ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಮುತವರ್ಜಿ: ವಿಟ್ಲಕ್ಕೆ ಹೊಸ ಪ್ರೌಢ ಶಾಲೆ ಮಂಜೂರು- ಪುತ್ತೂರಿಗೆ ಬ್ರಾಹ್ಮಣ ಸಮುದಾಯ ಭವನ ಶೀಘ್ರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ವಿಟ್ಲಕ್ಕೆ ಹೊಸ ಪ್ರೌಢ ಶಾಲೆ ಮಂಜೂರುಗೊಂಡಿದ್ದು, ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಬ್ರಾಹ್ಮಣ ಸಮುದಾಯ ಕಟ್ಟಡ ನಿರ್ಮಾಣಕ್ಕೆ ರೂ. ೧.೫೦ ಕೋಟಿ ಅನುದಾನ ಶೀಘ್ರ ಬಿಡುಗಡೆಯಾಗಲಿದೆ.

ಶಾಸಕ ಕಚೇರಿಯಲ್ಲಿ ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು ಈ ವಿಚಾರವನ್ನು ಪ್ರಸ್ತಾಪಿಸಿದರು. ಹಲವು ಶೈಕ್ಷಣಿಕ ಕೇಂದ್ರವನ್ನು ಹೊಂದಿರುವ ಪುತ್ತೂರು ವಿಧಾನ ಸಭಾ ಕ್ಷೇತ್ರದ ವಿಟ್ಲ ಪಟ್ಟಣ ಪಂಚಾಯತ್‌ನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಪ್ರೌಢ ಶಾಲೆಯೂ ಇದೆ. ಆದರೆ ಸರಕಾರಿ ಪ್ರೌಢಶಾಲೆಗಾಗಿ ಆ ಭಾಗದ ಹೆತ್ತವರ ಅಪೇಕ್ಷೆಯಿತ್ತು. ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಲ್ಲಿ ಬೇಡಿಕೆ ಇಟ್ಟಾಗ ೨೦೧೯ರಲ್ಲಿ ವಿಟ್ಲ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿ ಬರುವ ವರ್ಷ ಈ ಕ್ಷೇತ್ರಕ್ಕೆ ಪ್ರೌಢಶಾಲೆಯನ್ನು ಮಂಜೂರುಗೊಳಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಸಮಗ್ರ ಕರ್ನಾಟಕ ಶಿಕ್ಷಣ ನೀತಿಯಡಿಯಲ್ಲಿ ೯ ಮತ್ತು ೧೦ನೇ ತರಗತಿಯನ್ನು ಮಂಜೂರು ಮಾಡಿ ಈ ಶೈಕ್ಷಣಿಕ ವರ್ಷದಿಂದಲೇ ಅಲ್ಲಿ ದಾಖಲಾತಿ ಆರಂಭಿಸಲು ಅನುಮತಿ ನೀಡುವ ಜೊತೆಗೆ ಪ್ರೌಢ ಶಾಲೆಗೆ ಮಂಜೂರು ಮಾಡಿದ್ದಾರೆ. ವಿಟ್ಲ ಪ್ರಾಥಮಿಕ ಶಾಲೆ ಜಿಲ್ಲೆಯಲ್ಲೇ ಮಾದರಿ ಶಾಲೆ. ಇಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ಲಾ ಮೂಲಭೂತ ಸೌಕರ್ಯ ಹೊಂದಿರುವ ಈ ಶಾಲೆಯಲ್ಲಿ ಆಂಗ್ಲಮಾದ್ಯಮವೂ ಇದೆ. ಒಟ್ಟು ವಿಟ್ಲ ಭಾಗಕ್ಕೆ ನೂತನವಾಗಿ ಪ್ರೌಢಶಾಲೆಯ ಮಂಜೂರಾಗಿ ಮುಂದಿನ ದಿನ ಸರಕಾರಿ ವ್ಯವಸ್ಥೆಯಡಿಯಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ದೊರೆಯಲಿದೆ ಎಂದು ಹೇಳಿದರು.

ಪುತ್ತೂರಿಗೆ ಬ್ರಾಹ್ಮಣ ಸಮುದಾಯ ಭವನ:
ಸಮಾಜದ ಎಲ್ಲಾ ವರ್ಗದವರಿಗೆ ಬೇರೆ ಬೇರೆ ನಿಗಮ ಮಂಡಳಿ ಮಾಡಿ ನ್ಯಾಯ ಕೊಡುವ ಸಂಗತಿಯನ್ನು ರಾಜ್ಯ ಸರಕಾರ ಮಾಡಿದೆ. ಅದರಂತೆ ರಾಜ್ಯದಲ್ಲಿರುವ ಬಡವ ಬ್ರಾಹ್ಮಣರಿಗೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆ ಆಗಿದ್ದು, ಅದರ ಅಧ್ಯಕ್ಷರಾಗಿ ಸಚ್ಚಿದಾನಂದ ಮೂರ್ತಿ ಅವರು ಪುತ್ತೂರಿನ ಬಗ್ಗೆ ಹೆಚ್ಚಿನ ಒಲವು ತೋರಿಸಿದ್ದಾರೆ. ಅತೀ ಹೆಚ್ಚು ಬ್ರಾಹ್ಮಣ ಸಮುದಾಯ ಇರುವ ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು ರೂ. ೧.೫೦ ಕೋಟಿ ಅನುದಾನ ಕೊಡುತ್ತೇನೆ ನೀವು ಜಾಗ ಹುಡುಕಿ ಕೊಡಿ ಎಂದು ತಿಳಿಸಿದ್ದಾರೆ. ಅದರಂತೆ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ೫೦ ಸೆಂಟ್ಸ್ ನಿವೇಶನ ಖಾದಿರಿಸುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದೇನೆ. ಜಾಗ ಗುರುತಿಸಿದ ತಕ್ಷಣ ಅನುದಾನ ಮಂಜೂರುಗೊಂಡು ಸಮುದಾಯ ಭವನದ ಕಟ್ಟಡವನ್ನು ಪ್ರಗತಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಪುತ್ತೂರಿನ ಅಭಿವೃದ್ಧಿ ದೃಷ್ಟಿಯಿಂದ ಏನೆಲ್ಲಾ ಅನುದಾನ ಲಭ್ಯವೋ ಅದನ್ನೆಲ್ಲಾ ಬಳಸಿಕೊಂಡು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಬನ್ನೂರು ಬಾವುದ ಕೆರೆ, ಶ್ರೀ ಮಹಾಲಿಂಗೇಶ್ವರ ದೇವಳದ ಕೆರೆ ಅಭಿವೃದ್ಧಿ, ನಗರಸಭೆಯ ಹೊಸ ಆಡಳಿತ ಕಟ್ಟಡದ ನಿರ್ಮಾಣವೂ ಶೀಘ್ರ ಆಗಲಿದೆ. ಈ ಸಂದರ್ಭದಲ್ಲಿ ತಾ.ಪಂ ಸದಸ್ಯೆ ಮೀನಾಕ್ಷಿ ಮಂಜುನಾಥ್, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮುಖಂಡ ಹರಿಪ್ರಸಾದ್ ಯಾದವ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.