Breaking News

ರಾಜ್ಯದಲ್ಲಿ ಮೂರನೇ ರ್‍ಯಾಂಕ್ ಪಡೆದ ಕೌಶಿಕ್ ರಾವ್‌ರವರಿಗೆ ಬಿ.ಜೆ.ಪಿ ವತಿಯಿಂದ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1

ಆಲಂಕಾರು : ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯದಲ್ಲೆ ಮೂರನೇ ರ್‍ಯಾಂಕ್ ಗಳಿಸಿದ ರಾಮಕುಂಜ ಗ್ರಾಮದ ಬದೆಂಜದ ಚಿತ್ತರಂಜನ್ ರಾವ್ ಮತ್ತು ಸಂಧ್ಯಾ ದಂಪತಿ ಸುಪುತ್ರ ಕೌಶಿಕ್ ರಾವ್ ರವರಿಗೆ ನೆಲ್ಯಾಡಿ ಬಿ.ಜೆ.ಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಅವರ ಮನೆಗೆ ತೆರಳಿ ಶಾಲು, ಹಾರ, ಫಲಪುಷ್ಪ, ಭಗವದ್ಗೀತೆ ಪುಸ್ತಕ ನೀಡಿ ಅಭಿನಂದಿಸಿ ಗೌರವಿಸಲಾಯಿತು.

ಬಿ.ಜೆ.ಪಿ ಜಿಲ್ಲಾ ಸಮಿತಿ ಸದಸ್ಯ ಹಾಗು ರಾಮಕುಂಜ ಬಜೆಪಿ ಪ್ರಮುಖ ಲಕ್ಷೀ೬ನಾರಾಯಣ ರಾವ್ ಮಾತನಾಡಿ ಪೇಜಾವರ ಶ್ರೀಗಳ ವಿದ್ಯಾಸಂಸ್ಥೆಯಲ್ಲಿ ಕಲಿತು ವಿದ್ಯಾಸಂಸ್ಥೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಪಸರಿಸಿದ್ದಕ್ಕಾಗಿ ಅಬಿನಂದನೆ ಸಲ್ಲಿಸಿದರು. ಇದು ಗ್ರಾಮೀಣ ಭಾಗದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೌಶಿಕ್‌ರಾವ್ ರವರ ಸಾಧನೆ ಪ್ರೇರಣೆಯಾಗಲಿ ಎಂದು ಅಶಿಸಿದರು. ಆಲಂಕಾರು ಸಿ.ಎ ಬ್ಯಾಂಕಿನ ಅದ್ಯಕ್ಷ ದರ್ಮಪಾಲ ರಾವ್ ಕಜೆ, ತಾ.ಪಂ ಸದಸ್ಯರಾದ ಜಯಂತಿ ಆರ್ ಗೌಡ, ಪ್ರಮುಖರಾದ ದಿವಾಕರ ರಾವ್ ಪಂಚವಟಿ, ಸುಳ್ಯ ವಿಧಾನಸಭಾ ಕ್ಷೇತ್ರದ ಸಾಮಾಜಿಕ ಜಾಲತಾಣ ಸಂಚಾಲಕ, ನೆಲ್ಯಾಡಿ ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಮಾರಂಗ, ರಾಮಕುಂಜ ಗ್ರಾ.ಪಂ ಮಾಜಿ ಅದ್ಯಕ್ಷ ಪ್ರಶಾಂತ ಆರ್.ಕೆ, ಬೂತ್ ಸಮಿತಿಯ ಅದ್ಯಕ್ಷ ಮೋಹನ ಕೆ.ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.