ನರಿಮೊಗರು : ಸಾಲ ಮನ್ನಾ ಸಮಸ್ಯೆ ಪರಿಹರಿಸುವಂತೆ ರೈತರ ನಿಯೋಗದಿಂದ ಸಚಿವ ಕೋಟ ಭೇಟಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರೈತರ ನಿಯೋಗದಿಂದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ಸರಕಾರದಿಂದ ಬರಬೇಕಾದ ಬೆಳೆ ಸಾಲ ಮನ್ನಾದ ಹಣ ಇನ್ನೂ ಕೂಡ ರೈತರಿಗೆ ಸಿಗದೇ ಇರುವುದರಿಂದ ಆದಷ್ಟು ಶೀಘ್ರ ಈ ಸಮಸ್ಯೆಯನ್ನು ಪರಿಹರಿಸಬೇಕಾಗಿ ಮನವಿಯನ್ನು ಸಲ್ಲಿಸಲಾಯಿತು.

ಈ ಮೊದಲು ಹಲವಾರು ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿಕೊಂಡರೂ ಕೇವಲ ಆಶ್ವಾಸನೆಗಳಿಗಷ್ಟೇ ಸೀಮಿತಗೊಂಡು ಯಾವುದೇ ಪ್ರಯೋಜನ ಸಿಗದೆ ನೊಂದ ಸುಮಾರು ೨೪೯ ರೈತರಿಗೆ ಅರ್ಹತೆಯ ಆಧಾರದಲ್ಲಿ ಶೀಘ್ರವಾಗಿ ಮನ್ನಾದ ಹಣ ಸಿಗುವಂತೆ ಮಾಡಬೇಕೆಂದು ಕೇಳಿಕೊಳ್ಳಲಾಯಿತು. ಬಳಿಕ ಮಾತನಾಡಿದ ಉಸ್ತುವಾರಿ ಸಚಿವರು ೧೫ ದಿನಗೊಳಗಾಗಿ ನಿಮ್ಮ ಈ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಭರವಸೆ ನೀಡಿದರು. ನಿಯೋಗದಲ್ಲಿ ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯರಾದ ಜಯರಾಮ ಪೂಜಾರಿ ಒತ್ತೆ ಮಂಡೂರು, ರೈತ ಪ್ರಮುಖರಾದ ಸುರೇಶ್ ಪ್ರಭು ಶೆಟ್ಟಿಮಜಲು, ದೇವರಾಜ್ ಗೌಡ ಕಲ್ಕಾರು, ನಾರಾಯಣ ಗೌಡ, ಬಾಲಕೃಷ್ಣ ಪ್ರಭು ಕಲ್ಕಾರು, ಪ್ರವೀಣ್ ನಾಯ್ಕ್ ಸೇರಾಜೆ ಸೇರಿದಂತೆ ಕೆಲವು ಮಂದಿ ಕೃಷಿಕರು ತೆರಳಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.