Breaking News

ಈಶ್ವರಮಂಗಲ ಹೊರಠಾಣೆ ಪೊಲೀಸರ ಕಾರ್ಯಾಚರಣೆ| ಬಡಗನ್ನೂರಿನಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದವರ ಬಂಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಡಗನ್ನೂರು ಗ್ರಾಮದ ಶರವು ಎಂಬಲ್ಲಿನ ಗುಡ್ಡದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಈಶ್ವರಮಂಗಲ ಹೊರಠಾಣಾ ಪೊಲೀಸರು ಕೋಳಿ ಅಂಕದಲ್ಲಿ ನಿರತರಾಗಿದ್ದ ಮೂವರನ್ನು ಬಂಧಿಸಿ, ೫ ಕೋಳಿ ಮತ್ತು ೩ ಬೈಕ್‌ಗಳನ್ನು ವಶಕ್ಕೆ ಪಡೆದು ಕೊಂಡ ಘಟನೆ ಆ.೧೨ರಂದು ಸಂಜೆ ನಡೆದ ಬಗ್ಗೆ ವರದಿಯಾಗಿದೆ.

 

ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಅವರ ಸೂಚನೆಯಂತೆ ಈಶ್ವರಮಂಗಲ ಹೊರಠಾಣೆಯ ಎ.ಎಸ್.ಐ ತಿಮ್ಮಯ್ಯ ಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಡಗನ್ನೂರು ಗ್ರಾಮದ ಶರವು ಎಂಬಲ್ಲಿನ ಗುಡ್ಡೆಯಲ್ಲಿ ಕೋಳಿ ಅಂಕ ನಡೆಯುತ್ತಿರುವುದು ಬೆಳಕಿಗೆ ಬಂದಿತ್ತು. ಕೋಳಿ ಅಂಕದಲ್ಲಿ ನಿರತರಾಗಿದ್ದವರ ಪೈಕಿ ಹರೀಶ್ ಕುಮಾರ, ದಯಾನಂದ, ಚನಿಯಪ್ಪ ಎಂಬವರನ್ನು ಪೊಲೀಸರನ್ನು ವಶಕ್ಕೆ ಪಡೆದು ಕೊಂಡು ಅವರಿಂದ ರೂ. ೧೪೦೦ ನಗದು, ಮೊಬೈಲ್‌ಗಳನ್ನು ಮತ್ತು ಕೃತ್ಯಕೆ ಬಳಸಿದ ೫ ಕೋಳಿಗಳು, ೨ ಬೈಕ್ ಮತ್ತು ೧ ಸ್ಕೂಟರ್ ಅನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಈ ಪ್ರಕರಣ ಅಸಂಜ್ಞೆಯ ಪ್ರಕರಣವಾಗಿದ್ದರಿಂದ ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.