ಶಿರಾಡಿ: 3ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣಾ ಸಮಿತಿ ಶಿರಾಡಿ ಇದರ ವತಿಯಿಂದ ೩ನೇ ವರ್ಷದ ಶ್ರೀ ಕೃಷ್ಣಾಷ್ಠಮಿಯು ಶ್ರೀಕೃಷ್ಣನ ಪೂಜೆಯೊಂದಿಗೆ ಶಿರಾಡಿ ಸರಕಾರಿ ಶಾಲೆಯ ವಠಾರದಲ್ಲಿ ಸರಳವಾಗಿ ಆಚರಿಸಲಾಯಿತು.

ಶಿರಾಡಿ ಗ್ರಾಮದ ಕೊರೋನಾ ವಾರಿಯರ್ಸ್ ತಂಡದ ಮುಖ್ಯಸ್ಥೆ ಡಾ. ಹರ್ಷಿತಾ ಸುವಿನ್, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ಮತ್ತು ೧೦೮ ಆಂಬುಲೆನ್ಸ್ ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸರಕಾರದ ನಿಯಮದಂತೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ನಡೆಸಲಾಯಿತು. ಶಿರಾಡಿ ಗ್ರಾ.ಪಂ. ನಿಕಟಪೂರ್ವ ಉಪಾಧ್ಯಕ್ಷೆ ಬಿಂದು ಶಶಿಧರ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿಕಟಪೂರ್ವ ಉಪಾಧ್ಯಕ್ಷ ಕುಶಾಲಪ್ಪ ಪಿ.ಎನ್, ನಾರಾಯಣ ಜೆ.ಸಿ, ಕಾರ್ಯದರ್ಶಿ ತಂಬಿ ಬಿ, ಕೋಶಾಧಿಕಾರಿ ವಿಜಯನ್ ಎ.ಎಸ್, ಸದಸ್ಯರುಗಳಾದ ರವಿಚಂದ್ರ ಪಾದಡ್ಕ, ಲಕ್ಷ್ಮಣ ಕುದ್ಕೋಳಿ, ಜಯಂತ ಕುದ್ಕೋಳಿ, ರಾಮಣ್ಣ ಕಳಪಾರು, ಬೇಬಿ ಕಳಪಾರು, ನಾರಾಯಣ ದೇವರ್ಮಾರ್, ದೇವಯ್ಯ ದೇವರ್ಮಾರ್, ತಿಮ್ಮಪ್ಪ ಶಿರಾಡಿ ಕಾಲನಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.