Breaking News

ಗುಂಡ್ಯ: ಸಿಮೆಂಟ್ ಸಾಗಾಟದ ಲಾರಿಗೆ ಬೆಂಕಿ| ಸ್ಥಳೀಯರ ಕಾರ್‍ಯಾಚರಣೆಯಿಂದ ಬೆಂಕಿ ಹತೋಟಿಗೆ; ಭಾಗಶ: ಸುಟ್ಟುಹೋದ ಲಾರಿ

Puttur_Advt_NewsUnder_1
Puttur_Advt_NewsUnder_1



ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ, ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿ ಚಲಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಲಾರಿ ಭಾಗಶಃ ಸುಟ್ಟು ಹೋದ ಘಟನೆ ಸೋಮವಾರ ಸಂಭವಿಸಿದೆ. ಸಮಯ ಪ್ರಜ್ಞೆ ಮೆರೆದ ಟ್ಯಾಂಕರ್ ಚಾಲಕನಿಂದಾಗಿ ಸಂಭವನೀಯ ದುರಂತವೊಂದು ತಪ್ಪಿದಂತಾಗಿದೆ.

ಎಸಿಸಿ ಕಂಪೆನಿಯ ಸಿಮೆಂಟ್‌ನ್ನು ಬಳ್ಳಾರಿಯಿಂದ ಮಂಗಳೂರು ಕಡೆಗೆ ಸಾಗಿಸುತ್ತಿದ್ದ ಲಾರಿ
ಬರ್ಚಿನಹಳ್ಳ ಎಂಬಲ್ಲಿ ಸಂಚರಿಸುತ್ತಿದ್ದಾಗ ಲಾರಿಯ ಎಡಗಡೆ ಚಕ್ರದಲ್ಲಿ ಬೆಂಕಿ ಕಾಣಿಸಿತ್ತು. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೇರೆ ವಾಹನಗಳ ಚಾಲಕರಿಂದ ಈ ಬಗ್ಗೆ ಮಾಹಿತಿ ಪಡೆದು ಲಾರಿಯನ್ನು ನಿಲ್ಲಿಸುವಷ್ಠರಲ್ಲಿ ಬೆಂಕಿ ಸ್ಪರ್ಶಗೊಂಡಿದ್ದ ಚಕ್ರ ಒಡೆಯಲ್ಪಟ್ಟಿದೆ. ಭಯಭೀತಗೊಂಡ ಲಾರಿ ಚಾಲಕ ಕಾಂತರಾಜ್ ಅದರ ಬಳಿಯಿಂದ ದೂರ ಓಡಿ ಪ್ರಾಣಾಪಾಯ ತಪ್ಪಿಸಿಕೊಂಡಿದ್ದಾರೆ.

ಸಮಯ ಪ್ರಜ್ಞೆ ಮೆರೆದ ಟ್ಯಾಂಕರ್ ಚಾಲಕ: ಲಾರಿಯಲ್ಲಿ ಬೆಂಕಿ ಗಮನಿಸಿದ ಅಡುಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರೊಂದರ ಚಾಲಕ ಸುರಕ್ಷತಾ ಸ್ಥಳದಲ್ಲಿ ತನ್ನ ಟ್ಯಾಂಕರನ್ನು ನಿಲ್ಲಿಸಿ ತನ್ನಲ್ಲಿದ್ದ ಅಗ್ನಿ ನಿಯಂತ್ರಕ ಸಿಲಿಂಡರ್ ಸಹಾಯದಿಂದ ಲಾರಿಯನ್ನು ಅಕ್ರಮಿಸಿದ್ದ ಬೆಂಕಿಯನ್ನು ನಿಯಂತ್ರಿಸಿದರು. ಆ ವೇಳೆಗೆ ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳ ಧಾವಿಸಿ ಬಂದು ಬೆಂಕಿಯನ್ನು ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾದರು. ಹೆದ್ದಾರಿಯಲ್ಲಿ ಲಾರಿಯೊಂದು ಅಪಘಾತಕ್ಕೀಡಾದ ದೃಶ್ಯವನ್ನು ಕಂಡು, ಸ್ವಯಂಪ್ರೇರಿತರಾಗಿ ತನ್ನ ಟ್ಯಾಂಕರ್ ಸುರಕ್ಷತೆಗೆಂದು ಹೊಂದಿದ್ದ ಅಗ್ನಿ ನಿಯಂತ್ರಕ ಸಿಲಿಂಡರ್ ಬಳಸಿ ಬೆಂಕಿ ನಂದಿಸಲು ಮುಂದಾದ ಟ್ಯಾಂಕರ್ ಚಾಲಕನ ಸಮಯ ಪ್ರಜ್ಞೆಯನ್ನು ಪೊಲೀಸ್ ಇಲಾಖೆ ಶ್ಲಾಸಿದೆ.



About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.