ನೆಲ್ಯಾಡಿ: ಸ್ಪಂದನ ಪ್ರಗತಿಬಂಧು ಸ್ವಸಹಾಯ ಸಂಘದ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಇದರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ನೆಲ್ಯಾಡಿ ಗ್ರಾಮದ ಮಾದೇರಿ ಒಕ್ಕೂಟದ ಸ್ಪಂದನ ಪ್ರಗತಿ ಬಂಧು ಸ್ವಸಹಾಯ ಸಂಘದ ೧೯ನೇ ವಾರ್ಷಿಕೋತ್ಸವ ಆ.೧೦ರಂದು ನೆಲ್ಯಾಡಿಯಲ್ಲಿ ನಡೆಯಿತು.

ನೆಲ್ಯಾಡಿ ಸೈಂಟ್ ಗ್ರೀಗೋರಿಯಾಸ್ ಓರ್ತೊಡೊಕ್ಸ್ ಚರ್ಚ್‌ನ ಧರ್ಮಗುರು ರೇ.ಫಾ.ವರ್ಗೀಸ್ ತೋಮಸ್‌ರವರು ಆಶೀರ್ವಚನ ನೀಡಿ, ಸ್ಪಂದನ ಸಂಘದ ಚಟುವಟಿಕೆಗಳನ್ನು ನೋಡಿದಾಗ ಯೋಜನೆಯ ಸಂಘಗಳು ಅತ್ಯುತ್ತಮ ಸಂಘಗಳಾಗಿವೆ ಎಂಬುದಕ್ಕೆ ನಿದರ್ಶನ ಸಿಗುತ್ತದೆ. ಇನ್ನೂ ಮುಂದೆಯೂ ಈ ಸಂಘ ಅತ್ಯುತ್ತಮವಾಗಿ ಸಾಗಲಿ ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್‌ರವರು ಉದ್ಘಾಟಿಸಿ ಮಾತನಾಡಿ, ಸಂಘ ಎಂದರೆ ಹರಿಯುವ ನೀರಿನಂತೆ ಇರಬೇಕು, ನಿಂತ ನೀರಾಗಿರಬಾರದು, ಹರಿಯುವ ನೀರು ಯಾವಾಗಲೂ ಶುದ್ಧವಾಗಿರುತ್ತದೆ. ಸ್ಪಂದನ ಸಂಘವು ಹರಿಯುವ ನೀರಿನಂತಿದೆ. ನಿರಂತರ ಚಟುವಟಿಕೆಯಲ್ಲಿದ್ದು ಕ್ರೀಯಾಶೀಲವಾಗಿದೆ. ಪುತ್ತೂರು ತಾಲೂಕಿನಲ್ಲಿರುವ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳು ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ದನ, ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಹಾರ್ಪಳ, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಗಂಗಾಧರ ಶೆಟ್ಟಿ, ಧರ್ಣಪ್ಪ ಹೆಗ್ಡೆ, ಮಾಜಿ ಸದಸ್ಯ ಜನಾರ್ದನ ಗೌಡ, ನೆಲ್ಯಾಡಿ ವಲಯದ ಮಾಜಿ ಅಧ್ಯಕ್ಷ ಸೆಬಾಸ್ಟಿನ್ ಪಿ.ಜೆ., ಮಾದೇರಿ ಒಕ್ಕೂಟದ ಅಧ್ಯಕ್ಷೆ ಶ್ರೀಲತಾ, ಸೇವಾ ಪ್ರತಿನಿಧಿ ನಮಿತಾ ಶೆಟ್ಟಿ, ಸ್ಪಂದನ ಸಂಘದ ಸದಸ್ಯ ಗೀ ವರ್ಗೀಸ್, ರಾಮನುಜನ್ ಪಿಳ್ಳೆ ಉಪಸ್ಥಿತರಿದ್ದರು.

ಸನ್ಮಾನ:
ಯೋಜನೆಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಧರ್ಣಪ್ಪ ಹೆಗ್ಡೆ ಹಾಗೂ ಮಾಜಿ ಸದಸ್ಯ ಜನಾರ್ದನ ಗೌಡರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನೆಲ್ಯಾಡಿ ವಲಯ ಮೇಲ್ವಿಚಾರಕ ಸಂದೇಶ್ ನಿರೂಪಿಸಿದರು. ಸ್ಪಂದನ ಸಂಘದ ಸದಸ್ಯ ಜೋನ್ ಎಂ.ಟಿ., ಸ್ವಾಗತಿಸಿದರು. ಬಿಜು ಎಂ.ಎಸ್., ವರದಿ ವಾಚಿಸಿದರು. ಸುನೀಲ್ ವಿ.ಸಿ.,ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.