ಸ್ವತಃ ಶಾಸಕರೇ ಕೋವಿಡ್ ಪರೀಕ್ಷೆಗೊಳಪಡುವುದರೊಂದಿಗೆ ನೆಲ್ಲಿಕಟ್ಟೆಯಲ್ಲಿ ಉಚಿತ ಕೊರೋನಾ ತಪಾಸಣಾ ಶಿಬಿರಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1
  • ಕೋವಿಡ್ ಪರೀಕ್ಷೆಯೂ ಆರೋಗ್ಯ ಕಾಪಾಡುವ ಮಾರ್ಗ – ಸಂಜೀವ ಮಠಂದೂರು

ಪುತ್ತೂರು: ಕೋವಿಡ್ ಪರೀಕ್ಷೆಯೂ ಆರೋಗ್ಯ ಕಾಪಾಡುವ ಒಂದು ಮಾರ್ಗ ಹಾಗಾಗಿ ಎಲ್ಲರೂ ಕೋವಿಡ್ ಪರೀಕ್ಷೆ ಮಾಡಿಸಿಕಕೊಂಡು ತನ್ನ ಮತ್ತು ಸಮುದಾಯದ ಆರೋಗ್ಯ ಕಾಪಾಡಿಕೊಳ್ಳಿ ಎಂದು ಶಾಸಕ ಸಂಜೀವ ಮಠಂದೂರು ಹೇಳುವುದರ ಮೂಲಕ ತಾನೆ ಸ್ವತಃ ಕೋವಿಡ್ ಪರೀಕ್ಷೆಗೊಳಪಟ್ಟು ಸಾರ್ವಜನಿಕರಲ್ಲಿರುವ ಭಯದ ವಾತಾವರಣ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ. ಆ.೧೪ರಂದು ನೆಲ್ಲಿಕಟ್ಟೆ ಶಾಲೆಯಲ್ಲಿ ಉಚಿತ ಕೊರೋನಾ ತಪಾಸಣಾ ಶಿಬಿರದಲ್ಲಿ ತಾನೆ ಸ್ವತಃ ಕೋವಿಡ್ ಪರೀಕ್ಷೆಗೊಳಪಟ್ಟು ಶಿಬಿರಕ್ಕೆ ಚಾಲನೆ ನೀಡಿದರು. ಬೆಳಿಗ್ಗೆ ಗಂಟೆ ೧೦ ರಿಂದ ಸಂಜೆ ಗಂಟೆ ೫.೩೦ರ ತನಕ ಈ ಉಚಿತವಾಗಿ ರ್‍ಯಾಪಿಡ್ ಆಂಟಿಜನ್ ಪರೀಕ್ಷೆ ನಡೆಯಿತು.


ಕೋವಿಡ್ ಪರೀಕ್ಷೆಯೂ ಆರೋಗ್ಯ ಕಾಪಾಡುವ ಮಾರ್ಗ:
ಕೋವಿಡ್ ಪರೀಕ್ಷೆಯ ಆರಂಭದಲ್ಲಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಉಚಿತ ಆರೋಗ್ಯ ತಪಾಸಣೆ ಎಂದಾಗ ಜನರು ಮುಂದೆ ಬರುತ್ತಾರೆ. ಆದರೆ ಕೋವಿಡ್ ಪರೀಕ್ಷೆ ಎಂದಾಗ ಒಂದು ಹೆಜ್ಜೆ ಹಿಂದೆ ಹೋಗುತ್ತಾರೆ. ಆದರೆ ಜನರಲ್ಲಿ ಇದು ಕೂಡಾ ಆರೋಗ್ಯ ಕಾಪಾಡುವ ಒಂದು ಭಾಗ ಎಂದು ಅರಿವು ಮೂಡಿಸುವ ಅಗತ್ಯವಿದೆ ಎಂದ ಅವರು ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ ಎಲ್ಲಿ ನಮ್ಮನ್ನು ಅಸ್ಪ್ರಶ್ಯ ಭಾವನೆಯಿಂದ ನೋಡುತ್ತಾರೋ ಎಂಬ ಭಯವಿದೆ. ಅದನ್ನು ದೂರ ಮಾಡಬೇಕು. ತನ್ನ, ಮನೆಯವರ, ಮಿತ್ರರ ರಕ್ಷಣೆಯನ್ನು ಮಾಡುವ ನಿಟ್ಟಿನಲ್ಲಿ ಈ ಪರೀಕ್ಷೆ ಅಗತ್ಯ. ಸಮುದಾಯದಲ್ಲಿರುವ ಎಲ್ಲಾ ವ್ಯಕ್ತಿಗಳೂ ಆರೋಗ್ಯವಂತರಾಗಬೇಕು ಮತ್ತು ಸಮುದಾಯಕ್ಕೆ ಅದು ಹರಡಬಾರದು ಎಂದು ಪುತ್ತೂರು ವರ್ತಕರು, ಸಂಘ ಸಂಸ್ಥೆಗಳು ಸೇರಿಕೊಂಡು ಇಲಾಖೆಯೊಂದಿಗೆ ಸಹಕಾರ ನೀಡಿದ್ದಾರೆ ಎಂದರು.

ನಗರವನ್ನೇ ಆಯ್ದು ಕೊಳ್ಳಲು ಕಾರಣ ?
ಮಂಗಳೂರಿಂದ ಬಳಿಕದ ಬೆಳವಣಿಗೆಯಲ್ಲಿ ಪುತ್ತೂರು ೨ನೇ ಉಪವಿಭಾಗವಾಗಿದೆ. ನಾಲ್ಕು ತಾಲೂಕುಗಳ ಉಪವಿಭಾಗ ಆದ್ದರಿಂದ ಈ ನಾಲ್ಕು ತಾಲೂಕುಗಳು ಮತ್ತು ಪಕ್ಕದ ಕಾಸರಗೋಡಿನಿಂದ ಜನರು ಇಲ್ಲಿಗೆ ಬರುತ್ತಾರೆ. ಅವರು ಇಲ್ಲಿಗೆ ಬರುವಾಗ ಕೊರೋನಾ ಮುಕ್ತ ವಾತಾವರಣ ಇದ್ದರೆ ಇಲ್ಲಿಯ ವ್ಯವಹಾರಗಳು ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಬಹುದು ಎಂಬ ನಿಟ್ಟಿನಲ್ಲಿ ರ್‍ಯಾಪಿಡ್ ಆಂಟಿಜನ್ ಪರೀಕ್ಷೆಗೆ ಪುತ್ತೂರು ನಗರವನ್ನೇ ಆಯ್ದು ಕೊಂಡಿದ್ದೇವೆ.

ನೆಗೆಟಿವ್ ವರದಿಗೆ ಕೋವಿಡ್ ಇಲ್ಲವೆಂದು ಬಾವಿಸಬೇಡಿ:
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೀಪಕ್ ರೈ ಅವರು ಮಾತನಾಡಿ ರ್‍ಯಾಪಿಡ್ ಆಂಟಿಜನ್ ಪರೀಕ್ಷೆಯಲ್ಲಿ ವ್ಯಕ್ತಿಯ ವರದಿ ನೆಗೆಟಿವ್ ಬಂದರೆ ಆತನಿಗೆ ಕೋವಿಡ್ ಇಲ್ಲ ಎಂದು ಬಾವಿಸಬೇಡಿ. ಜ್ವರ, ಶೀತ ಲಕ್ಷಣದಲ್ಲಿದವರಿಗೆ ನೆಗೆಟಿವ್ ಬಂದರೆ ಅವರಿಗೆ ಗಂಟಲು ದ್ರವ ಮಾದರಿ ಸಂಗ್ರಹದ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. ತಹಶೀಲ್ದಾರ್ ರಮೇಶ್ ಬಾಬು ಕೆ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಸ್ವಾಗತಿಸಿ ವಂದಿಸಿದರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಹೈಲಾ, ರೋಟರಿ ಕ್ಲಬ್ ಪುತ್ತೂರಿನ ಮುಳಿಯ ಕೃಷ್ಣನಾರಾಯಣ, ಸಂತೋಷ್ ರೈ, ನಿವೃತ್ತ ಪ್ರಾಂಶುಪಾಲ ಜೇವಿಯರ್ ಡಿಸೋಜ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ರಫೀಕ್ ದರ್ಬೆ, ನಗರಸಭಾ ಸದಸ್ಯರಾದ ಶೀನಪ್ಪ ನಾಯ್ಕ್, ಪ್ರೆಮಲತಾ ನಂದಿಲ, ಗೌರಿ ಬನ್ನೂರು, ಪದ್ಮನಾಭ ನಾಕ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

ಶಾಸಕರ ಕೊವೀಡ್‌ ವರದಿ ನೆಗೆಟಿವ್‌ ಸ್ವತಃ ಕೋವಿಡ್‌ ಪರೀಕ್ಷಿಸಿದ ಶಾಸಕ ಸಂಜೀವ ಮಂಠದೂರುರವರ ಕೋವಿಡ್‌ ಟೆಸ್ಟ್‌ನಲ್ಲಿ ನೆಗೆಟಿವ್‌ ಬಂದಿರುತ್ತದೆ ಎಂದು ಮೂಲಗಳಿಂದ ತಿಳಿದಿದೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.