ಬನ್ನೂರು ಅನಾರೋಗ್ಯಕ್ಕೆ ತುತ್ತಾದ ಮಹಿಳೆ ನಿಧನ| 3 ದಿನದ ಹಿಂದೆ ನಡೆದ ಕೋವಿಡ್ ಪರೀಕ್ಷೆ – ಮೃತಪಟ್ಟ ಬಳಿಕ ಪಾಸಿಟಿವ್ ವರದಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬನ್ನೂರು ಅನಾರೋಗ್ಯಕ್ಕೆ ತುತ್ತಾದ ಮಹಿಳೆಯೊಬ್ಬರು ಆ.೧೬ರಂದು ನಸುಕಿನ ಜಾವ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೂರು ದಿನದ ಹಿಂದೆ ಅವರ ಕೋವಿಡ್ ಪರೀಕ್ಷೆ ನಡೆಸಿದ್ದರೂ ಮೃತಪಟ್ಟ ಬಳಿಕ ಕೊರೋನಾ ಪಾಸಿಟಿವ್ ವರದಿ ಬಂದಿರುವ ಘಟನೆ ನಡೆದಿದೆ.

ಬನ್ನೂರು ಕಟ್ಟೆ ನಿವಾಸಿಯಾಗಿದ್ದ ಸುಮಾರು ೫೧ ವರ್ಷ ಪ್ರಾಯದ ಮಹಿಳೆ ಅನಾರೋಗ್ಯದ ನಿಮಿತ್ತ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ಆ ಸಂದರ್ಭ ಅವರಿಗೆ ಕೋವಿಡ್ ಪರೀಕ್ಷೆ ನಡೆಸಿದಾಗ ನೆಗೆಟಿವ್ ವರದಿ ಬಂದಿತ್ತು.ಆಸ್ಪತ್ರೆಯಿಂದ ಬಿಡುಗಡೆಗೊಂಡ ಅವರಿಗೆ ಮತ್ತೊಮ್ಮೆ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಆ.೧೩ರಂದು ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅವರು ಆ.೧೬ರಂದು ನಸುಕಿನ ಜಾವ ಮೃತಪಟ್ಟಿದ್ದರು.ಈ ನಡುವೆ ಆ.೧೩ರಂದು ಆಸ್ಪತ್ರೆಯಲ್ಲಿ ಅವರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು.ಆದರೆ ಇದೀಗ ಅವರು ಮೃತಪಟ್ಟ ಬಳಿಕ ಕೋವಿಡ್ ವರದಿ ಬಂದಿದ್ದು ಅವರಿಗೆ ಕೊರೋನಾ ಸೋಂಕು ಇದ್ದುದು ವರದಿಯಲ್ಲಿ ದೃಢಪಟ್ಟಿದೆ.ಈ ನಿಟ್ಟಿನಲ್ಲಿ ಕೋವಿಡ್ ನಿಯಮಾವಳಿಯಂತೆ ಪುತ್ತೂರು ರುದ್ರಭೂಮಿಯಲ್ಲಿ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು.ಮೃತರು ತಾಯಿ, ಪತಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಶಾಸಕರ ವಾರ್‌ರೂಮ್ ಸಹಕಾರ
ಮೃತ ಮಹಿಳೆಯ ಮುಖ ದರ್ಶನಕ್ಕೆ ಅವಕಾಶ
ಕೋವಿಡ್ ಸೊಂಕಿತ ಮಹಿಳೆಯ ಮೃತ ದೇಹದ ಅಂತಿಮ ದರ್ಶನಕ್ಕೆ ಮನೆ ಮಂದಿಗೆ ಅವಕಾಶ ಮಾಡಿಕೊಡಲು ಶಾಸಕರಿಗೆ ಮನವಿ ಮಾಡಲಾಗಿತ್ತು.ಸ್ಪಂದಿಸಿದ ಶಾಸಕ ಸಂಜೀವ ಮಠಂದೂರು ಮತ್ತು ವಾರ್‌ರೂಮ್‌ನ ಸಂಯೋಜಕ ನಗರಸಭಾ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್ ಅವರು ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ವ್ಯವಸ್ಥೆಗೆ ಕೋರಿದ್ದರು.ಅದರಂತೆ ಮೃತದೇಹದ ಮುಖ ಕಾಣುವ ರೀತಿಯಲ್ಲಿ ಪ್ಲಾಸ್ಟಿಕ್ ಕವರ್ ಮಾಡಿ ಮನೆ ಮಂದಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.ಕೋವಿಡ್‌ಗೆ ಬಲಿಯಾದರೆ ಮೃತ ದೇಹದ ಯಾವುದೇ ಭಾಗ ಕಾಣದ ರೀತಿಯಲ್ಲಿ ಪ್ಯಾಕ್ ಮಾಡಲಾಗುತ್ತದೆಯಾದರೂ ಇದೇ ಪ್ರಥಮ ಬಾರಿಗೆ ಕೋವಿಡ್‌ಗೆ ಬಲಿಯಾದ ಮಹಿಳೆಯ ಮೃತದೇಹದ ಮುಖ ದರ್ಶನಕ್ಕೆ ಅವಕಾಶ ಕಲ್ಲಿಸಿಕೊಡಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.