ಕಡಬ ಬ್ಲಾಕ್ ಕಾಂಗ್ರೆಸ್‌ನಿಂದ ಎಸ್‌ಎಸ್‌ಎಲ್‌ಸಿ ಟಾಪರ್ ವಿದ್ಯಾರ್ಥಿ ಅನುಷ್‌ಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

‌ಪುತ್ತೂರು: ಎಸ್‌.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೬೨೫ರಲ್ಲಿ ೬೨೫ ಅಂಕ ಪಡೆದುಕೊಂಡು ರಾಜ್ಯದಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡ ಕಡಬ ತಾಲೂಕಿನ ಬಳ್ಪ ಗ್ರಾಮದ ಎಣ್ಣೆಮಜಲು ನಿವಾಸಿ, ಮೆಸ್ಕಾಂ ಜೆಇ ಲೋಕೇಶ್ ಹಾಗೂ ಉಷಾ ದಂಪತಿಯ ಪುತ್ರ ಅನುಷ್ ಎ.ಎಲ್.ರವರನ್ನು ಆ.೧೧ರಂದು ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎಣ್ಣೆಮಜಲುನಲ್ಲಿರುವ ಅನುಷ್‌ರವರ ಮನೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

ಕಡಬ ಜಿ.ಪಂ.ಸದಸ್ಯ ಪಿ.ಪಿ. ವರ್ಗೀಸ್‌ರವರು ಶಾಲು ಹೊದಿಸಿ, ಡಿಸಿಸಿ ಸದಸ್ಯೆ ನೀಲಾವತಿ ಶಿವರಾಮ್‌ರವರು ಹಾರ ಹಾಕಿ ಹಾಗೂ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೌಡ ಕೈಕುರೆಯವರು ಫಲಪುಷ್ಪ ನೀಡಿ ಸನ್ಮಾನಿಸಿದರು. ಬಳಿಕ ಮಾತನಾಡಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ತಾ.ಪಂ.ಸದಸ್ಯರೂ ಆದ ಗಣೇಶ್ ಗೌಡ ಕೈಕುರೆಯವರು, ರಾಜ್ಯದ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಸುಬ್ರಹ್ಮಣ್ಯ ದೇವಸ್ಥಾನದ ಪರಿಸರದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯದಲ್ಲಿ ವಿದ್ಯಾರ್ಜನೆಗೈದು ಎಲ್ಲಾ ಪಠ್ಯ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆಯುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಅನುಷ್ ಎ.ಎಲ್.ರವರು ತಾಲೂಕಿಗೆ ಕೀರ್ತಿ ತಂದುಕೊಟ್ಟಿದ್ದಾರೆ. ಅವರ ಮುಂದಿನ ಭವಿಷ್ಯವೂ ಉಜ್ವಲವಾಗಲೆಂದು ಹಾರೈಸಿದರು. ಕೆ.ಪಿ.ಸಿ.ಸಿ.ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯವರ ಸೂಚನೆಯಂತೆ ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಎಸ್‌ಎಸ್‌ಎಲ್‌ಸಿ ಟಾಪರ್ ವಿದ್ಯಾರ್ಥಿ ಅನುಷ್ ಎ.ಎಲ್.ರವರನ್ನು ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಗಿದೆ ಎಂದು ಗಣೇಶ್ ಗೌಡ ಹೇಳಿದರು.
ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್‌ರವರು ಮಾತನಾಡಿ, ವಿದ್ಯಾರ್ಥಿ ಅನುಷ್‌ರವರು ತಂದೆ, ತಾಯಿ ಹಾಗೂ ಅಜ್ಜಿ ಕುಸುಮಾವತಿಯವರ ಆಶೀರ್ವಾದದಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದುಕೊಂಡು ಅವನ ಕುಟುಂಬಕ್ಕೆ, ಊರಿಗೆ, ಸಮಾಜಕ್ಕೆ ಕೀರ್ತಿ ತಂದು ಕೊಟ್ಟಿದ್ದಾನೆ. ಆತನ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹೇಳಿ ಶುಭ ಹಾರೈಸಿದರು. ಶಿವರಾಮ ರೈ, ಗೋಪಾಲ ಗೌಡ ಎಣ್ಣೆಮಜಲುರವರು ಶುಭಹಾರೈಸಿದರು. ಸುಳ್ಯ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಶೆಟ್ಟಿ, ತಾ.ಪಂ.ಸದಸ್ಯೆ ಆಶಾಲಕ್ಷ್ಮಣ್ ಗುಂಡ್ಯ, ಮಾಜಿ ಸದಸ್ಯ ಫಝಲ್ ಕೋಡಿಂಬಾಳ, ಸುಬ್ರಹ್ಮಣ್ಯ ಸದಾನಂದ ಡೆಂಟಲ್ ಕ್ಲಿನಿಕ್‌ನ ಟೆಕ್ನಿಷಿಯನ್ ಕೊರಗಪ್ಪ ಡಿ, ಕಡಬ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಭವಾನಿ ಶಂಕರ್, ಕಡಬ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷ ಅಭಿಲಾಷ್ ಪಿ.ಕೆ, ಡಿಸಿಸಿ ಸದಸ್ಯೆ ನೀಲಾವತಿ ಶಿವರಾಂ, ಕಡಬ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಜಿ ಹನೀಫ್ ಕೆ.ಎಂ, ಬಿಳಿನೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಶಾರದಾ ದಿನೇಶ್, ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ್ ಎಂ.ಎಸ್, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಮುಖಂಡ ಸತೀಶ್ ನಾಕ್ ಮೇಲಿನ ಮನೆ, ಶಿವಶಂಕರ್ ಬಿಳಿನೆಲೆ, ವಿನೇಶ್ ಬಿಳಿನೆಲೆ, ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಅನುಷ್‌ರವರ ತಂದೆ, ಮೆಸ್ಕಾಂ ಜೆಇ ಲೋಕೇಶ್ ಕೃತಜ್ಞತೆ ಸಲ್ಲಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.