ನಂದನ ವಿವಿಧ್ದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಮತ್ತು ನಂದನ ಪುತ್ತೂರು ಚಿಟ್ಸ್ ಹಾಗೂ ಹಗ್ಡೆ ಅರ್ಕೆಡ್ ನ ವತಿಯಿಂದ ಸ್ವಾತಂತ್ರ್ಯೊತ್ಸವ ಆಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  74ನೇ ಸ್ವಾತಂತ್ರ್ಯೊತ್ಸವವನ್ನು ನಂದನ ವಿವಿಧ್ದೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಮತ್ತು ನಂದನ ಪುತ್ತೂರು ಚಿಟ್ಸ್ ಹಾಗೂ ಹಗ್ಡೆ ಅರ್ಕೆಡ್ ನ ಎಲ್ಲಾ ವರ್ತಕರ ಸಹಯೋಗದೊಂದಿಗೆ ಆಚರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷರಾದ ಎಸ್ ದಾಮೋದರ್ ಪಾಟಾಳಿಯವರು ಎಲ್ಲರನ್ನೂ ಸ್ವಾಗತಿಸಿದರು.

ದ್ವಜಾರೋಹಣವನ್ನು ಸಮಾಜ ಸೇವಕರು,ನಿವೃತ್ತ ಹಿರಿಯ ಅರೋಗ್ಯ ನಿರೀಕ್ಷಕರು ಆದ ಕಿಟ್ಟಣ್ಣ ಗೌಡ ರವರು ನೆರವೇರಿಸಿದರು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿರುತ್ತದೆ ಅದನ್ನು ಉಳಿಸಿ ಬೆಳೆಸತಕ್ಕಂತಹ ಕಾರ್ಯ ಇಂದಿನ ಯುವ ಪೀಳಿಗೆಯಿಂದ ಆಗಬೇಕು ಎಂದು ಶುಭ ಹಾರೈಸಿದರು.ಸಂಸ್ಥೆಯ ಅಧ್ಯಕ್ಷರಾದ ಚಂದ್ರಶೇಖರ್ ಎಸ್ ರವರು ಸ್ವಾತಂತ್ರ್ಯೋತ್ಸವದ ಶುಭಾಶಯವನ್ನು ತಿಳಿಸಿದರು, ಧನ್ಯವಾದ ವನ್ನು ಸಂಸ್ಥೆಯ ಸಿಇಓ ಆದ ಸೋಮಶೇಖರ್ ರವರು ನೆರವೇರಿಸಿದರು.ಹೆಗ್ಡೆ ಅರ್ಕೆಡ್ ನ ವ್ಯವಹಾರ ಮಳಿಗೆ ಗಳಾದ, ನಂದನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ,ನಂದನ ಪುತ್ತೂರು ಚಿಟ್ಸ್ ,ಇ ಎನ್ ಟಿ ಕ್ಲಿನಿಕ್,ವಿಭಾ ಪ್ಯಾಶನ್, ಪರಮ್ ಕಂಪ್ಯೂಟರ್, ಅನುಭವ್ ಕನ್ಸ್ಟ್ರಕ್ಷನ್,ಉದ್ಭವ್ ಕನ್ಸ್ಟ್ರಕ್ಷನ್ ,ಶ್ರೀ ಲಕ್ಷ್ಮೀ ಮೆಟಲ್,ಡಿಬಿಸಿ ಕನ್ಸಲ್ಟೆಂಟ್,ಸುಪ್ರೀಮ್ ಟ್ರೇಡರ್ಸ್,ಪ್ರೊಫೆಷನಲ್‌ ಕೋರಿಯರ್ಸ್,ಅಶ್ಲೇಷ ಜ್ಯುವೆಲ್,ಸೋಜಾ ಮೆಟಲ್, ಚಂದು ಶೆಟ್ಟಿ, ವಿವೇಕ್ ಕ್ಯಾಂಟೀನ್, ಯುನಿಮನಿ,ಅರ್ ಕೆ ಜ್ಯುವೆಲ್ಲರಿ,ಶೆಣೈ ಸ್ಟೋರ್,ಆಶೀರ್ವಾದ ಸ್ಟುಡಿಯೋ ಇವರ ಉಪಸ್ಥಿತಿಯಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.