ಬೆಂಗಳೂರು ಘಟನೆ: ಆರೋಪಿಗಳ ಸೊತ್ತನ್ನು ಸಾರ್ವಜನಿಕರಿಗೆ ಪರಿಹಾರ ನೀಡಿ| ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ನಿಷೇಧಕ್ಕೆ ಆಗ್ರಹಿಸಿದ ಮುರಳಿಕೃಷ್ಣ ಹಸತಂಡ್ಕ

Puttur_Advt_NewsUnder_1
Puttur_Advt_NewsUnder_1
  • ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಭಟನೆ

ಪುತ್ತೂರು: ರಾಷ್ಟ್ರದ್ರೋಹದ ಕಾರ್ಯದ ಮೂಲಕ ಹಿಂದೂ ದೇಶವನ್ನು ಮತ್ತು ಪೊಲೀಸ್ ಇಲಾಖೆಯನ್ನು ಎದುರಿಸುವ ಸಂದೇಶವನ್ನು ಕೊಡುತ್ತಿರುವ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಯನ್ನು ನಿಷೇಧಿಸಬೇಕು ಹಾಗೂ ಸುಪ್ರಿಂ ಕೋರ್ಟ್‌ನ ತೀರ್ಪಿನಂತೆ ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ನಷ್ಟ ಮಾಡಿದ ಆರೋಪಿಗಳ ಸೋತ್ತನ್ನು ವಶಕ್ಕೆ ಪಡೆದು ಸಾರ್ವಜನಿಕರಿಗೆ ಪರಿಹಾರ ನೀಡಬೇಕೆಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಆಗ್ರಹಿಸಿದ್ದಾರೆ.

ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಆ.೧೩ರಂದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಪುತ್ತೂರು ಪ್ರಖಂಡದ ವತಿಯಿಂದ ಇಲ್ಲಿನ ಮಿನಿ ವಿಧಾನ ಸೌಧದ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ದೇಶ ದ್ರೋಹದ ಸಂಘಟನೆಯಾಗಿ ಹುಟ್ಟಿಕೊಂಡ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಯಿಂದ ಹುನಸೂರು ಘಟನೆ, ಡಿವೈಎಸ್ಪಿ ಜೀಪಿಗೆ ಬೆಂಕಿ ಕೊಟ್ಟಾಗಲು, ಮಂಗಳೂರಿನಲ್ಲೂ ನಡೆದ ಘಟನೆಯಲ್ಲೂ ಅವರ ವಿರುದ್ಧ ಆಗಿನ ಸರಕಾರ ಸಂಘಟನೆಯನ್ನು ನಿಷೇಧ ಮಾಡದೆ ಅಲ್ಪಸಂಖ್ಯಾತರ ತುಷ್ಟಿಕರಣಕ್ಕಾಗಿ ಕೇಸ್ ಹಿಂಪಡೆದಿದ್ದಾರೆ. ಆದರೆ ಇದೀಗ ಬೆಂಗಳೂರಿನಲ್ಲಿ ಮತ್ತೆ ಇಂತಹ ದೇಶದ್ರೋಹದ ಘಟನೆ ಅದೇ ಸಂಘಟನೆಯಿಂದ ಆಗಿದೆ. ಇದರಲ್ಲಿ ೧೭ ಅಮಾಯಕ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆದಿದೆ. ಮನೆಯಲ್ಲಿರುವ ದೇವರ ಪೊಟೋ ಕಿತ್ತು ಬಿಸಾಡಿದ್ದಾರೆ ಎಂದಾದರೆ ಇವರ ಉದ್ದೇಶ ರಾಷ್ಟ್ರದ್ರೋಹದ ಕಾರ್ಯ ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಈ ಸಂಘಟನೆಯನ್ನು ನಿಷೇಧಿಸಬೇಕು ಮತ್ತು ಸಾರ್ವಜನಿಕ ಅಸ್ತಿ ಪಾಸ್ತಿ ಹಾನಿಯಾದಾಗ ಸುಪ್ರೀಮ್ ಕೋರ್ಟ್‌ನ ತೀರ್ಪಿನಂತೆ ಆರೋಪಿಗಳ ಸೊತ್ತು ವಶಕ್ಕೆ ಪಡೆದು ಕೊಂಡು ಅದನ್ನು ಸಾರ್ವಜನಿಕರಿಗೆ ಪರಿಹಾರವಾಗಿ ನೀಡಬೇಕು ಮತ್ತು ಈ ಸಂಘಟನೆ ಹಿಂದಿರುವ ಸಿಮಿ, ಐಸೀಸ್‌ನ ಮಾಹಿತಿ ಕಲೆ ಹಾಕುವ ಮೂಲಕ ದೇಶ ದ್ರೋಹಿಗಳ ಬೇರು ಸಮೇತ ಕಿತ್ತು ಹಾಕಬೇಕು. ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸಬೇಕೆಂದರು.

ಹಿಂದೂಗಳನ್ನು ಕೆಣಕಬೇಡಿ:
ಹಿಂದೂ ಸಮಾಜದ ಮೇಲೆ ದಾಳಿ ನಡೆದಾಗ ಹಿಂದೂ ಸಮಾಜ ಕೈ ಕಟ್ಟಿ ಕೂತುಕೊಳ್ಳುವುದಿಲ್ಲ. ಹಿಂದೂಗಳು ಶಸ್ತ್ರಾಸ್ತ್ರ ಹಿಡಿದು ರಸ್ತೆಗೆ ಇಳಿದರೆ ಅದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ. ಹಾಗಾಗಿ ಉದ್ದೇಶ ಪೂರ್ವಕವಾಗಿ ಹಿಂದೂಗಳಣ್ನು ಕೆಣಕುವ ಕೆಲಸ ಮಾಡಬೇಡಿ. ಬಜರಂಗದಳ ಯಾವ ರೀತಿ ಉತ್ತರ ಕೊಡಬೇಕೆಂಬುದನ್ನು ಮಾಡಿ ತೋರಿಸಲಿದೆ ಎಂದು ಮುರಳಿಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದರು.

ಪೊಲೀಸ್ ಸಿಬ್ಬಂದಿಗೆ ಅಭಿನಂದನೆ:
ಘಟನೆಯಲ್ಲಿ ಉದ್ರಿಗ್ತ ಗುಂಪು ಠಾಣೆಗೆ ದಾಳಿ ಮಾಡಲು ಮುಂದಾದಾಗ ಅಲ್ಲಿನ ಸೆಂಟ್ರಿಯೊಬ್ಬರು ಸಮಯಪ್ರಜ್ಞೆಯಿಂದ ಮೇಲಾಧಿಕಾರಿಗಳಿಗೆ ಮನವಿ ಮಾಡಿ ಫೈಯರಿಂಗ್‌ಗೆ ಅನುಮತಿ ಪಡೆದು ತನ್ನ ಕರ್ತವ್ಯವನ್ನು ನಿಬಾಯಿಸಿರುವುದು ಶ್ಲಾಘನೀಯ. ಇಂತಹ ದಿಟ್ಟ ನಿರ್ಧಾರ ಕೈಗೊಂಡ ಪೊಲೀಸರಿಗೆ ಹಿಂದೂ ಸಂಘಟನೆ ಅಭಿನಂದನೆ ನೀಡುತ್ತದೆ ಎಂದು ಮುರಳಿಕೃಷ್ಣ ಹಸಂತಡ್ಕ ಹೇಳಿದರು.

ಮತಾಂದರ ಅಟ್ಟಹಾಸವನ್ನು ಮಟ್ಟಹಾಕಬೇಕು:
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಅವರು ಮಾತನಾಡಿ ಬೆಂಗಳೂರಿನಲ್ಲಿ ನಡೆದ ಘಟನೆ ರಾಜ್ಯದಲ್ಲಿ ಬೆರೆಲ್ಲೂ ನಡೆಯಬಾರದು. ಮತಾಂದರ ಅಟ್ಟ ಹಾಸವನ್ನು ಮಟ್ಟ ಹಾಕುವ ಕೆಲಸ ಮಾಡಬೇಕು. ಎಸ್‌ಡಿಪಿಐ ಮತ್ತು ಪಿಎಫ್‌ಐಯನ್ನು ಬ್ಯಾನ್ ಮಾಡಬೇಕೆಂದು ಅಗ್ರಹಿಸಿದರು. ಬಜರಂಗದಳ ವಿಶಾಖ್ ರೈ ಸ್ವಾಗತಿಸಿ ಮಾತನಾಡಿ ಹಿಂದೆ ಕಾಶ್ಮೀರದಲ್ಲಿ ನಡೆದ ಘಟನೆ ಬೆಂಗಳೂರಿಗೆ ಬಂದಿದೆ. ಮುಂದೆ ಪುತ್ತೂರಿಗೆ ಬರಲು ದೂರ ಇಲ್ಲ. ಈ ನಿಟ್ಟಿನಲ್ಲಿ ಹಿಂದೂ ಸಮಾಜ ಎಚ್ಚೆತ್ತು ಕೊಳ್ಳಬೇಕಾಗಿದೆ ಎಂದರು. ಬಜರಂಗದಳ ಜಿಲ್ಲಾ ಸಂಚಾಲಕ ಶ್ರೀಧರ್‌ ತೆಂಕಿಲ, ಪ್ರಖಂಡ ಸಂಚಾಲಕ ಹರೀಶ್ ದೋಳ್ಪಾಡಿ, ವಿಶ್ವಹಿಂದೂ ಪರಿಷತ್ ಪ್ರಖಂಡ ಅಧ್ಯಕ್ಷ ಜನಾರ್ದನ ಬೆಟ್ಟ, ಜಯಂತ್‌ ಕುಂಜುರುಪಂಜ, ಮಹೇಶ್ ಬಜತ್ತೂರು, ಜಿತೇಶ್ ಬಲ್ನಾಡು, ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ಬಳಿಕ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆ ನಿಷೇಧಿಸುವಂತೆ ಪುತ್ತೂರು ಸಹಾಯಕ ಕಮೀಷನರ್ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.