Breaking News

 ಮುಡಿಪುನಡ್ಕ; ರಿಕ್ಷಾ ಚಾಲಕ ದಾಮೋದರ ಆಚಾರ್ಯರಿಗೆ ಶ್ರದ್ದಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಇತ್ತೀಚಿಗೆ ಕೌಡಿಚಾರಿನಲ್ಲಿ ನಡೆದ ಅಪಘಾತದಲ್ಲಿ ನಿಧನರಾದ ರಿಕ್ಷಾ ಚಾಲಕ, ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ದಾಮೋದರ ಆಚಾರ್ಯ ಕುಡ್ಚಿಲ ಇವರಿಗೆ  ಶ್ರದ್ದಾಂಜಲಿ ಸಭೆ ಆ.12 ರಂದು ಮುಡ್ಪಿನಡ್ಕ ಬಸ್ ನಿಲ್ದಾಣದ ವಠಾರದಲ್ಲಿ ನಡೆಯಿತು.
ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಪುಳಿತ್ತಡಿ ಮಾತನಾಡಿ ದಾಮೋದರ ಆಚಾರ್ಯರು ಒಬ್ಬ ಪರೋಪಕಾರಿ ವ್ಯಕ್ತಿಯಾಗಿದ್ದರು. ಪಂಚಾಯತ್ ಸದಸ್ಯರಾಗಿ ಉತ್ತಮ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ರಿಕ್ಷಾ ಚಾಲಕರಾಗಿ ಈ ಭಾಗದ ಜನರಲ್ಲಿ ಉತ್ತಮ ಭಾಂಧವ್ಯ ಇಟ್ಟುಕೊಂಡು ಸ್ನೇಹಪರ ವ್ಯಕ್ತಿಯಾಗಿದ್ದರು ಎಂದು ಅವರ ಗುಣಗಾನ ಮಾಡಿದರು.
 ಅವರ ಅಕಾಲಿಕ ಮರಣ ನಮಗೆಲ್ಲಾ ಅತೀವ ದು:ಖ ತಂದಿದೆ. ಅವರ ಅಗಲಿದ ದು:ಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮ ಅವರ ಮನೆಯವರಿಗೆ ಮತ್ತು ಕುಟುಂಬಸ್ಥರಿಗೆ ಕರುಣಿಸಲಿ.ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತ ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.ಸ್ಥಳೀಯ ವರ್ತಕರಾದ ಲಿಯೋ ಡಿ’ ಸೊಜಾ ಮೃತರ ಗುಣಗಾನ ಮಾಡಿದರು. ಮೃತರ ಗೌರವಾರ್ಥ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
       ಶ್ರೀ ಕೃಷ್ಣ ಭಜನಾ ಮಂದಿರದ ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಮುಡ್ಪಿನಡ್ಕ,ಸ್ಥಳೀಯ ವರ್ತಕರಾದ ವಸಂತ ಗೌಡ ಸಾರೆಪ್ಪಾಡಿ, ಶರೀಫ್ ವೈ.ಎಂ.ಕೆ,ಸ್ನೇಹ -ಸಂಗಮ ರಿಕ್ಷಾ ಚಾಲಕ ಮಾಲಕರ  ಸಂಘ ಮುಡ್ಪಿನಡ್ಕ ಮತ್ತು ಪಟ್ಟೆ ಇದರ ಇದರ ಪದಾಧಿಕಾರಿಗಳು, ಸದಸ್ಯರು, ಎಸ್.ಕೆ.ಫ್ರೆಂಡ್ಸ್ ಮುಡ್ಪಿನಡ್ಕ ಇದರ ಸದಸ್ಯರು, ಶ್ರೀ ಕೃಷ್ಣ ಭಜನಾ ಮಂಡಳಿ ಸದಸ್ಯರು,   ಊರವರು ಹಾಗೂ ಹಿತೈಷಿ ಬಂಢುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.