ರೋಟರಿ ಪುತ್ತೂರು ಯುವದಿಂದ ಕೊರೋನಾ ಜಾಗ್ರತಿ ಅಭಿಯಾನ- ಸಹಾಯಕ ಆಯುಕ್ತರಿಂದ ಚಾಲನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವ್ಯಾಪಕವಾಗಿ ಕೊರೋನಾ ಹಬ್ಬುತ್ತಿರುವ ಸಂದರ್ಭದಲ್ಲಿ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಇದರ ವತಿಯಿಂದ ನಡೆಯುವ ಕೊರೋನಾ ಜನಜಾಗೃತಿ ಅಭಿಯಾನದ ಕರಪತ್ರವನ್ನು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್ ಅವರು ಬಿಡುಗಡೆ ಮಾಡಿದರು.

 

ಈ ಕರಪತ್ರವನ್ನು ಪುತ್ತೂರು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಜನಸಾಮಾನ್ಯರಿಗೆ ವಿತರಿಸಿ ಕೊರೊನಾ ಜಾಗೃತಿ ಮೂಡಿಸಲಾಗುವುದು. ಈ ಸಂದರ್ಭದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸಿದ  ಸಹಾಯಕ ಆಯುಕ್ತರನ್ನು ಯುವದ ಅಧ್ಯಕ್ಷ ಡಾ. ಹರ್ಷ ಕುಮಾರ್ ರೈ ಇವರು ಸನ್ಮಾನಿಸಿದರು. ಕಾರ್ಯದರ್ಶಿ ಉಮೇಶ್ ನಾಯಕ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಅಸಿಸ್ಟೆಂಟ್ ಗವರ್ನರ್ ರತ್ನಾಕರ ರೈ ಇವರು ರೋಟರಿ ಯುವದ ಪ್ರಾಜೆಕ್ಟ್ ಬಗ್ಗೆ ವಿವರಣೆ ನೀಡಿದರು.

ಮಾಜಿ ಅಧ್ಯಕ್ಷರಾದ ಡಾ. ಚೇತನ್ ಪ್ರಕಾಶ್ ಹಾಗೂ ಮಾಜಿ ಕಾರ್ಯದರ್ಶಿ ಭರತ್ ಪೈ, ನಿರ್ದೇಶಕ ಸಚಿನ್ ನಾಯಕ್ ಹಾಗೂ ನಗರಸಭೆಯ ಅಭಿಯುತರಾದ  ಶ್ರೀಧರ್ ನಾಯಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.