Breaking News

ಕುಂಬ್ರ ಮರ್ಕಝುಲ್ ಹುದಾ ವಿಮೆನ್ಸ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಕುಂಬ್ರ: ಮರ್ಕಝುಲ್ ಹುದಾ ವಿಮೆನ್ಸ್ ಕಾಲೇಜಿನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಸರಳ ರೀತಿಯಲ್ಲಿ ಆ.15ರಂದು ನಡೆಯಿತು.

ಮರ್ಕಝುಲ್ ಹುದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಮನ್ಸೂರುರವರು ಮಾತನಾಡಿ ಭಾರತ ಭವ್ಯ ಪರಂಪರೆಯ ಸುಂದರ ನಾಡು. ಇಲ್ಲಿನ ಜಾತ್ಯಾತೀತ ವ್ಯವಸ್ಥೆ ಪ್ರಪಂಚದಲ್ಲೇ ಅತ್ಯಂತ ಮೇಲು. ಎಲ್ಲಾ ರಾಷ್ಟ್ರಗಳು ನಮ್ಮ ಸಂವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿವೆ. ಸಂವಿಧಾನದ ಉತ್ತಮ ಪರಿಕಲ್ಪನೆ ಭಾರತ ಸ್ವಾತಂತ್ರ್ಯಗೊಂಡದ್ದರಿಂದಲೇ ಸಾಕಾರಗೊಂಡಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ನಮ್ಮ ರಾಷ್ಟ್ರ ಮೇಧಾವಿಗಳಿಗೆ ಈ ದಿನದ ಗೌರವವನ್ನು ಸಮರ್ಪಿಸೋಣ. ಅವರ ಆದರ್ಶವನ್ನು ಪಾಲನೆ ಮಾಡಿ ನಮ್ಮ ಮುಂದಿನ ತಲೆಮಾರಿಗೆ ಆ ತ್ಯಾಗ ಮನೋಭಾವನೆಯನ್ನು ಮನವರಿಕೆ ಮಾಡಿಕೊಡೋಣ ಎಂದು ಹೇಳಿದರು.

ಮರ್ಕಝುಲ್ ಹುದಾ ಶರೀಅ ವಿಭಾಗದ ಉಪ ಪ್ರಾಂಶುಪಾಲ ಅಬ್ದುಲ್ ಜಲೀಲ್ ಸಖಾಫಿರವರು ಮಾತನಾಡಿ ಭಾರತದ ಜಾತ್ಯಾತೀತ ಕನಸನ್ನು ಕಾಪಾಡಬೇಕಾದದ್ದು ನಮ್ಮ ಕರ್ತವ್ಯ. ಮೇಲ್ವರ್ಗ, ಕೆಳವರ್ಗವೆಂಬ ಮೇಲು-ಕೀಲು ಭಾವನೆಯನ್ನು ದೂರಮಾಡಿ ಎಲ್ಲಾ ಧರ್ಮಗಳ ಒಗ್ಗೂಡುವಿಕೆಯಿಂದ ಸುಂದರ ವಾತಾವರಣದಲ್ಲಿ ಕೂಡಿ ಬಾಳೋಣ ಎಂದು ಹೇಳಿದರು.

ಮರ್ಕಝ್ ಆಡಳಿತ ಸಮಿತಿಯ ಸದಸ್ಯರಾದ ಕರೀಂ ಹಾಜಿ ಚೆನ್ನಾರ್, ಯೂಸುಫ್ ಹಾಜಿ ಕೈಕಾರ, ಗೌಸಿಯಾ ಯೂಸುಫ್ ಸಾಜ, ಇಕ್ಬಾಲ್ ಬಪ್ಪಳಿಗೆ, ಆಶಿಕ್ ಅಕ್ತಾರ್ ಕುಂಬ್ರ ಉಪಸ್ಥಿತರಿದ್ದರು. ಮರ್ಕಝ್ ಪಿಯು ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾರವರ ನೇತೃತ್ವದಲ್ಲಿ ರಾಷ್ಟ್ರಗೀತೆ ಹಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.