ಕುಂಬ್ರ ವರ್ತಕರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

 
ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ವರ್ತಕರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕುಂಬ್ರ ಜಂಕ್ಷನ್ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕುಂಬ್ರ ಕಟ್ಟೆಯ ಬಳಿ ಇರುವ ಅಶ್ವತ್ಥ ಕಟ್ಟೆ, ೨ ಬಸ್ ತಂಗುದಾಣ ,ಪೊಲೀಸ್ ಚೌಕಿ ಮತ್ತು ರಿಕ್ಷಾ ತಂಗುದಾಣದಲ್ಲಿರುವ ಕಸ ಗುಡಿಸಿ, ತೊಳೆದು ಸ್ವಚ್ಛಮಾಡಲಾಯಿತು.


ಸಂಘದ ಅಧ್ಯಕ್ಷ ಮಾಧವರೈ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಾಪಕ ಅಧ್ಯಕ್ಷ ಶಾಮ್ ಸುಂದರ ರೈ ಕೊಪ್ಪಳ,ಮಾಜಿ ಅಧ್ಯಕ್ಷ ಸುಂದರ್ ರೈ ಮಂದಾರ,ದಿವಾಕರ ಶೆಟ್ಟಿ , ಮೇಲ್ವಿನ್ ಮೊಂತೇರೋ, ಶಂಶುದ್ದೀನ್ ಎ. ಆರ್ ಹನೀಫ್ ಶೇಕಮಳೆ, ಪದ್ಮನಾಭ ಆಚಾರ್ಯ, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ವಾಸು ಪೂಜಾರಿ,ಅಶೋಕ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.