Breaking News

ಆತೂರು: ಆಯುಷ್ಮಾನ್ ಕಾರ್ಡ್ ಅಭಿಯಾನ

Puttur_Advt_NewsUnder_1
Puttur_Advt_NewsUnder_1


ರಾಮಕುಂಜ: ಬದ್ರಿಯಾ ಜುಮಾ ಮಸೀದಿ ಆತೂರು ಹಾಗೂ ಎಸ್‌ಕೆಎಸ್‌ಎಸ್‌ಎಫ್ ಆತೂರು ಇದರ ಆಶ್ರಯದಲ್ಲಿ ಭಾರತ ಹಾಗೂ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನವು ಬದ್ರಿಯಾ ಹಾಲ್ ಆತೂರುನಲ್ಲಿ ನಡೆಯಿತು.

ಆಯಷ್ಮಾನ್ ಕಾರ್ಡ್ ಅಭಿಯಾನಕ್ಕೆ ಸೈಯದ್ ಜುನೈದ್ ಜಿಪ್ರಿ ತಂಙಳ್‌ರವರು ದುಆ ನೆರವೇರಿಸಿ ಚಾಲನೆ ನೀಡಿದರು. ಬದ್ರಿಯಾ ಜುಮಾ ಮಸೀದಿ ಆತೂರು ಇದರ ಅಧ್ಯಕ್ಷ ಬಿ.ಕೆ ಅಬ್ದುಲ್ ರಝಾಕ್‌ರವರು ಅಧ್ಯಕ್ಷತೆ ವಹಿಸಿದರು. ಆತೂರು ರೇಂಜ್ ಇದರ ಪ್ರದಾನ ಕಾರ್ಯದರ್ಶಿ ಕೆ.ಎಮ್.ಸಿದ್ದೀಕ್ ಫೈಝಿ ಕರಾಯ, ಬದ್ರಿಯಾ ಜುಮಾ ಮಸೀದಿ ಆತೂರು ಇದರ ಕಾರ್ಯದರ್ಶಿ ಸಿರಾಜ್ ಬಡ್ಡಮೆ, ಬದ್ರಿಯಾ ಸ್ಕೂಲ್ ಮದರಸದ ಸದರ್ ಉಸ್ತಾದ್ ಹಂಝ ಸಖಾಫಿ, ಎಸ್‌ಕೆಎಸ್‌ಎಸ್‌ಎಫ್ ಆತೂರು ಶಾಖೆ ಅಧ್ಯಕ್ಷ ಬಿ.ಆರ್.ಅಬ್ದುಲ್ ಖಾದರ್, ಕಾರ್ಯದರ್ಶಿ ಸಿದ್ದೀಕ್ ಎಸ್.ಕೆ., ಆಡಳಿತ ಸಮಿತಿಯ ಸದಸ್ಯರು ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು. ಜಿಎಮ್ & ಶಾಹ ಸೈಬರ್ ಸೆಂಟರ್ ತಂಡದವರು ಆಯುಷ್ಮಾನ್ ಕಾರ್ಡ್ ಮಾಡಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.