ಜನ್ಮದಿನವನ್ನು ಬುದ್ಧಿಮಾಂದ್ಯ ಮಕ್ಕಳೊಂದಿಗೆ ಆಚರಿಸಿ ಸ್ವಾತಂತ್ರೋತ್ಸವಕ್ಕೆ ಕಳೆ ನೀಡಿದ ಯುವಕ ನಿತೇಶ್ ಬೆದ್ರಾಳ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ವ್ಯಕ್ತಿಯ ಜನುಮ ದಿನ ಅಂದರೆ ಸಾಕು, ಆ ವ್ಯಕ್ತಿಯ ಮನೆಯವರಿಗೆ, ಹತ್ತಿರದವರಿಗೆ, ಫ್ರೆಂಡ್ಸ್‌ಗಳಿಗೆ ಸಂಭ್ರಮವೋ ಸಂಭ್ರಮ. ಆದರೆ ಪ್ರಸ್ತುತ ಈ ಮಹಾಮಾರಿ ಕೊರೋನಾದಿಂದ ಜನ್ಮದಿನ ಬಿಡಿ, ಎಲ್ಲಾ ವಿಜ್ರಂಭಣೆಯ ಆಚರಣೆಗೆ ಬ್ರೇಕ್ ನೀಡಿರುವುದು ನಿಜವಾಗಿಯೂ ಸತ್ಯದ ಸಂಗತಿಯಾಗಿದೆ. ಇಲ್ಲೊಬ್ಬ ಆಗಸ್ಟ್ ೧೫ರ ಸ್ವಾತಂತ್ರೋತ್ಸವ ದಿನದಂದು ಹುಟ್ಟಿದ ೨೩ ವರ್ಷದ ಯುವಕ ತನ್ನ ಜನ್ಮದಿನವನ್ನು ಬುದ್ಧಿಮಾಂದ್ಯ ಮಕ್ಕಳೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಹೌದು, ಈತ ಬೇರೆ ಯಾರೂ ಅಲ್ಲ. ಬೆದ್ರಾಳ ನಿವಾಸಿ ಲಕ್ಷ್ಮಣ ಪೂಜಾರಿ ಹಾಗೂ ಲೀಲಾವತಿ ದಂಪತಿ ಪುತ್ರನಾದ ನಿತೇಶ್‌ರವರು. ನಿತೇಶ್‌ರವರು ಪ್ರಸ್ತುತ ಪರ್ಲಡ್ಕದ ಎಸ್‌ಡಿಪಿ ಆಯುರ್ವೇದ ಫಾರ್ಮಾದಲ್ಲಿ ದುಡಿಯುತ್ತಿದ್ದು, ತನ್ನ ಸ್ನೇಹಿತ ಪ್ರಜ್ವಲ್ ಬೆದ್ರಾಳರವರೊಂದಿಗೆ ಜೊತೆಗೂಡಿ ಬನ್ನೂರಿನ ಪ್ರಜ್ಞಾ ಸ್ಪೆಷಲ್ ಸ್ಕೂಲ್‌ನಲ್ಲಿನ ಬುದ್ಧಿಮಾಂದ್ಯ ಮಕ್ಕಳಿಗೆ ತನ್ನ ತನ್ನ ಜನ್ಮದಿನದ ಪ್ರಯುಕ್ತ ಸಿಹಿತಿಂಡಿಯನ್ನು ನೀಡಿ ಅವರೊಂದಿಗೆ ಕಾಲ ಕಳೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಯಾವುದರ ಬಗ್ಗೆಯೂ ಪರಿವೆಯಿಲ್ಲದ ಬುದ್ಧಿಮಾಂದ್ಯ ಮಕ್ಕಳೂ ಕೂಡ ತಮ್ಮ ಜನ್ಮದಿನವನ್ನು ತನ್ನವರೊಂದಿಗೆ ವಿಜ್ರಂಭಣೆಯಿಂದ ಆಚರಿಸಬೇಕು ಎನ್ನುವ ಆಶಯವನ್ನು ಹೊಂದುವುದು ನಿಜವಾದರೂ, ಕಾಲ ಅದಕ್ಕೆ ಅವಕಾಶ ನೀಡದಿರುವುದು ಆ ಮಕ್ಕಳ ಬಾಳಿಗೆ ಜನುಮದಿನವು ಕೇವಲ ಭ್ರಮೆಯಾಗಿ ಬಿಟ್ಟಿದೆ ಎಂದಂತೂ ಸುಳ್ಳಲ್ಲ. ಆದರೂ ಪ್ರಜ್ಞಾ ಕೇಂದ್ರದ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಇಂತಹ ಮಕ್ಕಳನ್ನು ಪ್ರೀತಿಯಿಂದ ಸಲಹುದರೊಂದಿಗೆ ಆಶಾಕಿರಣವಾಗಿ ಗೋಚರಿಸುತ್ತಿರುವುದು ಕೂಡ ಅಷ್ಟೇ ಸತ್ಯವಾಗಿದೆ.

ಕೊರೋನಾ ವೈರಸ್ ಎಂಬ ಮಹಾಪಿಡುಗು ಐಶಾರಾಮ ಬದುಕಿಗೆ ಫುಲ್‌ಸ್ಟಾಪ್ ಹಾಕುತ್ತಾ, ಮಾನವೀಯ ಸಂಬಂಧಗಳನ್ನು ಎತ್ತಿಹಿಡಿಯುವಲ್ಲಿ ಸಫಲವಾಗಿದೆ ಎನ್ನಬಹುದು. ನಿತೇಶ್ ಎಂಬ ಯುವಕ ತನ್ನ ಜನ್ಮದಿನವನ್ನು ಇಂತಹ ಬುದ್ದಿಮಾಂದ್ಯ ಮಕ್ಕಳೊಂದಿಗೆ ಆಚರಿಸುವ ಮೂಲಕ ಆ ಮಕ್ಕಳಲ್ಲಿ ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಆಶಾಭಾವನೆಯನ್ನು ಭಿತ್ತಿದ್ದಾರೆ. ಅದರಂತೆ ಪ್ರತಿಯೋರ್ವರು ತಮ್ಮ ಜನ್ಮದಿನವನ್ನು ಒಳ್ಳೆಯ ಕಾರ್ಯಗಳಿಗೆ ವಿನಿಯೋಗಿಸುತ್ತಾ, ಆಡಂಬರದ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವ ಮೂಲಕ ಭಾರತ ದೇಶವನ್ನು ಸದೃಢ ದೇಶವನ್ನಾಗಿ ಮಾಡಬೇಕಾಗಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.