ಶಿಕ್ಷಣ ಇಲಾಖೆಯಿಂದ ಮಕ್ಕಳ ಸಂಪರ್ಕಕ್ಕಾಗಿ ವಿದ್ಯಾಗಮ| ಪುತ್ತೂರು ತಾಲೂಕಿನಲ್ಲಿ ವಠಾರ ಶಾಲೆಯ ಕಾನ್ಸೆಪ್ಟ್ ಯಶಸ್ವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯು ಸರ್ವರಿಗೂ ಆರೋಗ್ಯ ಸೇವೆ ಒದಗಿಸುವ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಕೋವಿಡ್-೧೯ ಚಿಕಿತ್ಸೆಯನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಒಟ್ಟು ೨೪೦ ಸಾಮಾನ್ಯ ಸೇವಾ ಕೇಂದ್ರಗಳಿದ್ದು ಸಾರ್ವಜನಿಕರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್‌ನ್ನು ಮಾಡಿಸಿಕೊಳ್ಳಬಹುದಾಗಿದೆ. ಕಾರ್ಡ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಿದೆ.

ಬಿ.ಪಿ.ಎಲ್ ಕಾರ್ಡ್ ಹೊಂದಿದ ಫಲಾನುಭವಿಗಳಿಗೆ ವರ್ಷಕ್ಕೆ ರೂ.೫ಲಕ್ಷದ ವರೆಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ.೩೦ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.೧.೫೦ಲಕ್ಷವಾಗಿರುತ್ತದೆ. ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಹಾಜರುಪಡಿಸಿಯೂ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಆಯುಷ್ಮಾನ್ ಕಾರ್ಡ್ ಮಾಡಿಸುವ ಸಂದರ್ಭದಲ್ಲಿ ಸರಕಾರ ನಿಗದಿಪಡಿಸಿದಂತೆ ಪ್ರತಿ ಕಾರ್ಡ್‌ಗೆ ರೂ.೧೦ ಹಾಗೂ ಪಿವಿಸಿ ಕಾರ್ಡ್‌ಗೆ ರೂ.೩೫ನ್ನು ಪಾವತಿಸಬೇಕಾಗಿದೆ. ಸರಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ಸಾರ್ವಜನಿಕರು ಪಾವತಿಸಬಾರದು. ಆಯುಷ್ಮಾನ್ ಕ್ಯಾಂಪ್ ಮಾಡಿದಲ್ಲಿ ಸಾರ್ವಜನಿಕರಿಂದ ಸರಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಅಧಿಕ ಮೊತ್ತವನ್ನು ಪಡೆದುಕೊಂಡಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಸಿಎಸ್‌ಸಿ ಜಿಲ್ಲಾ ವ್ಯವಸ್ಥಾಪಕರು ಅಥವಾ ಸೇವಾ ಸಿಂಧುವಿನ ಜಿಲ್ಲಾ ಯೋಜನಾ ವ್ಯವಸ್ಥಾಪಕರಿಗೆ ದೂರು ನೀಡಬಹುದು. ಸೌಲಭ್ಯ ಮತ್ತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರಕಾರಿ ಆಸ್ಪತ್ರೆ, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆ, ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರು ಆರೋಗ್ಯ ಸಹಾಯವಾಣಿ ೧೦೪ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಂತದಲ್ಲಿ ಸ್ಟೂಡೆಂಟ್ ಡಿಜಿಟಲ್ ಕಮ್ಯುನಿಕೇಶನ್ ಎಂಟ್ರಿ ಮಾನಿಟರಿಂಗ್ ರಿಪೋರ್ಟ್ ತಯಾರಿಸಲಾಗಿದೆ.ಇದಕ್ಕಾಗಿ ಎಲ್ಲ ಕ್ಲಸ್ಟರ್ ಮಟ್ಟದಲ್ಲಿ ಸಮೀಕ್ಷೆ ನಡೆಸಲಾಗಿದೆ.ಆಯಾ ಕ್ಲಸ್ಟರ್ ವ್ಯಾಪ್ತಿಯಲ್ಲಿ ೨ರಿಂದ ೧೦ನೇ ತರಗತಿಯವರೆಗೆ ಇರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ, ಯಾರ ಮನೆಯಲ್ಲಿ ಟಿವಿ, ರೇಡಿಯೋ ಇದೆ, ಯಾರ ಮನೆಯಲ್ಲಿ ಸ್ಮಾರ್ಟ್ ಮೊಬೈಲ್ ಫೋನ್ ಇದೆ,ಯಾರ ಮನೆಯಲ್ಲಿ ಸಾದಾ ಮೊಬೈಲ್ ಮಾತ್ರ ಇದೆ,ಯಾರ ಮನೆಯಲ್ಲಿ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಸೌಲಭ್ಯವಿದೆ ಎಂಬುದನ್ನೆಲ್ಲ ಈ ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ.
ಕೋವಿಡ್-೧೯ ಪರಿಣಾಮದ ಬದಲಾದ ಸನ್ನಿವೇಶದಲ್ಲಿ ವಿದ್ಯಾಗಮ ಕಾರ್ಯಕ್ರಮ ಶಿಕ್ಷಣ ಲೋಕದಲ್ಲಿ ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ನೈತಿಕ ಸ್ಥೈರ್ಯ, ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬುವುದರ ಜತೆಗೆ ಮಕ್ಕಳ ನಿರಂತರ ಕಲಿಕೆಗೆ ಸಹಾಯ ಮಾಡುವ ಪ್ರೇರಣ ಕಾರ್ಯಕ್ರಮ ಇದಾಗಿದೆ.ರೆಗ್ಯುಲರ್ ಸ್ಕೂಲ್ ತೆರೆಯಲು ಆಗಿಲ್ಲ. ಹಾಗಾಗಿ ವಿದ್ಯಾಗಮ ಮೂಲಕ ಶಿಕ್ಷಕರು ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಸಂಪರ್ಕಿಸಲಾಗುವುದು.ಶಿಕ್ಷಣದ ನಿರಂತರತೆಯನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಶಾಲೆಯಿಂದ ದೂರ ಇರುವ ಮಕ್ಕಳನ್ನು ತಲುಪಲಾಗುತ್ತಿದೆ.ಇದಕ್ಕಾಗಿ ಶಿಕ್ಷಕರಿಗೆ ವಿಶೇಷ ಕಾರ್ಯಗಾರ ಮಾಡಲಾಗಿದ್ದು, ಮೂರು ದಿನಗಳಲ್ಲಿ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರಿಗೆ ಸಾಫ್ಟ್ ಕಾಪಿ ಕೊಡುವ ಮೂಲಕ ಶಿಕ್ಷಕರು ವಠಾರ ಶಾಲೆಯ ಕಾನ್ಸೆಪ್ಟ್ ಮೂಲಕ ನಿರಂತರ ಮಕ್ಕಳ ಸಂಪರ್ಕದಲ್ಲಿರುತ್ತಾರೆ.ಇಲ್ಲಿ ಪ್ರತೀ ಮಗುವನ್ನು ಭೇಟಿ ಮಾಡುವ ಕಾರ್ಯ ನಡೆಯುತ್ತದೆ.ಈಗಾಗಲೇ ಶಿಕ್ಷಕರು ಮನೆ ಮನೆ ಭೇಟಿ ಮೂಲಕ ಯಾವ ವಿದ್ಯಾರ್ಥಿಗಳ ಮನೆಯಲ್ಲಿ ಯಾವ ಮೊಬೈಲ್, ರೇಡಿಯೋ, ಟಿ.ವಿ ಸಲಕರಣೆಗಳು ಇವೆ ಅಥವಾ ಇಲ್ಲ ಇದರ ಪೂರ್ಣ ಸರ್ವೆ ಮಾಡಿದ್ದಾರೆ.ಯಾವುದೇ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳಿಗೆ ಸಲಕರಣೆಗಳನ್ನು ತಲುಪಿಸುವ ಕೆಲಸವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ತಿಳಿಸಿದ್ದಾರೆ.

ನೂಜಿಬಾಳ್ತಿಲದಲ್ಲಿ ವಠಾರ ಶಾಲೆ ಯಶಸ್ವಿ: ನೂಜಿಬಾಳ್ತಿಲ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಮೂರು ಕಿರಿಯ ಪ್ರಾಥಮಿಕ ಶಾಲೆಗಳು, ಮೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಗಳು, ೧ ಅನುದಾನಿತ ಪ್ರೌಢಶಾಲೆ, ಒಂದು ಅನುದಾನ ರಹಿತ ಪ್ರಾಥಮಿಕ- ಪ್ರೌಢಶಾಲೆಗಳ ೬೧೮ ವಿದ್ಯಾರ್ಥಿಗಳಿಗೆ ೧೬ ವಠಾರ ಶಾಲೆಗಳಲ್ಲಿ ಪಾಠ ಮಾಡಲಾಗುತ್ತಿದೆ.ದೇವಸ್ಥಾನ, ಮಸೀದಿ, ಚರ್ಚ್, ಭಜನಾ ಮಂದಿರ, ಸಮುದಾಯ ಭವನ, ಮನೆಗಳ ವಠಾರಗಳನ್ನು ಇದಕ್ಕಾಗಿ ಆರಿಸಿಕೊಳ್ಳಲಾಗಿದ್ದು, ಇಲ್ಲಿ ಗರಿಷ್ಠ ೨೦ ವಿದ್ಯಾರ್ಥಿಗಳ ತಂಡ ಮಾಡಿಕೊಂಡು ಪಾಠ ಮಾಡಲಾಗುತ್ತಿದೆ.೨ರಿಂದ ೫, ೬ರಿಂದ ೮ ಮತ್ತು ೯ರಿಂದ ೧೦ ಎಂಬ ತರಗತಿವಾರು ವಿಂಗಡಣೆ ಮಾಡಲಾಗಿದ್ದು, ಆ ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಇಲ್ಲಿಗೆ ಕರೆಸಿಕೊಂಡು ತರಗತಿವಾರು ತಂಡಗಳಾಗಿ ವಿಂಗಡಿಸಿ ಪಾಠ ಮಾಡಲಾಗುತ್ತದೆ.ಪ್ರತೀ ದಿನ ಬೆಳಿಗ್ಗೆ ೧೦ರಿಂದ ೧೨.೩೦ರವರೆಗೆ ತರಗತಿ ನಡೆಯುತ್ತಿದ್ದು, ಅಲ್ಲಿಗೆ ಬಂದ ಎಲ್ಲ ತರಗತಿಗಳ ವಿದ್ಯಾರ್ಥಿಗಳಿಗೂ ಒಬ್ಬ ಶಿಕ್ಷಕರು ಅಭ್ಯಾಸ ಪರಿಕರ ನೀಡಿ ಕಲಿಯಲು ಅವಕಾಶ ಮಾಡಿಕೊಡುತ್ತಿದ್ದಾರೆ. ಈ ಕೇಂದ್ರಗಳಲ್ಲಿ ಕೋವಿಡ್ ನಿಯಮಾವಳಿ ಕಡ್ಡಾಯವಾಗಿ ಪಾಲಿಸಲಾಗುತ್ತಿದೆ.ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್, ಸ್ಯಾನಿಟೈಸಿಂಗ್ ಇತ್ಯಾದಿ ಮಾಡಲಾಗುತ್ತಿದೆ.ಜತೆಗೆ ವಿದ್ಯಾರ್ಥಿಗಳಿಗೆ ಆಗಾಗ ಕುಡಿಯಲು ಬಿಸಿ ನೀರು ಕೊಡಲಾಗುತ್ತಿದೆ.೨೦ಕ್ಕಿಂತ ಹೆಚ್ಚು ಮಕ್ಕಳು ಒಂದು ಕೇಂದ್ರದಲ್ಲಿ ಕೂರುವಂತಿಲ್ಲ ಎಂದು ನೂಜಿಬಾಳ್ತಿಲ ಕ್ಲಸ್ಟರ್‌ನ ಸಿಆರ್‌ಪಿ ಗೋವಿಂದ ನಾಯ್ಕ್ ತಿಳಿಸಿದ್ದಾರೆ.

ಎದುರಾಗುವ ಸವಾಲುಗಳು: ಬಹುತೇಕ ಕಡೆ ಮೊಬೈಲ್ ಪೋಷಕರ ಕೈಯಲ್ಲಿರುವ ಕಾರಣ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಲಭ್ಯವಾಗದಿರುವುದು.ನೆಟ್‌ವರ್ಕ್ ಸಮಸ್ಯೆ, ಕೆಲವು ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ವಲಸೆ ಹೋಗಿದ್ದರಿಂದ ಸಂಪರ್ಕದ ಕೊರತೆ, ಪುತ್ತೂರಿನ ಶಾಲಾ ವ್ಯಾಪ್ತಿಯ ಜನವಸತಿಗಳು ಬೆಟ್ಟಗುಡ್ಡ ಕಾಡಿನಿಂದ ಆವೃತ್ತವಾಗಿದ್ದು ಹೋಗುವುದು ಕಷ್ಟ. ಪ್ರಸ್ತುತ ಸಮಯಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದು ಇನ್ನೊಂದು ಸಮಸ್ಯೆ, ಶಾಲೆಗಳಲ್ಲಿ ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರು, ಆರೋಗ್ಯದ ಸಮಸ್ಯೆ ಎದುರಿಸುತ್ತಿರುವ ಶಿಕ್ಷಕರು ಮನೆ ಭೇಟಿಗಾಗಿ ಶ್ರಮ ವಹಿಸಬೇಕಾಗಿದೆ.ಯಂಗ್‌ಸ್ಟರ್ ಶಿಕ್ಷಕರು ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.ಇವೆಲ್ಲಾ ಶಿಕ್ಷಣ ಇಲಾಖೆಯ ಮುಂದಿರುವ ಸವಾಲು.

 

ಇಂಟರ್‌ನೆಟ್ ಸೌಲಭ್ಯ, ಸ್ಮಾರ್ಟ್ ಫೋನ್ ಸೌಲಭ್ಯ ಇರುವವರಿಗೆ ಈ ಮೂಲಕವೇ ಸೇತುಬಂಧದ ಅಭ್ಯಾಸ ಪರಿಕರಗಳನ್ನು ನೀಡಲಾಗುತ್ತಿದೆ.ಜುಲೈ ತಿಂಗಳಿನಲ್ಲಿ ೨ರಿಂದ ೧೦ನೇ ತರಗತಿವರೆಗಿನ ವಿದ್ಯಾರ್ಥಿಗಳ ಮರು ದಾಖಲಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ.ಅದರಂತೆ ಆನ್‌ಲೈನ್ ಮೂಲಕ ಸೇತುಬಂಧದ ಅಭ್ಯಾಸ ಪರಿಕರಗಳನ್ನು ನೀಡಲಾಗುತ್ತಿದೆ.ಆದರೆ ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಇಲ್ಲದ ಕಡೆ ಈ ರೀತಿ ಮಾಡಲು ಸಾಧ್ಯವಿಲ್ಲದ ಕಾರಣ ಮನೆ ಮನೆಗೆ ಅಭ್ಯಾಸ ಪರಿಕರ ವಿತರಿಸುವ ಕೆಲಸ ನಡೆಯುತ್ತಿದೆ.ಈ ನಿಟ್ಟಿನಲ್ಲಿ ವಠಾರ ಶಾಲೆ ಎಂಬ ಪರಿಕಲ್ಪನೆ ಆರಂಭಿಸಲಾಗಿದೆ.ಕಡಬ ತಾಲೂಕಿನ ನೂಜಿಬಾಳ್ತಿಲ ಕ್ಲಸ್ಟರ್‌ನಲ್ಲಿ ಇದನ್ನು ಪ್ರಾಯೋಗಿಕವಾಗಿ ಹೆಚ್ಚು ಒತ್ತು ನೀಡಿ ಆರಂಭಿಸಲಾಗಿದೆ.ಜುಲೈ ೨೨ರಿಂದ ನೂಜಿಬಾಳ್ತಿಲ, ಇಚಿಲಂಪಾಡಿ ಮತ್ತು ರೆಂಜಿಲಾಡಿ ಗ್ರಾಮಗಳಲ್ಲಿ ವಠಾರ ಶಾಲೆ ನಡೆಯುತ್ತಿದೆ. – ಸಿ.ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ

೩,೨೧೦ ವಿದ್ಯಾರ್ಥಿಗಳಿಗೆ ಮೊಬೈಲ್, ೧೪೩೩ ವಿದ್ಯಾರ್ಥಿಗಳಿಗೆ ರೇಡಿಯೋ, ಟಿವಿಯಿಲ್ಲ ವಿದ್ಯಾಗಮ ಸಂಬಂಧಿಸಿ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳ ಸರ್ವೆ ಕಾರ್ಯವನ್ನು ಶಿಕ್ಷಕರು ಈಗಾಗಲೇ ಮಾಡಿದ್ದಾರೆ.ಒಟ್ಟು ೪೮,೦೫೭ ವಿದ್ಯಾರ್ಥಿಗಳಿದ್ದು, ಈ ಪೈಕಿ ೨೯೦ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲು ಸಂಪರ್ಕಕ್ಕೆ ಸಿಗಲಿಲ್ಲ.ಮೊಬೈಲ್ ಹೊಂದಿರುವ ವಿದ್ಯಾರ್ಥಿಗಳು ೪೪,೫೫೭, ಸ್ಮಾರ್ಟ್‌ಫೋನ್ ಹೊಂದಿರುವ ವಿದ್ಯಾರ್ಥಿಗಳು ೩೩,೭೨೫, ಬೇಸಿಕ್ ಮೊಬೈಲ್ ಫೋನ್ ಹೊಂದಿರುವ ವಿದ್ಯಾರ್ಥಿಗಳು ೧೦,೮೩೨, ನಿಗದಿತ ಸಮಯಕ್ಕೆ ನಿಯಮಿತವಾಗಿ ಸ್ಮಾರ್ಟ್ ಫೋನ್ ಬಳಕೆಗೆ ಸಿಗುವ ವಿದ್ಯಾರ್ಥಿಗಳು ೨೫,೨೯೩, ಸ್ಮಾರ್ಟ್ ಫೋನ್ ಇದ್ದರೂ ನಿಯಮಿತವಾಗಿ ಬಳಕೆಗೆ ಸಿಗದ ವಿದ್ಯಾರ್ಥಿಗಳು ೮,೪೩೨, ಯಾವುದೇ ಮೊಬೈಲ್ ಹೊಂದಿರದ ವಿದ್ಯಾರ್ಥಿಗಳು ೩,೨೧೦, ಟಿ.ವಿ ಹೊಂದಿರುವ ವಿದ್ಯಾರ್ಥಿಗಳು ೩೮,೮೦೯, ರೇಡಿಯೋ ಹೊಂದಿರುವ ವಿದ್ಯಾರ್ಥಿಗಳು ೭,೫೨೫, ರೇಡಿಯೋ ಮತ್ತು ಟಿ.ವಿ ಇಲ್ಲದ ವಿದ್ಯಾರ್ಥಿಗಳು ೧,೪೩೩ ಎನ್ನುವುದು ಸರ್ವೆಯಿಂದ ಬೆಳಕಿಗೆ ಬಂದಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.