ಇದ್ಪಾಡಿ ಅಂಗನವಾಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಇದ್ಪಾಡಿ ಅಂಗನವಾಡಿಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಗ್ರಾ.ಪಂ. ಮಾಜಿ ಸದಸ್ಯ ಚಂದ್ರಹಾಸ ರೈ ಬೊಳೊಡಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು ಸ್ವಾತಂತ್ರ್ಯ  ನಮ್ಮ ಹಕ್ಕು ನಾವೆಲ್ಲರೂ ಜಾತಿ, ಮತ, ಪಂಗಡವನ್ನು ಮರೆತು ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಜೀವೀಸಬೇಕು ಎಂದು ಹೇಳಿದರು.

ಸ್ವಾಗತ ಭಾಷಣದಲ್ಲಿ ಮಾತನಾಡಿದ ಇರ್ಷಾದ್ ಗಟ್ಟಮನೆ ಯವರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡಿ ಗಾಂಧೀಜಿ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜುಮ್ಮಾ ಮಸೀದಿ ಗಟ್ಟಮನೆ ಇದರ ಮಾಜಿ ಅಧ್ಯಕ್ಷ ಸಾಬು ಹಾಜಿ ಗಟ್ಟಮನೆ, ಮೊಯ್ದು ಕುಂಞ್ಞಿ ಗಟ್ಟಮನೆ, ಯೂಸುಫ್ ಇದ್ಪಾಡಿ, ಅಬ್ದುಲ್ಲಾ ಜಿ ಎಂ ಅಬುಧಾಬಿ, ಹೈದರ್ ಗಟ್ಟಮನೆ, ಮುಸ್ತಫಾ ಗಟ್ಟಮನೆ,  ಬಾತಿಷಾ,  ರಶೀದ್,  ಶರೀಫ್ ಗಟ್ಟಮನೆ, ಪೂರ್ಣಿಮಾ ಇದ್ಪಾಡಿ ಹಾಗೂ ಊರವರು ಉಪಸ್ಥಿತರಿದ್ದರು. ಗಟ್ಟಮನೆ ಗ್ರೀನ್ ಸ್ಟಾರ್  ಸದಸ್ಯರು  ಸಹಕರಿಸಿದರು. ಕಾರ್ಯಕ್ರಮವನ್ನು ಸಿನಾನ್ ಗಟ್ಟಮನೆಯವರು ನಿರೂಪಿಸಿ, ಶಿಕ್ಷಕಿ ಜಾನಕಿ ವಂದಿಸಿದರು.  

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.