ಯಾದ್ಯಂತ ಹಲವು ಗಲಭೆ, ಕೊಲೆ, ವಿಧ್ವಂಸಕ ಕೃತ್ಯಗಳನ್ನು ಎಸಗಿರುವ ಕೆಎಫ್‌ಡಿ, ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳನ್ನು ತಕ್ಷಣ ನಿಷೇಧ ಮಾಡಬೇಕೆಂದು ಆಗ್ರಹಿಸಿದ್ದಾರೆ. ಹಿಂದೂ ಸಮಾಜದ ಮೇಲೆ ಅಮಾಯಕರ ಮೇಲೆ ಈ ರೀತಿಯ ಯಾವುದೇ ಸವಾರಿಗಳನ್ನು, ದಬ್ಬಾಳಿಕೆಯನ್ನು ಬಜರಂಗದಳ ಸಹಿಸುವುದಿಲ್ಲ ಇದಕ್ಕೆ ಸರಿಯಾದ ಉತ್ತರ ನೀಡಲು ಬಜರಂಗದಳ ಸಿದ್ಧವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬಜರಂಗದಳ ಪ್ರಾಂತ ಸಂಚಾಲಕ್ ಸುನಿಲ್ ಕೆ.ಆರ್, ಸಹ ಸಂಚಾಲಕ್ ಮುರಳಿಕೃಷ್ಣ ಹಸತಂಡ್ಕ, ರಘು ಸಕಲೇಶಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.