Breaking News

ನೂಜಿಬಾಳ್ತಿಲದಲ್ಲಿ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಕಡಬ: ನೂಜಿಬಾಳ್ತಿಲ ಗ್ರಾ.ಪಂ. ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರ ಹಾಗೂ ನೂಜಿಬಾಳ್ತಿಲ ಉ.ಹಿ.ಪ್ರಾ. ಶಾಲೆಯಲ್ಲಿ ಏಕಕಾಲದಲ್ಲಿ 74 ನೇ ಸ್ವಾತಂತ್ರ್ಯೋತ್ಸವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.

ನೂಜಿಬಾಳ್ತಿಲ ಗ್ರಾ. ಪಂ ನಲ್ಲಿ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್‌ರವರು ಧ್ವಜಾರೋಹಣ ನೇರವೇರಿಸಿ ಶುಭಹಾರೈಸಿದರು. ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ತಾ. ಪಂ. ಸದಸ್ಯ ಗಣೇಶ್ ಕೈಕುರೆಯವರು ಧ್ವಜಾರೋಹಣ ನೇರವೇರಿಸಿ ಶುಭಹಾರೈಸಿದರು. ಉ.ಹಿ.ಪ್ರಾ. ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಲಕ್ಷ್ಮಣಗೌಡ ಸಾಂತ್ಯಡ್ಕ ಧ್ವಜಾರೋಹಣ ನೇರವೇರಿಸಿ ಶುಭಹಾರೈಸಿದರು. ಗ್ರಾ. ಪಂ. ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಎ. ಸ್ವಾಗತಿಸಿ, ಕಾರ್‍ಯದರ್ಶಿ ಗುರುವ ಎಸ್ ವಂದಿಸಿದರು. ಗ್ರಾ.ಪಂ ಮಾಜಿ ಸದಸ್ಯರು ಸಿಬ್ಬಂದಿಗಳು, ಉಪಸ್ಥಿತರಿದ್ಧರು ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ ಸ್ವಾಗತಿಸಿ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಭಾರತಿ ವಂದಿಸಿದರು. ನೂಜಿಬಾಳ್ತಿಲ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಕಿಟ್ಟು ಕೆ. ಕಲ್ಲುಗುಡ್ಡೆ, ಸಿವಿಲ್ ಇಂಜಿನಿಯರ್ ದುರ್ಗಾಪ್ರಸಾದ್ ಕೆ.ಪಿ ಸೇರಿದಂತೆ ಬಾಲವಿಕಾಸ ಸಮಿತಿಯ ಸದಸ್ಯರು ಊರಿನ ಪ್ರಮುಖರು ಪಸ್ಥಿತರಿದ್ದರು. ಅಂಗನವಾಡಿ ಸಹಾಯಕಿ ಗೀತಾ ಸಹಕರಿಸಿದರು. ಉ. ಹಿ.ಪ್ರಾ ಶಾಲೆಯಲ್ಲಿ ಶಾಲಾ ಮುಖ್ಯೋಪದ್ಯಾಯಿನಿ ಶ್ರೀಮತಿ ಸುಂದರಿ ಸ್ವಾಗತಿಸಿ ಶಿಕ್ಷಕಿ ಗೀತಾ ವಂದಿಸಿದರು. ಶಾಲಾ ಎಸ್‌ಡಿಯಂಸಿ ಉಪಾಧ್ಯಕ್ಷೆ ಕಮಲಾಕ್ಷಿ ದೇವಪ್ಪ ಗೌಡ ಬರಮೇಲು ಎಸ್‌ಡಿಯಂಸಿ ಸದಸ್ಯರು ಶಾಲಾ ಶಿಕ್ಷಕರು ಉಪಸ್ಥಿತರಿದ್ಧರು ಶಾರೀರಿಕ ಶೀಕ್ಷಕ ಭಾಲಕೃಷ್ಣ ಯಂ. ಏಕಕಾಲದಲ್ಲಿ ನಡೆಯುವ ಮೂರು ಕಾರ್ಯಕ್ರಮವನ್ನು ನಿರ್ವಯಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.